ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ... ಸೋಷಿಯಲ್ ಮೀಡಿಯಾದಲ್ಲಿ ಏನಂತಾ ಬರೆದಿದ್ದಾರೆ ಗೊತ್ತಾ?
ಬಾಲಿವುಡ್‌ನ `ದಬಾಂಗ್` ಸಲ್ಮಾನ್ ಖಾನ್ ಅವರ ಅಭಿಮಾನಿಗಳು `ಬಿಗ್ ಬಾಸ್ 13` ಪ್ರಾರಂಭವಾಗುವುದನ್ನು ಕುತೂಹಲದಿಂದ ಕಾಯುತ್ತಿದ್ದರೆ, ಈ ಮಧ್ಯೆ ಸಲ್ಮಾನ್ ಖಾನ್ ಬಗ್ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ ...
ನವದೆಹಲಿ: ಬಾಲಿವುಡ್‌ನ 'ದಬಾಂಗ್' ಸಲ್ಮಾನ್ ಖಾನ್ (Salman Khan) ಅವರ ಅಭಿಮಾನಿಗಳು 'ಬಿಗ್ ಬಾಸ್ 13' ಪ್ರಾರಂಭವಾಗಲಿ ಎಂದು ಕಾತುರದಿಂದ ಕಾಯುತ್ತಿದ್ದರೆ, ಈ ಮಧ್ಯೆ ಸಲ್ಮಾನ್ ಖಾನ್ ಬಗ್ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಇದೆ ಎಂಬ ಸುದ್ದಿ ಬಂದಿದೆ. ಈಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಯಲ್ ಆಗಿದೆ 'Bigg Boss'; ಬಿಗ್ ಬಾಸ್ ಮನೆಯೊಳಗಿನ ಕೆಲವು ಫೋಟೋಗಳು!
'ಸೋಪು' ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ(Student Organisation of Punjab University) ಎಂಬ ಗುಂಪಿನಿಂದ ಸಲ್ಮಾನ್ ಖಾನ್ ಅವರಿಗೆ ಈ ಬೆದರಿಕೆ ನೀಡಲಾಗಿದೆ. ಈ ಬೆದರಿಕೆಯನ್ನು ಗ್ಯಾರಿ ಶೂಟರ್ ಎಂಬ ಐಡಿ ನೀಡಿದೆ. ಈ ಬೆದರಿಕೆಯ ಸ್ಕ್ರೀನ್‌ಶಾಟ್ ಅನ್ನು ಈಗ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಬಹುದು.
ಈ ಪೋಸ್ಟ್ನಲ್ಲಿ, ಸಲ್ಮಾನ್ ಖಾನ್ ಅವರ ಫೋಟೋದ ಮೇಲೆ 'X'(ಕೆಂಪು ಬಣ್ಣದ X) ಅನ್ನು ಕಾಣಬಹುದು. "ಸಲ್ಮಾನ್ ಯೋಚಿಸಿ, ನೀವು ಭಾರತದ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು, ಆದರೆ ಬಿಷ್ಣೋಯ್ ಸಮಾಜ ಮತ್ತು ಸೋಪು ಪಕ್ಷದ ಕಾನೂನು ನಿಮಗೆ ಮರಣದಂಡನೆ ವಿಧಿಸಿದೆ. ನೀವು ಸೋಪು ನ್ಯಾಯಾಲಯದಲ್ಲಿ ತಪ್ಪಿತಸ್ಥರು" ಎಂದು ಬೆದರಿಕೆ ಹಾಕುವ ಬರಹಗಳನ್ನು ಬಳಕೆದಾರರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಸಲ್ಮಾನ್ ಖಾನ್ ನನ್ನು ಜೈಲಿಗೆ ಕಳುಹಿಸಿದ ಬಿಷ್ನೋಯಿಗಳ ತ್ಯಾಗದ ಬಗ್ಗೆ ಗೊತ್ತೆ?
ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕುತ್ತಿರುವುದು ಇದೇ ಮೊದಲೇನಲ್ಲ. 2018 ರಲ್ಲಿ ದರೋಡೆಕೋರ ಲಾರೆನ್ಸ್ ಬಿಶ್ನಾಯ್ ಅವರನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ನಂತರ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಬಿಗಿಗೊಳಿಸಲಾಯಿತು.