ಶಾರುಖ್ ʼಪಠಾಣ್ʼ, ʼಜವಾನ್ʼ ದಾಖಲೆ ಮುರಿಯತ್ತಾ ಸಲ್ಮಾನ್ ಭಾಯ್ ʼಟೈಗರ್ 3ʼ..! ಏನಂತೀರಾ.?
Tiger 3 : ಎಂಟು ವರ್ಷಗಳ ನಂತರ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ `ಟೈಗರ್ 3` ದೀಪಾವಳಿ ಹಬ್ಬದಂದು ರಿಲೀಸ್ ಆಗುತ್ತಿದೆ. ಇದರ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಸಲ್ಲು ಭಾಯ್ ಸಿನಿಮಾ ಪಠಾಣ್, ಜವಾನ್, ದಾಖಲೆ ಸರಿಗಟ್ಟುತ್ತಾ ಎನ್ನುವ ಚರ್ಚೆ ಶುರುವಾಗಿದೆ.
Salman khan tiger 3 : ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಈದ್ ಹಬ್ಬದಂದು ಸತತ ಬ್ಲಾಕ್‌ಬಸ್ಟರ್ ಮತ್ತು ಸೂಪರ್‌ಹಿಟ್‌ಗಳನ್ನು ಸಿನಿಮಾಗಳನ್ನು ನೀಡಿದ ಸಲ್ಲು ಭಾಯ್ ಕಳೆದ ದೀಪಾವಳಿ ಹಬ್ಬಕ್ಕೆ ʼಪ್ರೇಮ್ ರತನ್ ಧನ್ ಪಾಯೋʼ ಚಿತ್ರವನ್ನು ಬಿಡುಗಡೆ ಮಾಡಿದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 210 ಕೋಟಿಗಳನ್ನು ಸಂಗ್ರಹಿಸಿತ್ತು. ಸಧ್ಯ ಎಂಟು ವರ್ಷಗಳ ದೀರ್ಘ ಅವಧಿಯ ನಂತರ ದೀಪಾವಳಿ ಹಂಬದಂದು ಸಲ್ಲು ನಟನೆಯ ಟೈಗರ್ 3 ಸಿನಿಮಾ ಬಿಡುಗಡೆಯಾಗುತ್ತಿದ್ದು, ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.
'ಏಕ್ ಥಾ ಟೈಗರ್' (2012) ಮತ್ತು "ಟೈಗರ್ ಜಿಂದಾ ಹೈ' (2017) ಕ್ರಮವಾಗಿ ಈದ್ ಮತ್ತು ಕ್ರಿಸ್‌ಮಸ್ ಹಬ್ಬದಂದು ರಿಲೀಸ್ ಆಗಿದ್ದವು. ಸಧ್ಯ ಟೈಗರ್ 3 ದೀಪಾವಳಿ ಹಬ್ಬದ ಉಡುಗೂರೆಯಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ಇತ್ತೀಚಿಗೆ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ ಮತ್ತು ಟೀಸರ್ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ಅಲ್ಲದೆ, ಲೇಕೆ ಪ್ರಭು ಕಾ ನಾಮ್ ಹಾಡು ಅದ್ಭುತ ಮೋಡಿ ಮಾಡಿದೆ.
ಇದನ್ನೂ ಓದಿ:ಮೀನು ಬೇಟೆಗೆ ಹೊರಟ ನಾಯಕ ಗೌರಿಶಂಕರ್; ಕುತೂಹಲ ಹೆಚ್ಚಿಸಿದ 'ಕೆರೆಬೇಟೆ' ಮೋಷನ್ ಪೋಸ್ಟರ್
ಸಧ್ಯ ಟೈಗರ್ 3 ಸಿನಿಮಾ ಭಾರೀ ನಿರೀಕ್ಷೆ ಹೊಂದಿದೆ. ಬಿಗ್ ಸ್ಕ್ರೀನ್ ಮೇಲೆ ಖಾನ್ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಲ್ಲದೆ ಪಠಾಣ್ ಮತ್ತು ಜವಾನ್ ಸಿನಿಮಾದ ದಾಖಲೆಯನ್ನು ಸಲ್ಮಾನ್ ಸಿನಿಮಾ ಮುರಿಯುತ್ತಾ ಎನ್ನುವ ಕುತೂಹಲ ಹೆಚ್ಚಿದೆ. ಈಗಾಗಲೇ ಶಾರುಖ್ ಖಾನ್ ನಟನೆಯ ಈ ಎರಡು ಸಿನಿಮಾಗಳು 1000 ಕೋಟಿ ಗಡಿ ದಾಟಿವೆ. ಇನ್ನು ದೀಪಾವಳಿಗೆ ಬಿಡುಗಡೆಯಾಗಲಿರುವ ಟೈಗರ್ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಾ..? ಅಂತ ಕಾಯ್ದು ನೋಡಬೇಕಿದೆ.
ಭಾರಿ ನಿರೀಕ್ಷೆಯ ಆಕ್ಷನ್ ಥ್ರಿಲ್ಲರ್ ಟೈಗರ್ 3 ನವೆಂಬರ್ 12 ರಂದು ದೀಪಾವಳಿ ಹಬ್ಬದಂದು ಬಿಡುಗಡೆಯಾಗುತ್ತಿದೆ. IMAX ನಲ್ಲಿ ಹೆಚ್ಚಿನ ಸ್ಕ್ರೀನ್‌ನಲ್ಲಿ ಈ ಸಿನಿಮಾ ತೆರೆಕಾಣಲಿದೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ಹಾಗೂ ರಿದ್ಧಿ ಡೋಗ್ರಾ ನಟನೆಯ ಟೈಗರ್ 3 ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.