ನವದೆಹಲಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ (Salman Khan) 55 ವರ್ಷ ವಯಸ್ಸು. ಸಲ್ಮಾನ ಖಾನ್ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಂದು ಕಾಲದಲ್ಲಿ ಸಲ್ಮಾನ ಮದುವೆಯ ವಿಚಾರ ಬಹಳವಾಗಿ ಚರ್ಚೆ ಯಲ್ಲಿತ್ತು. ಅನೇಕ ನಟಿಯರ ಜೊತೆ ಸಲ್ಮಾನ ಹೆಸರು ಕೇಳಿ ಬಂದಿದ್ದು ಕೂಡಾ ಸುಳ್ಳಲ್ಲ. ಆದರೆ ಇದುವರೆಗೂ ಸಲ್ಮಾನ್ ಖಾನ್ ಮದುವೆಯಾಗಿಲ್ಲ (Salman khan marriage) . ಇದೆಲ್ಲದ್ದಕ್ಕಿಂತ ಶಾಕಿಂಗ್ ವಿಚಾರ ಎಂದರೆ ಒಂದು ಕಾಲದಲ್ಲಿ ಸಲ್ಮಾನ್ ಮದುವೆಗೆ ಎಲ್ಲಾ ಸಿದ್ದತೆಗಳು ನಡೆದಿತ್ತು. ಇನ್ನೇನು ಮಾಡುವೆ ಆಗಬೇಕು ಎನ್ನುವಷ್ಟರಲ್ಲಿ ಸಲ್ಮಾನ ತಮ್ಮ ಮನಸ್ಸು ಬದಲಾಯಿಸಿದ್ದರು. 


COMMERCIAL BREAK
SCROLL TO CONTINUE READING

ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಾಯಿಸಿದ ಸಲ್ಮಾನ್ : 
ಇದು 1999 ರಲ್ಲಿ ನಡೆದ ಘಟನೆ. ಸಲ್ಮಾನ್ ಖಾನ್ ಮತ್ತು ಸಾಜಿದ್ ನಾಡಿಯಾದ್ವಾಲಾ (Sajid Nadiadwala)  ಇಬ್ಬರು ಒಟ್ಟಿಗೆ ಮದುವೆಯಾಗಲು ನಿರ್ಧರಿಸಿದ್ದರು. ಇವರ ಮದುವೆಗೆ ಎಲ್ಲಾ ಸಿದ್ದತೆಗಳು ನಡೆದಿತ್ತು. ಎಲ್ಲಿಯವರೆಗೆ ಎಂದರೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೂಡಾ ಹಂಚಲಾಗಿತ್ತು.  ಆದರೆ ಅದೇನಾಯಿತೋ, ಕೊನೆ ಕ್ಷಣದಲ್ಲಿ ಸಲ್ಮಾನ್ ಖಾನ್ (Salman Khan) ಮಾತ್ರ ತಮ್ಮ ಮನಸ್ಸು ಬದಲಿಸಿಬಿಟ್ಟರು. ಮದುವೆ ನಿರ್ಧಾರದಿಂದಹಿಂದೆ ಸರಿದರು.  ಹೀಗಾಗಿ ಕೊನೆಯ ಕ್ಷಣದಲ್ಲಿ ಮದುವೆ ರದ್ದುಗೊಳಿಸಲಾಯಿತು. ಆದರೆ, ಸಾಜಿದ್ ತನ್ನ ನಿರ್ಧಾರವನ್ನು ಬದಲಿಸಲಿಲ್ಲ ಅವರ ಮಾಡುವೆ ನಿಗದಿಯಂತೆ ನೆರವೇರಿತು. 


ಇದನ್ನೂ  ಓದಿ : Jitendra Shinde Viral Posts: ಬಿಗ್ ಬಿ ಪೊಲೀಸ್ ಅಂಗರಕ್ಷಕ ಜಿತೇಂದ್ರ ಸಿಂಧೆ ವರ್ಗಾವಣೆ, ವಾರ್ಷಿಕ 1.5ಕೋಟಿ ವೇತನ ಸುದ್ದಿಗಳ ಹಿನ್ನೆಲೆ ತನಿಖೆ ಆರಂಭ


ಸಲ್ಮಾನ್ ಸ್ನೇಹಿತ ಬಿಚ್ಚಿಟ್ಟ ಸತ್ಯ : 
'ದಿ ಕಪಿಲ್ ಶರ್ಮಾ ಶೋ' ನಲ್ಲಿ  (The Kapil Sharma Show) ಈ ವಿಚಾರವನ್ನು ಸಾಜಿದ್ ನಡಿಯಾದ್ವಾಲಾ (Sajid Nadiadwala) ಬಹಿರಂಗಪಡಿಸಿದ್ದಾರೆ. 1999 ರಲ್ಲಿ ಸಲ್ಮಾನ್ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಸಲ್ಮಾನ್ ಬಳಿ ಹುಡುಗಿಯೂ ರೆಡ್ ಇದ್ದರು. ಆದರೆ ನಾನು ಹುಡುಗಿ ಹುಡುಕಬೇಕಾಗಿತ್ತು ಎಂದು ಸಾಜಿದ್ ಹೇಳಿದ್ದಾರೆ.   ಆದರೆ ಸಲ್ಮಾನ್ ನಿರ್ಧಾರದಂತೆ ಮದುವೆಯ ಸಿದ್ದತೆಗಳನ್ನು ನಡೆಸಲಾಗಿತ್ತು ಎಂದು ಸಾಜಿದ್ ಹೇಳಿದ್ದಾರೆ. 


ಸಾಜಿದ್ ಗೆ ಕೂಡ ಮದುವೆ ಮಂಟಪದಿಂದ ಓಡಿಹೋಗುವ ಉಪಾಯ ನೀಡಿದ ಸಲ್ಮಾನ್ : 
ಮದುವೆಯ ಸಿದ್ದತೆಗಳು ಎಲ್ಲವೂ  ನಡೆದಿತ್ತು. ಮದುವೆಗೆ ಇನ್ನೇನು 5 ದಿನಗಳು ಇರ್ಬೇಕು ಎನ್ನುವಷ್ಟರಲ್ಲಿ ಸಲ್ಮಾನ್ ಮದುವೆಯಾಗುವ ಮನಸ್ಸಿಲ್ಲ ಎಂದಿದ್ದರು. ಆದರೆ ಸಾಜಿದ್ ಮಾಡುವೆ ನಿಗದಿಯಂತೆ ನೆರೆವೇರಿತು. ಆದರೆ, ಸಾಜಿದ್ ಮದುವೆ ದಿನ ಮಂಟಪಕ್ಕೆ ಬಂದ ಸಲ್ಮಾನ್,  ಹಿಂದೆ ಕಾರ್ ನಿಂತಿದೆ ಈಗಲೂ ಓದಿ ಹೋಗಬಹುದು ಎಂದು ಸಲಹೆ ನೀಡಿದ್ದರಂತೆ.  ಈ ಎಲ್ಲಾ ವಿಚಾರಗಳನ್ನು ಸಾಜಿದ್ ಶೋನಲ್ಲಿ ಹಂಚಿ ಕೊಂಡಿದ್ದಾರೆ.  


ಇದನ್ನೂ  ಓದಿ : ಅಮಿತಾಭ್ ಬಚ್ಚನ್ ಪರ್ಸನಲ್ ಬಾಡಿಗಾರ್ಡ್ ಸಂಬಳ ಕೇಳಿದರೆ ನಿಮಗೆ ಶಾಕ್ ಆಗುತ್ತೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.