Kim Kardashian Salman Khan Viral Video: ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮದುವೆಯ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅಂಬಾನಿ ಕುಟುಂಬದ ಅದ್ದೂರಿ ಮದುವೆ ಸಮಾರಂಭಕ್ಕೆ ದೇಶ ಮಾತ್ರವಲ್ಲದೆ ವಿದೇಶದ ಹಲವು ಗಣ್ಯರು ಭಾಗಯಾಹಿದ್ದರು. ಈ ನಡುವೆ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್‌ನಿಂದ ಹಿಡಿದು ಹಾಲಿವುಡ್ ವರೆಗೂ ಸೆಲೆಬ್ರಿಟಿಗಳು ಸಿಕ್ಕಾಪಟ್ಟೆ ಮೋಜು ಮಸ್ತಿ ಮಾಡಿರುವುದು ಗೊತ್ತೇ ಇದೆ. ಆದರೆ ಈ ಮದುವೆಯಲ್ಲಿ ಅಭಿಮಾನಿಗಳ ಗಮನ ಸೆಳೆದ ನಟ ಸಲ್ಮಾನ್ ಖಾನ್. ಇತ್ತೀಚೆಗೆ, ಸಲ್ಮಾನ್‌ ಐಶ್ವರ್ಯಾ ರೈ ಅವರೊಂದಿಗೆ ಇರುವ ಫೋಟೋ ವೈರಲ್ ಆಗಿತ್ತು, ಆ ಪೋಟೊದಲ್ಲಿ ಇಬ್ಬರೂ ಒಟ್ಟಿಗೆ ಪೋಸ್ ನೀಡುತ್ತಿರುವ ರೀತಿ AI ನಿಂದ ರಚಿಸಲಾಗಿದ್ದು, ಅಭಿಮಾನಿಗಳು ಈ ಫೋಟೊ ನೋಡಿ ನಾನಾ ರೀತಿ ಕಾಮೆಂಟ್‌ ಮಾಡುತ್ತಿದ್ದರು. 


ಇದನ್ನೂ ಓದಿ: ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್‌ ಮಾಡಿದ್ದ ಸ್ಟಾರ್‌ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?


ಐಶ್ವರ್ಯಾ ರೈ ಜೊತೆಗಿನ ಫೋಟೋ ವೈರಲ್ ಆದ ನಂತರ ಇದೀಗ ಸಲ್ಮಾನ್ ಖಾನ್ ಅಮೆರಿಕಾದ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕಾರ್ಡಶಿಯಾನ್ ಜೊತೆಗಿನ ವಿಡಿಯೋ ಸುದ್ದಿಯಲ್ಲಿದೆ. ಇದರಲ್ಲಿ ಕಿಮ್ ಅತಿಥಿಗಳಿಂದ ಸುತ್ತುವರಿದಿರುವುದನ್ನು ಕಾಣಬಹುದು. ಆಕೆ ತನ್ನ ಕುರ್ಚಿಯ ಮೇಲೆ ಕುಳಿತಿದ್ದು, ಅಂಬಾನಿ ಕುಟುಂಬದವರೊಂದಿಗೆ ಮಾತುಕತೆ ನಡೆಸುವಾಗ ಸಲ್ಮಾನ್ ಖಾನ್ ಕಿಮ್ ಅವರನ್ನು ನೋಡುತ್ತಿರುವ ರೀತಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ರೆಡ್ಡಿಟ್ ಬಳಕೆದಾರು ಹಂಚಿಕೊಂಡಿರುವ ಈ ವೀಡಿಯೊದಲ್ಲಿ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. ಒಬ್ಬ ಬಳಕೆದಾರರು ಬರೆದಿದ್ದಾರೆ, ಸಲ್ಮಾನ್ ಭಾಯ್ ಅವರ ಗಮನ ಎಲ್ಲಿದೆ? ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, "ಸಲ್ಮಾನ್ ಭಾಯ್ 4ಕೆಯಲ್ಲಿ ಸಿಕ್ಕಿಬಿದ್ದಿದ್ದಾರೆ" ಎಂದು ಬರೆದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ