ಮುಂಬೈ: ಸಲ್ಮಾನ್ ಶಾರುಖ್ ಜೋಡಿ ಎಂದರೆ ಸುಮ್ನೆನಾ ಇಬ್ಬರು ಸೇರಿ ನಟಿಸಿದ ಫಿಲಂ ಗಳಂತೂ ಬಾಲಿವುಡ್ ನಲ್ಲಿ ಧೂಳೆಬ್ಬಿಸುತ್ತವೆ ಅಷ್ಟರ ಮಟ್ಟಿಗೆ ಈ ಜೋಡಿಯ ಕ್ರೇಜ್. ಈಗ ಬಿಡುಗಡೆಯಾಗಿರುವ ಜೀರೋ ಚಿತ್ರದ ಟಿಸರ್ ಇದೇ ಕಾರಣ ಎಲ್ಲರ ಗಮನ ಸೆಳೆಯುತ್ತಿದೆ ಎನ್ನಬಹುದು. 


COMMERCIAL BREAK
SCROLL TO CONTINUE READING

ಈ ಟಿಸರ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್ ಶಾರುಖ್ ಜೊತೆ ಸೇರಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಈ ವೀಡಿಯೋವನ್ನು ಯುಟೂಬ್ ನಲ್ಲಿ ಕೇವಲ ಒಂದೇ ದಿನದಲ್ಲಿ 26 ಲಕ್ಷಕ್ಕೂ ಅಧಿಕ ಬಾರಿ ಇದನ್ನು ವೀಕ್ಷಿಸಲಾಗಿದೆ. 


ಈದ್ ಹಬ್ಬದ ಪ್ರಯುಕ್ತ  ಬಿಡುಗಡೆಯಾಗಿರುವ ಟೀಸರ್ ಈಗ ಚಿತ್ರದ ಮೇಲೆ ಬಾರಿ ನೀರಿಕ್ಷೆ ಹೆಚ್ಚಿಸಿದೆ. ಸ್ವತಃ  ಶಾರುಖ್ ಖಾನ್ ಅವರ ಹೋಮ್ ಪ್ರೊಡಕ್ಷನ್ ರೆಡ್ ಚಿಲ್ಲಿ ಎಂಟರ್ಟೈನಮೆಂಟ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಮುಖ್ಯ ತಾರಾಗಣದಲ್ಲಿ ಶಾರುಖ್ ಖಾನ್ ಅನುಷ್ಕಾ ಶರ್ಮಾ ಕತ್ರಿನಾ ಕೈಫ್ ಅವರು ಅಭಿನಯಿಸಿದ್ದಾರೆ.ಈ ಚಿತ್ರವನ್ನು ಆನಂದ್ ರೈಯವರು  ನಿರ್ದೇಶಿಸಿದ್ದಾರೆ.