Sam: ನಾಗಚೈತನ್ಯ ಜೊತೆ ಮತ್ತೆ ಒಂದಾಗುವ ಸುಳಿವು ನೀಡಿದ್ರಾ ಸಮಂತಾ..? ಪೋಸ್ಟ್ ವೈರಲ್
Samantha Viral Post: ಸಮಂತಾ ನಾಗಚೈತನ್ಯ ಮತ್ತೆ ಒಂದಾಗುತ್ತಾರೆ ಎನ್ನುವ ಸಾಕಷ್ಟು ಸುದ್ದಿಗಳು ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿದ್ದವು.. ಆದರೆ ಇದೀಗ ಅವರೇ ಆ ಸುಳಿವು ನೀಡಿದ್ದಾರೆ.
Samantha-Nag Chaitanya: ಸಮಂತಾ ದಕ್ಷಿಣ ಭಾರತದ ಸಿನಿಪ್ರೇಮಿಗಳ ನೆಚ್ಚಿನ ನಟಿ. ನಟಿ ತನ್ನ ಜೀವನದಲ್ಲಿ ಅನಾರೋಗ್ಯ ಸೇರಿದಂತೆ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಆದರೆ ಅದನ್ನು ಮೀರಿ ಸ್ಯಾಮ್ ಪ್ರೇಕ್ಷಕರ ಪ್ರೀತಿಯನ್ನು ಪಡೆಯುತ್ತಿದ್ದಾರೆ.
ಆದರೆ ನಾಗ ಚೈತನ್ಯ ಜೊತೆಗಿನ ಮುರಿದು ಬಿದ್ದಿರುವ ಸಂಬಂಧವನ್ನು ಮತ್ತೆ ಕಟ್ಟಿಕೊಳ್ಳಲು ಸಮಂತಾ ಮುಂದಾಗಿದ್ದಾರೆ ಎಂಬ ಮಾತುಗಳು ಕೆಲ ದಿನಗಳಿಂದ ಕೇಳಿ ಬರುತ್ತಿದ್ದು, ಸಮಂತಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೊಸ ಪುರಾವೆಗಳಿವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಬಾಲಯ್ಯ ಹೊಸ ಚಿತ್ರದ ಪೋಸ್ಟರ್ ಲೀಕಾಯ್ತಾ? ಅಸಲಿ ಕಹಾನಿಯಾದರು ಏನು?
ಸಮಂತಾ ತನ್ನ ಪಕ್ಕೆಲುಬಿನ ಬಳಿ ಮಾಜಿ ಪತಿ ನಾಗ ಚೈತನ್ಯ ಅವರ ಅಡ್ಡಹೆಸರು ಚೇಯ್ ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಒಂದು ದಿನದ ಹಿಂದೆ ಸಮಂತಾ ಪೋಸ್ಟ್ ಮಾಡಿದ ಹೊಸ ಫೋಟೋಗಳಲ್ಲಿ, ತನ್ನ ಟ್ಯಾಟೂವನ್ನು ತೋರಿಸುತ್ತಿರುವುದನ್ನು ಕಾಣಬಹುದು. ಈ ಹಿಂದೆ ಆಕೆ ಅದನ್ನು ತೆಗೆದಿದ್ದಾಳೆ ಎಂದು ವರದಿಯಾಗಿತ್ತು. ಸಮಂತಾ ಇನ್ನೂ ಟ್ಯಾಟೂ ತೆಗೆಯದಿರುವುದು ಮುರಿದು ಬಿದ್ದಿರುವ ಸಂಬಂಧ ಮತ್ತೆ ಮುಂದುವರೆಯುವ ಸೂಚನೆ ಎಂಬುದೇ ಅಭಿಮಾನಿಗಳ ಮಾತು.
ಇದೆಲ್ಲವನ್ನು ಹೊರತುಪಡಿಸಿ ನಟಿ ಸಮಂತಾ ಮಯೋಸಿಟಿಸ್ ಚಿಕಿತ್ಸೆಯ ಬಗ್ಗೆ ಅವರು ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಮಂತಾ ಕ್ರೈಯೊಥೆರಪಿ ಎಂಬ ಚಿಕಿತ್ಸೆ
ವಿಧಾನವನ್ನು ಬಳಸಿದ್ದಾರೆ.. ಮೈನಸ್ 150 ಡಿಗ್ರಿ ಫ್ಯಾರನ್‌ಹೀಟ್‌ನ ತಾಪಮಾನವನ್ನು ರೋಗಿಗಳಿಗೆ ಆಗಾಗ್ಗೆ ಒದಗಿಸಿದಾಗ ರೋಗನಿರೋಧಕ ಶಕ್ತಿ, ರಕ್ತ ಸಂಚಾರ ಮತ್ತು ಹಾರ್ಮೋನ್ ಉತ್ಪಾದನೆ ಹೆಚ್ಚುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ-Tiger 3: ಸಲ್ಲು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್..! ಟೈಗರ್ 3 ನಿಂದ ಹೊಸ ಪ್ರೋಮೋ ಔಟ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.