naga chaitanya-Shobita: ನಾಗ ಚೈತನ್ಯ 2017 ರಲ್ಲಿ ನಟಿ ಸಮಂತಾ ಅವರನ್ನು ವಿವಾಹವಾದರು. ಆದರೆ ಇಬ್ಬರ ಮಧ್ಯೆ ಮೂಡಿದ ಭಿನ್ನಾಭಿಪ್ರಾಯಗಳಿಂದ 2021 ರಲ್ಲಿ ವಿಚ್ಛೇದನ ಪಡೆದರು. ಸಮಂತಾ ಅವರಿಂದ ದೂರವಾಗಿರುವ ನಾಗ ಚೈತನ್ಯ ತೆಲುಗು ಹುಡುಗಿ ಸೋಭಿತಾ ಅವರಿಗೆ ಹತ್ತಿರವಾಗಿ.. ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈ ಜೋಡಿ ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೋಭಿತಾ-ನಾಗ ಚೈತನ್ಯ ಅವರ ನಿಶ್ಚಿತಾರ್ಥ ಸಮಾರಂಭ ಆಗಸ್ಟ್ 8 ರಂದು ನಾಗಾರ್ಜುನ ಅವರ ನಿವಾಸದಲ್ಲಿ ಸಾಧಾರಣವಾಗಿ ಕೊನೆಗೊಂಡಿತು. ಕುಟುಂಬ ಸದಸ್ಯರು ಮಾತ್ರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  


ಇದನ್ನೂ ಓದಿ-ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!


ಸದ್ಯದ ಮಾಹಿತಿ ಪ್ರಕಾರ ನಾಗ ಚೈತನ್ಯ-ಶೋಭಿತಾ ಮದುವೆಗೆ ತಯಾರಿ ಶುರುವಾಗಿದೆ. ಸೆಲೆಬ್ರಿಟಿಗಳ ಮದುವೆ ಎಂದರೇ ಸಾಮಾನ್ಯ ವಿಚಾರವಲ್ಲ. ವಿಶೇಷ ವಿನ್ಯಾಸದ ಬಟ್ಟೆ ಮತ್ತು ಆಭರಣಗಳನ್ನು ಸಿದ್ಧಪಡಿಸಬೇಕು. ಈ ಹಿನ್ನಲೆಯಲ್ಲಿ ಅಕ್ಕಿನೇನಿ ಮನೆಯಲ್ಲಿ ಮದುವೆಯ ಸಡಗರ ಶುರುವಾಗಿದೆ ಎನ್ನಲಾಗಿದೆ. 


ಇದನ್ನೂ ಓದಿ-ಮುಖದಲ್ಲಿ ರಕ್ತ, ಕೈಯಲ್ಲಿ ಲಾಂಗ್... ಮಾಸ್ ಅವತಾರದಲ್ಲಿ ನಿರೂಪ್ ಭಂಡಾರಿ


ನಾಗ ಚೈತನ್ಯ ಮತ್ತೊಮ್ಮೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ಮುಂದಾಗಿದ್ದಾರೆ. ಅವರು ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ಪ್ರಸಿದ್ಧ ಸ್ಥಳಗಳನ್ನು ನೋಡುತ್ತಿದ್ದಾರೆ. ಇಲ್ಲವೇ ವಿದೇಶದಲ್ಲಿ ಮದುವೆ ಸಮಾರಂಭ ಏರ್ಪಡಿಸುವ ಚಿಂತನೆಯಲ್ಲಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ದಿನಾಂಕ ನಿಗದಿಯಾಗಲಿದೆ. ಇನ್ನು ಆರು ತಿಂಗಳಲ್ಲಿ ನಾಗ ಚೈತನ್ಯ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 


ನಾಗ ಚೈತನ್ಯ ಸದ್ಯ ತಾಂಡೇಲ್ ಸಿನಿಮಾ ಮಾಡುತ್ತಿದ್ದಾರೆ. ತಾಂಡೇಲ್ ಚಂದು ಮೊಂಡೇಟಿ ನಿರ್ದೇಶನದ ಭಾವನಾತ್ಮಕ ಪ್ರೇಮ ಕಥೆ. ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ನಿರ್ಮಾಣ ಮಾಡುತ್ತಿದ್ದಾರೆ. ದಸರಾ ಉಡುಗೊರೆಯಾಗಿ ತಾಂಡೇಲ್ ಚಿತ್ರ ಅಕ್ಟೋಬರ್ 11 ರಂದು ಬಿಡುಗಡೆಯಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ