ನವದೆಹಲಿ: ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯರ ಮದುವೆ ವಿಚ್ಚೇದನದ ವದಂತಿಗಳು ತೀವ್ರವಾಗಿರುವ ಬೆನ್ನಲ್ಲೇ ಈಗ ನಾಗಾರ್ಜುನ್ ಹಾಗೂ ನಾಗಚೈತನ್ಯ ಅಮೀರ್ ಖಾನ್ ಗಾಗಿ ಆಯೋಜಿಸಿದ್ದ ಪಾರ್ಟಿಯನ್ನು ತಪ್ಪಿಸಿಕೊಂಡಿರುವುದು ಈ ಊಹಾಪೋಹಗಳಿಗೆ ಇನ್ನಷ್ಟೂ ಪುಷ್ಟಿ ನೀಡಿದಂತಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಸ್ಪರ್ಧಿಯ ಕೆನ್ನೆ ಕಚ್ಚಿದ ಕನ್ನಡ ನಟಿ..!


ನಟಿ ಸಮಂತಾ (Samantha) ಸಾಮಾಜಿಕ ಜಾಲತಾಣದ ಹ್ಯಾಂಡಲ್‌ಗಳಿಂದ ತನ್ನ ಉಪನಾಮವನ್ನು ಕೈಬಿಟ್ಟ ನಂತರ ಈ ವಂದತಿ ಪ್ರಾರಂಭವಾಯಿತು.ನಾಗಾರ್ಜುನ ಮತ್ತು ಅವರ ಕುಟುಂಬವು ಇತ್ತೀಚೆಗೆ ಅಮೀರ್ ಖಾನ್‌ಗೆ ಔತಣಕೂಟವನ್ನು ಆಯೋಜಿಸಿದ ಒಂದು ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆದರೆ ಸಮಂತಾ ಇದರಲ್ಲಿ ನಾಪತ್ತೆಯಾಗಿದ್ದಳು. ನಾಗ ಚೈತನ್ಯನ ಇತ್ತೀಚೆಗೆ ಬಿಡುಗಡೆಯಾದ ಲವ್ ಸ್ಟೋರಿ ಚಿತ್ರದ ಪ್ರಚಾರಕ್ಕಾಗಿ ಅಮೀರ್ ಹೈದರಾಬಾದ್‌ನಲ್ಲಿದ್ದರು.


ಇದನ್ನೂ ಓದಿ: ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ ಗಾಸಿಪ್: ಬೋಲ್ಡ್ ನಟನೆಯಿಂದ ಹಾಳಾಯ್ತಾ ಸಂಬಂಧ?


ಈಗ ವೈರಲ್ ಆಗಿರುವ ಚಿತ್ರದಲ್ಲಿ, ನಟರು ಕೇಕ್ ಕತ್ತರಿಸುವ ಸಮಾರಂಭದಲ್ಲಿ ಭಾಗವಹಿಸುವುದನ್ನು ಕಾಣಬಹುದು ಮತ್ತು ಅದರಲ್ಲಿ - ನಾಗಾರ್ಜುನ, ಅವರ ಪತ್ನಿ ಅಮಲಾ, ಪುತ್ರರಾದ ಚೈತನ್ಯ ಮತ್ತು ಅಖಿಲ್, ಮತ್ತು ಲವ್ ಸ್ಟೋರಿ ನಿರ್ದೇಶಕ ಶೇಖರ್ ಕಮ್ಮುಲ ರನ್ನು ಕಾಣಬಹುದು.


ಇತ್ತೀಚೆಗೆ, ಸಮಂತಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರಗಳ ಸರಣಿಯನ್ನು ಅಪ್ಲೋಡ್ ಮಾಡಿದ್ದು, ಅಲ್ಲಿ ಅವರು ನಟಿಯರು ಮತ್ತು ಸ್ನೇಹಿತರಾದ ತ್ರಿಷಾ ಕೃಷ್ಣನ್ ಮತ್ತು ಕೀರ್ತಿ ಸುರೇಶ್ ಅವರ ಜೊತೆ ಪಾರ್ಟಿ ಮಾಡುತ್ತಿರುವುದನ್ನು ಕಂಡು ತಮ್ಮ ಅಭಿಮಾನಿಗಳಿಗೆ 'ಹುಡುಗಿ ಬಾಂಧವ್ಯ'ದ ಪ್ರಮುಖ ಗುರಿಗಳನ್ನು ನೀಡಿದರು.


ಈ ಮೊದಲು, ಸಮಂತಾ ಈ ವರ್ಷದ SIIMA ಪ್ರಶಸ್ತಿ ಸಮಾರಂಭದಲ್ಲಿಯೂ ಗೈರಾಗಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.