ತೆಲಂಗಾಣ ರಾಜಕೀಯಕ್ಕೆ ನಟಿ ಸಮಂತಾ ಎಂಟ್ರಿ! ಆ ಪಕ್ಷದಿಂದ ಸ್ಪರ್ಧೆ?
Samantha Political Entry: ಖುಷಿ ಚಿತ್ರದ ನಂತರ ಸಮಂತಾ ಸಿನಿಮಾಗಳಿಗೆ ಗ್ಯಾಪ್ ಕೊಟ್ಟಿದ್ದು ಗೊತ್ತೇ ಇದೆ. ತೆಲುಗು ರಾಜ್ಯಗಳಲ್ಲಿ ಸಮಂತಾ ಬಗ್ಗೆ ವದಂತಿಯೊಂದು ವೈರಲ್ ಆಗಿದೆ. ಅಂದರೆ ಸಮಂತಾ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ.
Samantha Rut Prabhu : ಸಮಂತಾ ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ಒಬ್ಬರು. ನಟನೆಯ ಮೂಲಕ ಜನರ ಮನಗೆದ್ದ ಸ್ಯಾಮ್ ಈಗ ಮತ್ತೊಂದು ಸೆನ್ಸೇಷನಲ್ ಸ್ಟೋರಿ ಮೂಲಕ ಸುದ್ದಿಯಲ್ಲಿದ್ದಾರೆ. ಶೀಘ್ರದಲ್ಲೇ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂಬ ವರದಿಗಳಿವೆ. ಕೆಲವು ವರದಿಗಳ ಪ್ರಕಾರ, ಸಮಂತಾ ತೆಲಂಗಾಣ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಅಂದು ಸ್ಟಾರ್ ಹೀರೋಯಿನ್ ವಿಜಯಶಾಂತಿಯಂತೆ ಇಂದಿನ ಸ್ಟಾರ್ ಹೀರೋಯಿನ್ ಸಮಂತಾ ಪೊಲಿಟಿಕಲ್ ಎಂಟ್ರಿ ಕೊಡುತ್ತಾರೆ ಎಂದು ಎಲ್ಲರೂ ಯೋಚಿಸುತ್ತಿದ್ದಾರೆ.
ತೆಲಂಗಾಣ ಸಿಎಂ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ನೇತೃತ್ವದ ರಾಜಕೀಯ ಪಕ್ಷವಾದ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್)ಗೆ ಸಮಂತಾ ಸೇರಲಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.
ಇದನ್ನೂ ಓದಿ : ಕರಣ್ ಜೋಹರ್ ಮುಂದಿನ ಸಿನಿಮಾದಲ್ಲಿ ಸಲ್ಲು ಜತೆ ರೊಮ್ಯಾನ್ಸ್ ಮಾಡೋ ಆ ಸೌತ್ ನಟಿ ಯಾರು?
ಇತ್ತೀಚೆಗಷ್ಟೇ ತಾವು ನಟಿಸಿದ್ದ 'ಯಶೋದಾ', 'ಶಾಕುಂತಲಂ' ಚಿತ್ರಗಳ ಫ್ಲಾಪ್ ನಂತರ ಸಮಂತಾ 'ಖುಷಿ' ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ.
ತೆಲುಗು ನಟ ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ನಟಿ ಸಮಂತಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಯಾಮ್.. ಸದ್ಯ 'ಸಿಟಾಡೆಲ್' ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿಯು ಅಮೆಜಾನ್ ಪ್ರೈಮ್ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ.
ಆದರೆ ತೆಲಂಗಾಣ ರಾಜಕೀಯಕ್ಕೆ ಎಂಟ್ರಿಕೊಟ್ಟ ನಂತರ ಸಮಂತಾ ಸಿನಿಮಾಗಳಿಗೆ ಗುಡ್ ಬೈ ಹೇಳಲು ಬಯಸಿದ್ದಾರಂತೆ ಎಂಬ ಮಾತುಗಳು ಸಹ ಸಿನಿವಯದಲ್ಲಿ ಕೇಳಿಬರುತ್ತಿವೆ. ಸಮಂತಾ ರಾಜಕೀಯಕ್ಕೆ ಬಂದರೆ ಖಂಡಿತಾ ಹೆಚ್ಚು ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ : "ಅಟ್ಲಿ ನನಗೆ ಮೋಸ ಮಾಡಿದ್ದಾರೆ.." ಜವಾನ್ ನಾಯಕಿಯ ಶಾಕಿಂಗ್ ಹೇಳಿಕೆ!!
ಮತ್ತೊಂದೆಡೆ ಸಮಂತಾ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದ ಕಾರಣ ರಾಜಕೀಯಕ್ಕೆ ಎಂಟ್ರಿಯಾಗುವುದು ನಿಜ ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವು ಚಿತ್ರಗಳಿಗೆ ನೀಡಿದ್ದ ಡೇಟ್ ಹಿಂಪಡೆದು ಮುಂಗಡ ಹಣವನ್ನೂ ವಾಪಸ್ ಪಡೆದಿದ್ದಾರಂತೆ ಎಂದು ಹೇಳಲಾಗಿದೆ.
ಈ ಹಿಂದೆ ಟಾಲಿವುಡ್ ನ ಸ್ಟಾರ್ ಹೀರೋಯಿನ್ ರಾಣಿಂಚಿ ವಿಜಯಶಾಂತಿ ತೆಲಂಗಾಣ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತೆಲಂಗಾಣ ಪಕ್ಷವನ್ನು ಸ್ಥಾಪಿಸಿದರು ಮತ್ತು ನಂತರ ಟಿಆರ್‌ಎಸ್ ಸಂಸದರಾಗಿ ಗೆದ್ದರು. ಪ್ರಸ್ತುತ ಅವರು ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ಇದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.