Samantha Ruth Prabhu : ಸ್ಟೈಲಿಷ್‌ ಐಕಾನ್‌ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ ʼಪುಷ್ಪಾʼ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು. ಈ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿತ್ತು. ʼಪುಷ್ಪಾʼದ ಮತ್ತೊಂದು ವಿಶೇಷವೆಂದರೆ ಸಮಂತಾ ರುತ್ ಪ್ರಭು ಅವರ ʼಊ ಅಂತೀಯಾ ಮಾವʼ ಹಾಡು. ಈ ಹಾಡು ಪುಷ್ಪಾ ಹಿಟ್‌ ಆಗಲು ಒಂದು ರಿತಿಯಲ್ಲಿ ಬೂಸ್ಟ್‌ ನೀಡಿತ್ತು. ಇದೀಗ ʼಪುಷ್ಪಾ 2ʼ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್‌ ಮಾಡೋಕೆ ಒಪ್ಪಿಗೆ ನೀಡಿಲ್ಲ ಎನ್ನವು ಮಾತು ಹೇಳಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಐಟಂ ಸಾಂಗ್ಸ್‌ ಮಾಡಲು ಇಷ್ಟಪಡದ ಸಮಂತಾ ಪುಷ್ಪಾ ಸಿನಿಮಾದ ಮೂಲಕ ಮೋಡಿ ಮಾಡಿದ್ದರು. ಆದ್ರೆ ಇದೀಗ ನಿರ್ದೇಶಕ ಸುಕುಮಾರ್ ಅವರ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂಬ ವರದಿಗಳು ಬಂದಿವೆ. ಆದ್ರೆ ಇದು ನಿಜವಲ್ಲ ಅಂತ ಸಮಂತಾ ಟೀಂ ಉತ್ತರ ನೀಡಿದೆ. ಆದ್ರೆ, ಅನೇಕ ವರದಿಗಳ ಪ್ರಕಾರ, ಚಿತ್ರನಿರ್ಮಾಪಕರು ಸಮಂತಾ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ ಸಹ ವ್ಯರ್ಥವಾಗಿದೆ ಅಂತ ಹೇಳಲಾಗುತ್ತಿದೆ. ಈ ಹಿಂದೆ ಸಮಂತಾ ಪುಷ್ಪಾ ಟ್ರ್ಯಾಕ್‌ಗಾಗಿ 5 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ʼಊ ಅಂತೀಯಾʼ ಸಾಂಗ್‌ ದೊಡ್ಡ ಹಿಟ್ ಆಗಿತ್ತು. ಎಲ್ಲಾ ಪಾರ್ಟಿಗಳಲ್ಲೂ ಈ ಹಾಡು ಸದ್ದು ಮಾಡಿತ್ತು. 


ಇದನ್ನೂ ಓದಿ: ‘Unlocked’ ಕೊರಿಯನ್ ಥ್ರಿಲ್ಲರ್ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ


ಇನ್ನು ಸಮಂತಾ ʼಸಿಟಾಡೆಲ್ʼ, ʼಶಾಕುಂತಲಂʼ ಮತ್ತು ʼಕುಶಿʼ ಸೇರಿದಂತೆ ಹಲವು ಹಿಟ್‌ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರುಸ್ಸೋ ಬ್ರದರ್ಸ್ ಹೆಲ್ಮ್ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಅಭಿನಯದ ಹಾಲಿವುಡ್ ಆವೃತ್ತಿಯ ʼಸಿಟಾಡೆಲ್ʼ ನಲ್ಲಿ ಸಮತಾ, ರಾಜ್ ಮತ್ತು ಡಿಕೆ ಮತ್ತೆ ಒಂದಾಗಲಿದ್ದಾರೆ. ಈ ತಿಂಗಳ ಆರಂಭದಲ್ಲಿ 'ಸಿಟಾಡೆಲ್' ಚಿತ್ರೀಕರಣವನ್ನು ಪ್ರಾರಂಭವಾಗಿದೆ. ಈ ಸರಣಿಯಲ್ಲಿ ವರುಣ್ ಧವನ್ ಕೂಡ ನಟಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರಗಳಲ್ಲಿ ʼಪುಷ್ಪ 2ʼ ಸಹ ಒಂದಾಗಿದ್ದು, ಅಲ್ಲು ಅರ್ಜುನ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.