ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ಬಿಎಂ ಕೃಷ್ಣೇಗೌಡ(80) ಅವರು ಇಂದು ಕೊರೋನಾದಿಂದ ನಿಧನರಾಗಿದ್ದಾರೆ.


COMMERCIAL BREAK
SCROLL TO CONTINUE READING

ಕೆಲ ದಿನಗಳ ಹಿಂದೆ ಕೃಷ್ಣೇಗೌಡ(BM Krishne Gowda) ಅವರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Shruti Haasan On Parents Devorce: ತಂದೆ-ತಾಯಿಯ ವಿಚ್ಛೇದನೆಯಿಂದ ಖುಷಿಯಾಗಿದ್ದೆ, ಬೆಚ್ಚಿಬೀಳಿಸುವ ಹೇಳಿಕೆ ನೀಡಿದ Shruti Haasan


ಕೊರೋನಾ(Corona) ಗೆದ್ರೂ.. ನಟ ಕೃಷ್ಣೆಗೌಡ ಅವರು, ಸಾವನ್ನು ಗೆಲ್ಲಲಾಗದೇ, ಕೊರೋನಾಗೆ ಬಲಿಯಾಗಿದ್ದಾರೆ. 


ಇದನ್ನೂ ಓದಿ : Shah Rukh Khan ಇನ್ಸ್ಟಾಗ್ರಾಮ್ನಲ್ಲಿ ಕೇವಲ 6 ಜನರನ್ನಷ್ಟೇ Follow ಮಾಡ್ತಾರೆ, ಅವರು ಯಾರು ಗೊತ್ತೇ!


ಕನ್ನಡದ  ಸೀರಿಯಲ್ ಮತ್ತು ಸಿನಿಮಾ(Kannada Cinema)ಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.  ಕೃಷ್ಣೇಗೌಡ ಅವರು ರಂಗಭೂಮಿ ಹಿನ್ನಲೆ ಹೊಂದಿರುವ ಕಾರಣದಿಂದ ಸಾಕಷ್ಟು ನಾಟಕಗಳಲ್ಲೂ ಬಣ್ಣ ಹಚ್ಚಿದ್ದಾರೆ. 


ಇದನ್ನೂ ಓದಿ : Real Star Upendra : ನಾನು ಕರ್ನಾಟಕದ ಸಿಎಂ ಆಗಬೇಕು : ನಟ ಉಪೇಂದ್ರ


ಕಳೆದ ಕೆಲವು ವಾರಗಳಿಂದ ಕೊರೋನಾಗೆ ಸ್ಯಾಂಡಲ್‌ವುಡ್‌(Sandalwood)ನ ಸರಿ ಸುಮಾರು ಹತ್ತುಕ್ಕೂ ಹೆಚ್ಚು ಕಲಾವಿದರು ಬಲಿಯಾಗಿದ್ದಾರೆ. ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್​. ಮಂಜುನಾಥ್​, ಪುಟ್ಟಣ್ಣ ಕಣಗಾಲ್​ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಸೇರಿದಂತೆ ಹಲವು ಕಲಾವಿದರು ನಿಧನರಾಗಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.