ಬೆಂಗಳೂರು: ಸ್ಯಾಂಡಲ್​ವುಡ್​ ನ ಖ್ಯಾತ ನಟ ಚಿರಂಜೀವಿ ಸರ್ಜಾ (Chiranjeevi Sarja) ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 39 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಶನಿವಾರದಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆಗಲೇ ಇವರಿಗೆ ಹೃದಯಾಘಾತ ಸಂಭವಿಸಿತ್ತು ಎಂದು ತಿಳಿದು ಬಂದಿದೆ. ವೈದ್ಯರು ಅವರನ್ನು ಉಳಿಸಿಕೊಳ್ಳಲು ಯತ್ನಿಸಿದರೂ ಕೂಡ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ,ಧೀಡೀರ್ ಉಸಿರಾಟದ ಸಮಸ್ಯೆಗೆ ಇದುವರೆಗೆ ಕಾರಣ ಏನೆಂದು ತಿಳಿದುಬಂದಿಲ್ಲ ಈಗ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಡಲಾಗಿದೆ. 



ಆಸ್ಪತ್ರೆಗೆ ಮೂಲಗಳು ಹೇಳುವಂತೆ ಈಗ ಅವರ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ ಎನ್ನಲಾಗಿದೆ. 2008 ರಲ್ಲಿ ಅವರು ಸುಂದರಾಜ್ ಅವರ ಪುತ್ರಿ ನಟಿ ಮೇಘನಾರಾಜ್ ಅವರನ್ನು ಮದುವೆಯಾಗಿದ್ದರು. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ಸಾವನ್ನಪ್ಪಿರುವುದು ಕನ್ನಡ ಚಲನಚಿತ್ರರಂಗಕ್ಕೆ ಆಘಾತ ತರಿಸಿದೆ.ಅವರ ನಿಧನಕ್ಕೆ ಈಗ ಪ್ರಿಯಾಮಣಿ ಟ್ವೀಟ್ ಮೂಲಕ ಕಂಬನಿ ಮೀಡಿದಿದ್ದಾರೆ.


2009ರಲ್ಲಿ ವಾಯುಪುತ್ರ ಸಿನಿಮಾ ಮೂಲಕ ಕನ್ನಡ ಬೆಳ್ಳಿ ತೆರೆಗೆ ಪ್ರವೇಶಿಸಿದ ಚಿರಂಜೀವಿ ಸರ್ಜಾ  ಆಟಗಾರ, ಆಕೆ, ಚಂದ್ರಲೇಖಾ,ಅಜಿತ್,ರುದ್ರತಾಂಡವ,ರಾಮ ಲೀಲಾ,ಆದ್ಯಾ, ಖಾಕಿ,ಸಿಂಗ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು