ರಾಜ್ಯದಲ್ಲಿನ ನೇಕಾರರ ಪರ ಧ್ವನಿ ಎತ್ತಿದ ನಟ ದುನಿಯಾ ವಿಜಯ್
ಸಾಂಕ್ರಾಮಿಕ ಕೊರೊನಾ ವೈರಸ್ ಹಿನ್ನಲೆಯಲ್ಲಿ ನೇಕಾರ ಬದುಕು ಕಷ್ಟಕರವಾಗಿರುವುದರಿಂದಾಗಿ ಇತ್ತೀಚಿಗಷ್ಟೇ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ಆಶಿಕಾ ರಂಗನಾಥ್ ನೇಕಾರರಿಗೆ ಸಹಾಯ ಮಾಡಲು ಜನರನ್ನು ಕೋರಿದ್ದರು.
ಬೆಂಗಳೂರು: ಸಾಂಕ್ರಾಮಿಕ ಕೊರೊನಾ ವೈರಸ್ ಹಿನ್ನಲೆಯಲ್ಲಿ ನೇಕಾರ ಬದುಕು ಕಷ್ಟಕರವಾಗಿರುವುದರಿಂದಾಗಿ ಇತ್ತೀಚಿಗಷ್ಟೇ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ಆಶಿಕಾ ರಂಗನಾಥ್ ನೇಕಾರರಿಗೆ ಸಹಾಯ ಮಾಡಲು ಜನರನ್ನು ಕೋರಿದ್ದರು.
ಇದಾದ ಬೆನ್ನಲ್ಲೇ ಈಗ ನಟ ದುನಿಯಾ ವಿಜಯ್ ಕೂಡ ನೇಕಾರ ಪರವಾಗಿ ಧ್ವನಿ ಎತ್ತಿದ್ದಾರೆ, ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಖಾದಿ ಉತ್ಪನ್ನದ ಜುಬ್ಬಾ ಧರಿಸಿ ಪೋಸ್ ಕೊಟ್ಟಿರುವ ಪೋಸ್ಟ್ ನಲ್ಲಿ ವಿಜಯ್ ಈ ರೀತಿಯಾಗಿ ಬರೆದುಕೊಂಡಿದ್ದಾರೆ.
ನಾವು ಮಾತಾಡೋ ಭಾಷೆ ಕನ್ನಡ, ಕುಡಿಯೋ ನೀರು ಕಾವೇರಿ ನಿಂತಿರೋ ನೆಲ ಕರ್ನಾಟಕವಾಗಿರೋವಾಗ. ನಾವು ಹಾಕೋ ಬಟ್ಟೆ ಕೂಡ ಕನ್ನಡವಾಗಿರಬೇಕು. ಇದು ನಮ್ಮ ಜನ...
Posted by Duniya Vijay on Tuesday, 20 October 2020
"ನಾವು ಮಾತಾಡೋ ಭಾಷೆ ಕನ್ನಡ, ಕುಡಿಯೋ ನೀರು ಕಾವೇರಿ ನಿಂತಿರೋ ನೆಲ ಕರ್ನಾಟಕವಾಗಿರೋವಾಗ. ನಾವು ಹಾಕೋ ಬಟ್ಟೆ ಕೂಡ ಕನ್ನಡವಾಗಿರಬೇಕು. ಇದು ನಮ್ಮ ಜನ ನಮ್ಮ ನೆಲದಲ್ಲಿ ಬೆಳೆದ ಹತ್ತಿಯಿಂದ ಚರಕದಲ್ಲಿ ನೂಲು ತೆಗೆದು ಕೈಮಗ್ಗದಲ್ಲಿ ನೆೈಯ್ದ ಬಟ್ಟೆ ನಮ್ಮ ಜನರ ಬೆವರಿನ ಫಲ. ಕೊರೋನಾ ಪಿಡುಗು ಶುರುವಾದಾಗಿನಿಂದ ದೇಸಿ ಸಂಸ್ಥೆಯ ನೇಕಾರರು ತಯಾರಿಸುವ ಬಟ್ಟೆ ಸುಮಾರಿದೆ. ಹನಿಹನಿಗೂಡಿದರೆ ಹಳ್ಳ ಅನ್ನೋಹಾಗೆ ನೀವೆಲ್ಲರೂ ಒಂದೊಂದು ಬಟ್ಟೆ ಖರೀದಿಸಿದರೂ ನಮ್ಮ ನೇಕಾರರ ಬೆವರಿನ ದುಡಿಮೆಗೆ ಹೆಗಲಾಗಿ ನಿಂತಂತೆ. ಬನ್ನಿ ಸೌತ್ ಎಂಡ್ ಸರ್ಕಲ್, ಸೀತಾಸರ್ಕಲ್, ಕೆಂಗೇರಿ ಮತ್ತು ಮಲ್ಲೇಶ್ವರಂನ ‘ದೇಸಿ ‘ ಅಂಗಡಿಗಳಲ್ಲಿ ಕೈಮಗ್ಗದ ಬಟ್ಟೆಗಳನ್ನು ಕೊಳ್ಳೋಣ. ನಮ್ಮತನವನ್ನು ಉಳಿಸಿಕೊಳ್ಳೋಣ' ಎಂದು ಜನರಲ್ಲಿ ವಿನಂತಿಸಿಕೊಂಡಿದ್ದಾರೆ.
ನೇಕಾರರಿಗೆ ನೆರವಾಗಲು ಕೋರಿದ ನಟಿ ಪ್ರಿಯಾಂಕಾ ಉಪೇಂದ್ರ, ಆಶಿಕಾ ರಂಗನಾಥ್
ಇದಕ್ಕೂ ಮೊದಲು ಪ್ರಿಯಾಂಕಾ ಉಪೇಂದ್ರ ಕೂಡ ಸುದೀರ್ಘ ಪೋಸ್ಟ್ ಮೂಲಕ ನೇಕಾರರ ಪರವಾಗಿ ಧ್ವನಿ ಎತ್ತಿದ್ದರು.ಕೊರೊನಾ ಹಿನ್ನಲೆಯಲ್ಲಿ 800 ದೇಸಿ ಟ್ರಸ್ಟ್‌ನ ಕುಶಲಕರ್ಮಿಗಳ ಮಾರಾಟವು ಕುಂಠಿತಗೊಂಡಿದ್ದು, ಅಂದಾಜು 87000 ಮೀಟರ್ ಬಟ್ಟೆಗಳು ಮಾರಾಟವಾಗದೆ ಬಿದ್ದಿವೆ ! ನೇಕಾರರ ಈ ದುಃಸ್ಥಿತಿಗೆ ಬಂದಿರುವುದು ನಿಜಕ್ಕೂ ದುಃಖಕರ, ನಾನು ದೇಸಿ ಟ್ರಸ್ಟ್ ಬಗ್ಗೆ ಅನೇಕ ಯಶಸ್ಸಿನ ಕಥೆಗಳನ್ನು ಕೇಳಿದ್ದೇನೆ ಮತ್ತು ಶಿವಮೊಗ್ಗದಲ್ಲಿನ ನೇಯ್ಗೆ ಸಮುದಾಯದ ಪರಿಸ್ಥಿತಿಯ ಬಗ್ಗೆ ನನಗೆ ಕಾಳಜಿ ಇದೆ ಎಂದು ಹೇಳಿಕೊಂಡಿದ್ದರು.
ಅಷ್ಟೇ ಅಲ್ಲದೆ ಪರುಲ್ ಯಾದವ್, ಪಲ್ಲವಿ ಗುರುಕಿರಣ್, ಸುಜಾತ ಸತ್ಯನಾರಾಯಣ, ಶಿಲ್ಪಾ ಗಣೇಶ್, ಉಪೇಂದ್ರ ಕುಮಾರ್, ಕವಿತಾ ಲಂಕೇಶ್. ಉಪೇಂದ್ರ ಕುಮಾರ್, ಸುನಾಯನ ಸುರೇಶ್, ಶಿಲ್ಪಾ ಗಣೇಶ್, ಪಲ್ಲವಿ ಶೆಟ್ಟಿ, ಸುಜಾತ ಸತ್ಯನಾರಾಯಣ, ನಿರಂಜನ್ ಸುಧೀಂದ್ರ ರೇಖಾ ಜಗದೀಶ್ ಅವರನ್ನು ನಾಮ ನಿರ್ದೇಶನ ಮಾಡಿದ್ದರು.