ಒಬ್ಬನ ತಪ್ಪಿಗೆ ʼಆʼ ಕೋಮಿನ ಮೇಲೆ ಅಪರಾಧ ಹೊರಿಸುವುದು ಸರಿಯಲ್ಲ..! ನಟ ಕಿಶೋರ್
Neha Hiremath case : ದಿನಕ್ಕೆ 78 ಕೊಲೆಗಳಾಗುವ, ಮಹಿಳೆಯರ ವಿರುದ್ಧ ದಿನಕ್ಕೆ 1224 ಅಪರಾಧಗಳಾಗುವ ನಾಡಿನಲ್ಲಿ ಎಷ್ಟು ಹಿಂದೂ ಎಷ್ಟು ಕ್ರೈಸ್ತ ಅಪರಾಧಿಗಳು ? ಹಾಗೆಂದರೆ ಆ ಧರ್ಮದ ನಾವೆಲ್ಲರೂ ಅಪರಾಧಿಗಳೇ? ಹಾಗೆ ನೋಡಿದರೆ ಎಷ್ಟು ಅಂತರ್ಧರ್ಮೀಯ ಜೋಡಿಗಳು ಅನ್ಯೊನ್ಯವಾಗಿ ಬಾಳುತ್ತಿಲ್ಲ? ಅದಕ್ಕೆ ಆ ಧರ್ಮಗಳೂ ಅದರ ಜನರೂ ಜವಾಬ್ದಾರಿಯೇ ? ಹೇಗೆ ?
Actor Kishore on neha hiremath murder : ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದ ದಿನದಿಂದ ದಿನಕ್ಕೆ ಹೆಚ್ಚು ಕಾವು ಪಡೆದುಕೊಳ್ಳುತ್ತಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಕರುನಾಡಿನ ಜನತೆ ಒತ್ತಾಯ ಮಾಡುತ್ತಿದ್ದಾರೆ. ಈ ನಡುವೆ ನಟ ಕಿಶೋರ್ ಸಹ ಈ ಕುರಿತು ಧ್ವನಿ ಎತ್ತಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನೇಹಾ ಪ್ರಕರಣದ ಕುರಿತು ಕಿಶೋರ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ʼಬಾಳಿಬದುಕಬೇಕಾದ ಜೀವ ನೇಹಾಗೆ ನಡೆದದ್ದು ನಿಜಕ್ಕೂ ಅಕ್ಷಮ್ಯ ಅಪರಾಧ. ಒಂದು ನಾಗರೀಕ ಸಮಾಜವಾಗಿ ಇದು ನಮ್ಮೆಲ್ಲರ ಸೋಲು. ಈಗಾಗಲೇ ಸಾಕ್ಷಿ ಸಮೇತ ಬಂಧಿತವಾಗಿರುವ ಅಪರಾಧಿಗೆ ಮತ್ಯಾರೂ ಈಥರದ ಕೃತ್ಯವೆಸಗದಂತೆ ತನಿಖೆ ಮತ್ತು ಅತಿ ಕಠಿಣ ಶಿಕ್ಷೆ ಆಗುವುದರ ಜೊತೆಗೆ ಮಹಿಳೆಯರ ವಿರುದ್ಧ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳು ಅದರ ಮೂಲ ಕಾರಣಗಳನ್ನು ನಿಯಂತ್ರಿಸಲು ಜಾಗೃತಿ ಹೆಚ್ಚಿಸಲು ನಾವು ಮತ್ತು ಸರ್ಕಾರಗಳು ಸಾಧ್ಯ ಕ್ರಮಗಳೆಲ್ಲವನ್ನೂ ಕೈಗೊಳ್ಳಬೇಕು.
ಇದನ್ನೂ ಓದಿ:69ನೇ ವಯಸ್ಸಿನಲ್ಲಿ ತನ್ನ ಸ್ವಂತ ಮಗನಿಂದಲೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ..!
ದುರಂತವೆಂದರೆ ಯಾವುದೇ ಶಿಕ್ಷೆ ನೇಹಾಳನ್ನು ತಿರುಗಿ ತರಲಾಗದು. ಆದರೆ ನಮ್ಮ ಕೈಲಿ ಸಾಧ್ಯವಾದದ್ದು ಮತ್ಯಾರೂ ನೇಹಾಳಂತೆ ಬಲಿಯಾಗದಿರುವಂಥ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು. ಆದರೆ ಈ ನೋವಿನ ಕ್ಷಣದಲ್ಲೂ ಅದರಲ್ಲಿ ಹಿಂದೂ ಮುಸ್ಲಿಂ ಮಾಡುವುದು ಎಷ್ಟು ಸರಿ??? ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ??
ಆ ಡೈರೆಕ್ಟರ್ ಜೊತೆ ಒಂದು ರಾತ್ರಿ ಮಲಗಿದರೆ ಮಾತ್ರ ಸೀರಿಯಲ್ ಆಫರ್..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ
ಅಪರಾಧಿಗೆ ನ್ಯಾಯ ಕೊಡಿಸಲು ಶ್ರಮಿಸಿವುದನ್ನು ವಿರೋಧ ಪಕ್ಷವಾಗಲೀ ಯಾರಾಗಲೀ ಮಾಡಿದರೆ ಒಪ್ಪಲೇಬೇಕು. ಅದು ಅವರ ಕರ್ತವ್ಯ.. ಆದರೆ ಒಡೆದಾಳುವ ಈ ಧರ್ಮಾಂಧ ಜನ ನೇಹಾ ಸಾವನ್ನು ಕೋಮು ಬಣ್ಣ ಬಳಿದು ಜನರಲ್ಲಿ ದ್ವೇಷ ಹೆಚ್ಚಿಸಿ ರಾಜಕೀಯ ಉದ್ದೇಶಕ್ಕೆ ಬಳಸುವುದು ಕೊಲೆಯಷ್ಟೇ ಘೋರ ಅಪರಾಧ.. ಎಂಬು ಬರೆದುಕೊಂಡಿದ್ದಾರೆ ನಟ ಕಿಶೋರ್..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.