ಸ್ಯಾಂಡಲ್ವುಡ್ ನಟ ನಿನಾಸಂ ಅಶ್ವಥ್ ಬಂಧನ..!
Ninasam Ashwath : ಸ್ಯಾಂಡಲ್ವುಡ್ನಲ್ಲಿ ʼಕೆಜಿಎಫ್ʼ ʼಕಬ್ಜʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನೀನಾಸಂ ಅಶ್ವಥ್ ಅವರನ್ನು ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
Check Bounce Case : ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿರುವ ನಿನಾಸಂ ಅಶ್ವಥ್ ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ. ಹಾಸನ ಪೋಲಿಸರು ನಿನ್ನೆ ರಾತ್ರಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇನ್ನು ಈ ವಿಚಾರ ತಡವಾಗಿ ಹೊರಬಿದ್ದಿದೆ.
ಪ್ರಕರಣದಲ್ಲಿ ನಿನಾಸಂ ಅಶ್ವಥ್ ವಿರುದ್ಧ ನಾಲ್ಕು ಬಾರಿ ಅರೆಸ್ಟ್ ವಾರಂಟ್ ಹೊರಡಿಸಲಾಗಿತ್ತು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ನಾಳ್ಕು ಬಾರಿಯೂ ಕೋರ್ಟ್ ಗೆ ಹಾಜರಾಗದೆ ಇರುವ ಕಾರಣ ಐದನೇ ಬಾರಿ ಅರೆಸ್ಟ್ ವಾರಂಟ್ ಇರುವ ಹಿನ್ನಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ನಟನನ್ನು ಬಂಧೀಸಿದ್ದಾರೆ.
ಇದನ್ನೂ ಓದಿ-Ghost Movie: ಘೋಸ್ಟ್ ಸಿನಿಮಾದ ʼಬಿಗ್ ಡ್ಯಾಡಿ’ ಪೋಸ್ಟರ್ ರಿಲೀಸ್ ; ಶಿವಣ್ಣನ ಲುಕ್ಗೆ ಫ್ಯಾನ್ಸ್ ಫಿದಾ..!
ಹಾಸನದ ರೋಹಿತ್ ಎಂಬುವವನಿಂದ ಹಸು ಖರೀದಿಸಿದ್ದ ಅಶ್ವಥ್ 1.5ಲಕ್ಷದ ಚೆಕ್ ನೀಡಿದ್ದು, ಆದರೆ ಅದು ಬ್ಯಾಂಕ್‌ಗೆ ಹೋದಾಗ ಬೌನ್ಸ್ ಆಗಿತ್ತು. ಈ ವಿಚಾರವಾಗಿ ಹಾಸನದ ಜೆಎಮ್‌ಎಫ್‌ಸಿ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.
ನ್ಯಾಯಾಧೀಶರ ಮುಂದೆ ನಿನಾಸಂ ಅಶ್ವಥ್ ತಪ್ಪಿಸಿಕೊಂಡಿದ್ದು ಶೇ.25ರಷ್ಟು ಹಣ ಪಾವತಿಸಿದ್ದಾರೆ. ಇನ್ನುಳಿದ ಹಣವನ್ನು ಶೀಘ್ರವಾಗಿ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಈ ನಟನ ವಿರುದ್ಧ ಚೆಕ್‌ಬೌನ್ಸ್, ವಂಚನೆ ಸೇರಿದಂತೆ ಹಲವ ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ-Ghost Movie: ಘೋಸ್ಟ್ ಸಿನಿಮಾದ ʼಬಿಗ್ ಡ್ಯಾಡಿ’ ಪೋಸ್ಟರ್ ರಿಲೀಸ್ ; ಶಿವಣ್ಣನ ಲುಕ್ಗೆ ಫ್ಯಾನ್ಸ್ ಫಿದಾ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.