Ramesh Aravind : ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್ ಅವರಿಗೆ ಸಾರ್ವಕಾಲಿಕ ಅಭಿಮಾನಿಗಳಿದ್ದಾರೆ. ವಿವಿಧ ಬಗೆಯ ಪಾತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದವರು. ಕನ್ನಡದ ಚಿತ್ರರಂಗದಲ್ಲಿ ಅವರು ಎವರ್​ಗ್ರೀನ್ ಹೀರೋ ರಮೇಶ್‌ ಅರವಿಂದ್.‌ ಇವರ ಹುಟ್ಟು ಹಬ್ಬ ಸಮೀಪಿಸುತ್ತಿದೆ. ಇದೇ ಸೆಪ್ಟೆಂಬರ್​ 10ರಂದು ರಮೇಶ್​ ಅರವಿಂದ್​ ಅವರಗೆ ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು ಅವರಿಗೆ ಶುಭಾಶಯ ತಿಳಿಸಬೇಕು ಎಂಬ ಆಸೆ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ತಮ್ಮ ಹುಟ್ಟು ಹಬ್ಬಕ್ಕೆ ಫ್ಯಾನ್ಸ್‌ಗೆ ರಮೇಶ್‌ ಅರವಿಂದ್‌ ಸಿಹಿ ಸುದ್ದಿ ನೀಡಿದ್ದಾರೆ. ಸ್ವತಃ ರಮೇಶ್​ ಅರವಿಂದ್​ ಅವರೇ ತಮ್ಮ ನಂಬರ್‌ ಹಂಚಿಕೊಂಡಿದ್ದು, ಇದಕ್ಕೆ ಸಂದೇಶ ಕಳುಹಿಸಿ ವಿಶ್‌ ಮಾಡಿ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : 


ನೂರಾರು ಸಿನಿಮಾಗಳಲ್ಲಿ ನಟಿಸಿದ, ಪಾಸಿಟಿವ್​ ಮಾತುಗಳಿಂದ ಯುವಜನರನ್ನು ಸೆಳೆದವರು. ರಮೇಶ್​ ಅರವಿಂದ್​ ಎಂದರೆ ಎಲ್ಲ ವಯಸ್ಸಿನವರಿಗೂ ಅಚ್ಚುಮೆಚ್ಚು. ಇದೀಗ ನೀವು ರಮೇಶ್‌ ಅರವಿಂದ್‌ ಅವರ ಅಭಿಮಾನಿಯಾಗಿದ್ದು, ಅವರ ಜನ್ಮದಿನಕ್ಕೆ ಶುಭಾಶಯ ತಿಳಿಸಲು ಬಯಸಿದರೆ - 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸಬಹುದು. ಈ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.