1 ಚಿತ್ರಕ್ಕೆ 200 ಕೋಟಿ.. ಕನ್ನಡದ ಈ ಪ್ರಖ್ಯಾತ ನಟನೇ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್!
Sandalwood Actor: ಕೆಜಿಎಫ್ ಖ್ಯಾತಿಯ ಯಶ್ ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು 200 ಕೋಟಿಯವರೆಗೂ ಸಂಭಾವನೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ..
Actor Yash: ಚಿತ್ರಕ್ಕೆ ನಾಯಕನ ಪಾತ್ರ ಎಷ್ಟು ಮುಖ್ಯವೋ ವಿಲನ್ ಪಾತ್ರವೂ ಅಷ್ಟೇ ಮುಖ್ಯ. ಏಕೆಂದರೆ ಚಿತ್ರದಲ್ಲಿ ನಾಯಕನ ಪಾತ್ರವನ್ನು ಸ್ಟ್ರಾಂಗ್ ಆಗಿ ತೋರಿಸಬೇಕಾದರೆ ಪವರ್ ಫುಲ್ ವಿಲನ್ ಪಾತ್ರ ಅತ್ಯಗತ್ಯ. ಮೊದಲು ಹೀರೋ ಆಗಿದ್ದರೆ ನೆಗೆಟಿವ್ ಪಾತ್ರ ಮಾಡುತ್ತಿರಲಿಲ್ಲ. ಆದರೆ ಈಗ ಅನೇಕ ನಾಯಕರು ಯಾವುದೇ ಹಿಂಜರಿಕೆಯಿಲ್ಲದೆ ನೆಗೆಟಿವ್ ರೋಲ್ ಅಥವಾ ವಿಲನ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಕಮಲ್ ಹಾಸನ್, ಸಂಜಯ್ ದತ್, ವಿಜಯ್ ಸೇತುಪತಿ, ಫಹದ್ ಫಾಸಿಲ್, ಸೈಫ್ ಅಲಿ ಖಾನ್ ಮತ್ತು ಬಾಬಿ ಡಿಯೋಲ್ ಅವರಂತಹ ನಾಯಕರು ಪ್ರಸ್ತುತ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಹೈ-ಬಜೆಟ್ ಚಿತ್ರಗಳಲ್ಲಿ ದೊಡ್ಡ ಹೀರೋಗಳು ವಿಲನ್ ಪಾತ್ರಗಳಲ್ಲಿಯೇ ನಟಿಸುತ್ತಿದ್ದಾರೆ. ಆದರೆ ಈ ನಟರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ನಟ ಯಾರು ಗೊತ್ತಾ?
ಇದನ್ನೂ ಓದಿ-ಮಧುಮೇಹಕ್ಕೆ ಸಂಜೀವಿನಿ ಪೋಷಕಾಂಶಗಳಿಂದಲೇ ತುಂಬಿರುವ ಈ ಹಣ್ಣು! ವಾರಕ್ಕೊಮ್ಮೆ ತಿಂದ್ರೆ ಶುಗರ್ ಕಂಟ್ರೋಲ್ ಇರುತ್ತೆ..
ಅವರು ಬೇರೆ ಯಾರೂ ಅಲ್ಲ ಕೆಜಿಎಫ್ ಖ್ಯಾತಿಯ ಯಶ್. ಇದೀಗ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಖಳನಟ ಎನಿಸಿಕೊಂಡಿದ್ದಾರೆ. ನಿತೇಶ್ ತಿವಾರಿ ಅವರ ಮೆಗಾ-ಬಜೆಟ್ ರಾಮಾಯಣದಲ್ಲಿ ಯಶ್ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಮತ್ತು ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಈ ಚಿತ್ರವು 835 ಕೋಟಿ ರೂಪಾಯಿಗಳ ಹೆಚ್ಚಿನ ಬಜೆಟ್‌ನೊಂದಿಗೆ ಅತ್ಯಂತ ದುಬಾರಿ ಚಿತ್ರವಾಗಿ ರೂಪುಗೊಳ್ಳುತ್ತಿದೆ. ಯಶ್ ಈ ಚಿತ್ರದ ಸಹ ನಿರ್ಮಾಪಕರು. ಹಾಗಾಗಿ ಈ ಚಿತ್ರಕ್ಕೆ ಸಂಭಾವನೆ ತೆಗೆದುಕೊಳ್ಳುವ ಬದಲು ಚಿತ್ರದ ಲಾಭದಲ್ಲಿ ಶೇ.20-30ರಷ್ಟು ಪಾಲು ಪಡೆಯಲಿದ್ದಾರೆ.
ಇದನ್ನೂ ಓದಿ-ಎರಡು ದಿನ ಶಾಲೆಗಳಿಗೆ ರಜೆ !ರಜಾ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲೆಗಳಿಗೆ ಸರ್ಕಾರ ಸೂಚನೆ
ಅದರಂತೆ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಯಶ್ ಗೆ ಲಾಭವಾಗಲಿದೆ. ಕನಿಷ್ಠ ಅವರು 200 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ವರದಿಯಾಗಿದೆ, ಯಶ್ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ..
ಇಂದು ಭಾರತೀಯ ಚಿತ್ರರಂಗದ ದೊಡ್ಡ ಟಾಪ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಪ್ರಭಾಸ್, ಅಕ್ಷಯ್ ಕುಮಾರ್ ಅವರಂತಹ ನಟರು ಕೂಡ ಪ್ರತಿ ಚಿತ್ರಕ್ಕೆ 200 ಕೋಟಿ ರೂಪಾಯಿ ಸಂಭಾವನೆ ಪಡೆಯುವುದಿಲ್ಲ.. ಆದರೆ ನಾಯಕನಾಗಿ ಯಶ್‌ಗಿಂತ ಹೆಚ್ಚು ಗಳಿಸಿದ ನಟರಿದ್ದಾರೆ.. ಅಮೀರ್ ಖಾನ್ ಮತ್ತು ರಜನಿಕಾಂತ್ ಸಂಭಾವನೆ 200 ಕೋಟಿ ರೂ. ಜೈಲರ್ ಚಿತ್ರಕ್ಕಾಗಿ ರಜನಿ 225 ಕೋಟಿ ರೂ.ಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ.. ವಾಲ್ಮೀಕಿಯ ರಾಮಾಯಣವನ್ನು ಆಧರಿಸಿ ರಾಮಾಯಣ ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ರಾಮಾಯಣದ ಮೊದಲ ಭಾಗವು 2026 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.