ಚಿತ್ರರಂಗದ ಕಾರ್ಮಿಕರಿಗಾಗಿ ಶಿವಣ್ಣನ ಮನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಸ್ಯಾಂಡಲ್ ವುಡ್ ...!
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚಲನಚಿತ್ರರಂಗದ ಬಹುತೇಕ ಕೆಲಸಗಳು ಸ್ಥಗಿತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಚಿತ್ರರಂಗವನ್ನೇ ಅವಲಂಭಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ನೀಡುವ ಕುರಿತಾಗಿ ಚರ್ಚಿಸಲು ಡಾ.ಶಿವರಾಜ್ ಕುಮಾರ್ (Shiva Rajkumar )ಮನೆಯಲ್ಲಿ ಕರೆದಿದ್ದ ಸಭೆಗೆ ಬಹುತೇಕ ಎಲ್ಲ ನಟರು ಆಗಮಿಸುವ ಮೂಲಕ ಮತ್ತೆ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.
ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚಲನಚಿತ್ರರಂಗದ ಬಹುತೇಕ ಕೆಲಸಗಳು ಸ್ಥಗಿತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಚಿತ್ರರಂಗವನ್ನೇ ಅವಲಂಭಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ನೀಡುವ ಕುರಿತಾಗಿ ಚರ್ಚಿಸಲು ಡಾ.ಶಿವರಾಜ್ ಕುಮಾರ್ (Shiva Rajkumar )ಮನೆಯಲ್ಲಿ ಕರೆದಿದ್ದ ಸಭೆಗೆ ಬಹುತೇಕ ಎಲ್ಲ ನಟರು ಆಗಮಿಸುವ ಮೂಲಕ ಮತ್ತೆ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.
ಇದನ್ನು ಓದಿ: ಕತ್ರಿನಾ ಕೈಫ್ ಮದುವೆಯಲ್ಲಿ ಅಮಿತಾಬ್, ಶಿವರಾಜ್ ಕುಮಾರ್ ಭಾಗಿ..!
ಇದೇ ಸಂದರ್ಭದಲ್ಲಿ ಸಚಿವ ಸಿ.ಟಿ ರವಿ ಅವರು ಈ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ."ಇಂದು ನಟ @NimmaShivannaರವರ ನಿವಾಸದಲ್ಲಿ ನಡೆಸಲಾಗಿದ್ದ ಸಭೆಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ಹಾಗು ಚಿತ್ರರಂಗದ ಪುನಶ್ಚೇತನದ ನೆರವಿಗಾಗಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ಮಂದಿರ ತೆರೆಯಲು ಹಾಗು ದರ ನಿಗದಿ, ತೆರಿಗೆ ವಿನಾಯತಿ ಬಗ್ಗೆ ಚರ್ಚೆ ನಡೆಸಲಾಗಿದೆ.ಇದರ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಸಭೆಯಲ್ಲಿ ಶ್ರೀ ವಿ. ರವಿಚಂದ್ರನ್, ನಿಮಾಪಕರಾದ ಶ್ರೀಕಾಂತ್, ಯಶ್,ರಕ್ಷಿತ್ ಶೆಟ್ಟಿ,ಗಣೇಶ್, ಪುನೀತ್ ರಾಜ್ ಕುಮಾರ್ ರಮೇಶ್ ಅರವಿಂದ್ ಶ್ರೀಮುರಳಿ,ದುನಿಯಾ ವಿಜಯ್,ಅವರು ಉಪಸ್ಥಿತರಿದ್ದರು.