Sandalwood Actress Hitha Chandrashekar: ಸ್ಯಾಂಡಲ್‌ವುಡ್‌ ಹಿರಿಯ ನಟ ಸಿಹಿಕಹಿ ಚಂದ್ರು ಅವರ ಪುತ್ರಿ ನಟಿ ಹಿತಾ ಚಂದ್ರಶೇಖರ್ ಮಗುವಿನ ಬಗ್ಗೆ ಕೊಟ್ಟ ಹೇಳಿಕೆಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಇದು ನೆಟ್ಟಿಗರ ಅಸಮಾಧಾನಕ್ಕೂ ಕಾರಣವಾಗಿದೆ. ಕನ್ನಡದ ನಟಿ ಹಿತಾ ಚಂದ್ರಶೇಖರ್ ಅವರ ಇತ್ತೀಚಿನ ಕೆಲವು ಮಾತುಗಳು ಸಂಚಲನ ಮೂಡಿಸುತ್ತಿವೆ. 


COMMERCIAL BREAK
SCROLL TO CONTINUE READING

ಪತಿ ಮತ್ತು ಕುಟುಂಬದ ಬಗ್ಗೆ ಮಾತನಾಡಿದ ನಟಿ ಹಿತಾ ಚಂದ್ರಶೇಖರ್, ನನಗೆ ಮಕ್ಕಳು ಬೇಡ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಮಕ್ಕಳನ್ನು ಪಡೆಯುವುದಕ್ಕಿಂತ ನಾಯಿ ಮರಿಗಳನ್ನು ಸಾಕುವುದು ಉತ್ತಮ ಎಂದು ನಟಿ ಹಿತಾ ಹೇಳಿದ್ದು, ಈ ವಿಡಿಯೋ ವೈರಲ್‌ ಆಗುತ್ತಿದೆ.


ಇದನ್ನೂ ಓದಿ: ಸಲ್ಮಾನ್ ಖಾನ್ ಮದುವೆ ಆಗಬೇಕಿದ್ದ ಈ ಸ್ಟಾರ್ ನಟಿ ಧರ್ಮ ಬದಲಿಸಿ, ಎರಡು ಮಕ್ಕಳಿದ್ದ ಖ್ಯಾತ ಕ್ರಿಕೆಟಿಗನ ಪತ್ನಿಯಾದರು.. ಆದರೆ!! 


ನಟಿ ಹಿತಾ ಚಂದ್ರಶೇಖರ್ ಅವರು ಮಕ್ಕಳ ಬಗ್ಗೆ ಕೊಟ್ಟ ಈ ಹೇಳಿಕೆಗೆ ನೆಟಿಜನ್‌ಗಳು ಕೋಪಗೊಂಡಿದ್ದಾರೆ. ಸಿಹಿ ಕಹಿ ಚಂದ್ರು ಕನ್ನಡ ಚಿತ್ರರಂಗದಲ್ಲಿ ವಿಶೇಷ ಮನ್ನಣೆ ಪಡೆದಿರುವ ಹಿರಿಯ ನಟ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗಳು ಹಿತಾ ಚಂದ್ರಶೇಖರ್. 2019 ರಲ್ಲಿ ನಟ ಕಿರಣ್ ಶ್ರೀನಿವಾಸ್ ಅವರನ್ನು ಹಿತಾ  ವಿವಾಹವಾದರು. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳು ಬೇಡ ಎನ್ನುತ್ತಿದ್ದಾರೆ ನಟಿ ಹಿತಾ ಚಂದ್ರಶೇಖರ್. 


ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಿತಾ ಚಂದ್ರಶೇಖರ್ ಮಕ್ಕಳ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ನಮಗೆ ಮಕ್ಕಳು ಬೇಡ. ಕಿರಣ್ ಮತ್ತು ನಾನು ಸ್ನೇಹಿತರಾಗಿದ್ದಾಗ ಈ ವಿಷಯ ಚರ್ಚಿಸಿದ್ದೆವು. ಕಿರಣ್ ಕೂಡ ನನ್ನ ನಿರ್ಧಾರವನ್ನು ಒಪ್ಪಿಕೊಂಡರು. ನನಗೆ ನನ್ನ ಸ್ವಂತ ಮಗು ಏಕೆ ಬೇಕು? ನನಗೆ ನನ್ನ ಮಗು ಬೇಕು ಎಂದು ಅನಿಸುತ್ತಿಲ್ಲ ಎಂದಿದ್ದಾರೆ.


ಇದನ್ನೂ ಓದಿ: 1 ನಿಮಿಷಕ್ಕೆ 1 ಕೋಟಿ ಸಂಭಾವನೆ.. ಭಾರತದ ಅತ್ಯಂತ ದುಬಾರಿ ಡ್ಯಾನ್ಸರ್‌ ಈ ಸೌತ್‌ ನಟಿ !!


ನನಗೆ ಈ ಪ್ರಪಂಚ ಇಷ್ಟವಿಲ್ಲ. ಹಾಗಾದರೆ ಇನ್ನೊಂದು ಮಗುವನ್ನು ಈ ಜಗತ್ತಿಗೆ ತರಬೇಕೆ? ಎಂಬ ಪ್ರಶ್ನೆಯಿತ್ತು. ನನ್ನ ಪತಿ ಕಿರಣ್ ಕೂಡ ನನ್ನಂತೆಯೇ ಯೋಚಿಸಿದರು. ಅದಕ್ಕೇ ಅವರೂ ನನ್ನ ನಿರ್ಧಾರಕ್ಕೆ ಒಪ್ಪಿದರು. ಮಾತೃತ್ವವನ್ನು ಆನಂದಿಸಲು ನೀವು ನಿಮ್ಮ ಸ್ವಂತ ಮಗುವನ್ನು ಹೊಂದಬೇಕಾಗಿಲ್ಲ. ನಾಯಿ ಮರಿಯನ್ನು ಸಹ ಸ್ವಂತ ಮಗುವಿನಂತೆ ಪರಿಗಣಿಸಬಹುದು ಎಂದು ನಟಿ ಹಿತಾ ಚಂದ್ರಶೇಖರ್ ಹೇಳಿದ್ದಾರೆ.


ನಿನ್ನ ವೃದ್ಧಾಪ್ಯದಲ್ಲಿ ನಿನ್ನನ್ನು ನೋಡಿಕೊಳ್ಳಲು ಮಕ್ಕಳೇ ಇರಬೇಕಲ್ಲವೇ ಎಂದು ಅನೇಕರು ಕೇಳುತ್ತಾರೆ. ಆದರೆ ಆ ಬಗ್ಗೆ ನನಗೆ ಹೆಚ್ಚು ಚಿಂತೆಯಿಲ್ಲ. ಇಲ್ಲಿ ಯಾರೂ ಮಕ್ಕಳನ್ನು ಹೊಂದಬಾರದು ಎಂದು ನಾನು ಹೇಳುತ್ತಿಲ್ಲ. ಇದು ನನ್ನ ನಿರ್ಧಾರ ಅಷ್ಟೇ. ಇದನ್ನು ನನ್ನ ಪೋಷಕರಿಗೂ ಹೇಳಿದ್ದೆ. ಅವರೂ ನನಗೆ ಬೆಂಬಲ ನೀಡಿದರು ಎಂದು ನಟಿ ಹಿತಾ ಚಂದ್ರಶೇಖರ್ ಹೇಳಿದರು. ಸದ್ಯ ಹಿತಾ ಚಂದ್ರಶೇಖರ್ ಮಾಡಿರುವ ಕಾಮೆಂಟ್‌ಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.