Actress Neethu Talks With The Soul: ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಗಾಳಿಪಟ ನೀತು ಎಂದು ಖ್ಯಾತಿ ಪಡೆದಿರುವ ನಟಿ ನೀತು ಶೆಟ್ಟಿ ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಹೊಸ ವಿದ್ಯೆಯೊಂದನ್ನು ಕಲಿತ್ತಿದ್ದು, ಇವರು ಆತ್ಮಗಳ ಜೊತೆಗೆ ಮಾತನಾಡುತ್ತಾರೆ. ಈ ನಟಿ 'ಶಮನಿಸಂ' ಎಂಬ ವಿದ್ಯೆ ಕಲಿತಿದ್ದು, ಇದೊಂದು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯಾಗಿದೆ. ಹಾಗೆಯೇ ಇದರೊಂದಿಗೆ ಕನಸುಗಳನ್ನು ಕೂಡ ಟ್ರ್ಯಾಕ್ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ನೀತು ಶೆಟ್ಟಿ, "ಡ್ರೀಮ್ ಟ್ರ್ಯಾಕಿಂಗ್ ಅಂತಲ್ಲ. ನಾನು ಶಮನಿಸಂ ಕೋರ್ಸ್ ಮಾಡಿದ್ದೇನೆ. ಅದರಲ್ಲಿ ಡ್ರೀಮ್ ಟ್ರ್ಯಾಕಿಂಗ್ ಅನ್ನೋದು ಒಂದು ಭಾಗ. ಶಮನಿಸಂ ಅಂದರೆ, ಸಿನಿಮಾದಲ್ಲಿರೋ ತರ ಓಜಾ ಬಾಕ್ಸ್ ಇಟ್ಟುಕೊಂಡು ಆತ್ಮಗಳನ್ನು ಕರೆಯೋದೆಲ್ಲ ಅಲ್ಲ. ನಾನು ಈ ಕೋರ್ಸ್ ಅನ್ನು ಬೇಕು ಅಂತ ಮಾಡಿದ್ದೇ ಅಲ್ಲ. ನಾನು ಇದನ್ನೂ ಪ್ರೊಫೆಷನ್ ಆಗಿ ತೆಗೆದುಕೊಳ್ಳುತ್ತೇನೆ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ."ಎಂದು ಹೇಳಿದ್ದಾರೆ.


ಇದನ್ನೂ ಓದಿ: Shivarajkumar-Bhavana: ಮೂರನೇ ಬಾರಿ ತೆರೆ ಹಂಚಿಕೊಳ್ಳಲಿದ್ದಾರೆ ಸೆಂಚುರಿ ಸ್ಟಾರ್‌ ಮತ್ತು ಜಾಕಿ ಭಾವನಾ: ಯಾವ ಚಿತ್ರದಲ್ಲಿ ಗೊತ್ತೇ?


ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ "ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ. ಇದು ಕನಸು ಮತ್ತು ರಿಯಾಲಿಟಿ ಮಧ್ಯೆ ಆಗೋದು. ನನಗೆ ಮಲಗುವುದಕ್ಕೆ ಹಿಂಜರಿಕೆ ಆಗುವುದಕ್ಕೆ ಶುರುವಾಗಿತ್ತು" ಎಂದು ತಿಳಿಸಿದ್ದಾರೆ.


ನೀತು ಶೆಟ್ಟಿ ಕನಸಿನಲ್ಲಿ ಅವರ ತಂದೆ ಬಂದಾಗ ದಿಢೀರನೇ ಎದ್ದು ಬಿಡುವುತ್ತಿದ್ದರಂತೆ. ಈ ನಟಿ ಯಾಕೆ ಅಂತ ನೋಡಿದಾಗ ತಂದೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಗುರುವಾಯೂರು ದೇವಸ್ಥಾನಕ್ಕೆ ಹೋಗು ಅಂತ ಹೇಳಿದ್ದರಂತೆ. ಬಳಿಕ ನೀತು ಅಲ್ಲಿಗೆ ತಂದೆಗೆ ಮುಕ್ತಿ ಕೊಡುವಂತೆ ಬೇಡಿಕೊಂಡ ನಂತರ ಅಲ್ಲಿಂದ ಮತ್ತೆ ಈಕೆಗೆ ಆ ಸಮಸ್ಯೆ ಮತ್ತೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರಿಂದ ಈ ನಟಿ ಕನಸುಗಳನ್ನು ಟ್ರ್ಯಾಕ್ ಮಾಡುವುದನ್ನು ಕಲಿಯಬೇಕು ಅಂತ ನಿರ್ಧಾರ ಮಾಡಿದರು. 


ಇದನ್ನೂ ಓದಿ: ಕಣ್ಣು ಕುಕ್ಕುವ ಬೆಲೆಗೆ ಪುಷ್ಪ 2 ಥಿಯೇಟ್ರಿಕಲ್ ರೈಟ್ಸ್ ಮಾರಾಟ.. ರಿಲೀಸ್‌ ಗೂ ಮೊದಲೇ 1000 ಕೋಟಿ ಗಳಿಕೆ!


ಕನ್ನಡದ ನಟಿ ನೀತುಗೆ ಅಹಮದಾಬಾದ್‌ನಲ್ಲಿ ದಂಪತಿಯೊಬ್ಬರು ಇದನ್ನು ಕಲಿಸುತ್ತಾರೆ ಅನ್ನೋದು ಗೊತ್ತಾಗಿ, ಅವರೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲಿಂದ 'ಶಾಮನಿಸಂ' ಅನ್ನೋ ವಿದ್ಯೆಯನ್ನು ಕಲಿಯಲು ಮುಂದಾದರು. ಈ ನಟಿ ಸಂದರ್ಶನ್ಲಿ ಮಾತನಾಡುವಾಗ, "ನಾನು ಯಾವುದೋ ಮೂಡನಂಬಿಕೆಗೆ, ಭಯಕ್ಕೆ ಬಗ್ಗೋದಿಲ್ಲ. ಆದರೂ ನನಗೂ ಭಯವಿದೆ. ಆದರೆ, ನಾನು ನಂಬಿದ್ದನ್ನು ಮೂಡನಂಬಿಕೆ ಅಂದರೆ, ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸೈನ್ಸ್‌ಗೆ ಅದರದ್ದೇ ಆದ ಜಾಗವಿದೆ. ಹಾಗೇ ಆತ್ಮಗಳ ವಿಜ್ಞಾನಕ್ಕೆ ಅದರದ್ದೇ ಜಾಗವಿದೆ." ಎಂದ್ಹೇಳಿಕೊಂಡಿದ್ದಾರೆ.


ಇಂತಹದೊಂದು ಕೇಸ್‌ ಬಗ್ಗೆ ಮಾತನಾಡುವಾಗ ನೀತು ಶೆಟ್ಟಿ, "ಒಂದು ಚಾಲೆಂಜಿಂಗ್ ಕೇಸ್ ಇತ್ತು. ಒಬ್ಬರು ಕೋಮಾದಲ್ಲಿ ಇದ್ದರು. ಆಗ ನಾನು ಇನ್ನೂ ಬಿಗಿನಿಂಗ್‌ನಲ್ಲಿದ್ದೆ. ಈ ಕೆಲಸ ಮಾಡುವಾಗ ಎಕ್ಸ್‌ಪೀರಿಯನ್ಸ್ ಕೂಡ ಬೇಕಾಗುತ್ತೆ. ಧೈರ್ಯವನ್ನೂ ಇಟ್ಟುಕೊಳ್ಳಬೇಕಾಗುತ್ತೆ. ಗಂಡ ಕೋಮಾದಲ್ಲಿದ್ದರು. ವೆಂಟಿಲೇಟರ್ ತೆಗೀಬೇಕು ಅಂತಿದ್ರು. ಆ ಸಮಯದಲ್ಲಿ ಆತ್ಮ ಬಿಡುವುದಕ್ಕೂ ರೆಡಿಯಿರಲಿಲ್ಲ. ಹಾಗಂತ ಇರುವುದಕ್ಕೂ ರೆಡಿಯಿರಲಿಲ್ಲ. ನನಗೆ ಏನೋ ಒಂದು ವಿಷನ್ ಕಾಣಿಸಿತು. ಆಗ ನನಗೆ ಭಯ ಬಂತು." ಎಂದು ಒಂದು ಘಟನೆಯನ್ನು ವಿವರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.