ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ, ಇದೀಗ ಚಿತ್ರರಂಗದ ಕಹಿ ಸತ್ಯದ ಬಗ್ಗೆ ಮೌನ ಮುರಿದಿದ್ದಾರೆ. ನಟಿ ರಮ್ಯಾ ಅವರು ಹಲವು ವಿಷಯಗಳ ಕುರಿತು ಪ್ರತಿಕ್ರಿಯಿಸುತ್ತಾರೆ. ನಟಿ ರಮ್ಯಾ ಸಿನಿಮಾರಂಗಕ್ಕೆ ಸಂಬಂಧಪಟ್ಟ ವಿಚಾರಗಳ ಕುರಿತು ಆಗಾಗ ಮಾತನಾಡುತ್ತಿರುತ್ತಾರೆ. ಇದೀಗ ಸಿನಿಮಾರಂಗದ ಮತ್ತೊಂದು ಮುಖದ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಇರುವ ಲಿಂಗ ತಾರತಮ್ಯದ ಬಗ್ಗೆ ರಮ್ಯಾ ಮಾತನಾಡಿದ್ದು, ನಟರಿಗೆ ಇರುವ ಮಾನ್ಯತೆ, ನಟಿಯರಿಗೆ ಇಲ್ಲ ಎಂಬ ವಿಚಾರದ ಬಗ್ಗೆ ತಮ್ಮ ಮೌನ ಮುರಿದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Actress Chetana Raj Death: ಸೊಂಟ ದಪ್ಪವೆಂದು ಮನನೊಂದಿದ್ದ ಚೇತನಾ: ಫ್ಯಾಟ್‌ ಸರ್ಜರಿ ವೇಳೆ ಸಾವು


ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ನಟಿ ರಮ್ಯಾ, ಸಿನಿಮಾರಂಗ ಹೇಗಿದೆ? ಇಲ್ಲಿ ನಟಿಯರನ್ನು ಯಾವ ರೀತಿ ಅಳೆಯಲಾಗುತ್ತೆ? ಎಂಬ ವಿಚಾರಗಳ ಬಗ್ಗೆ ಮೌನ ಮುರಿದಿದ್ದಾರೆ. ಈ ಮೂಲಕ ಬಣ್ಣದ ಜಗತ್ತಿನ ಕಹಿ ಸತ್ಯದ ಕುರಿತು ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಯುವನಟಿ ಚೇತನಾ ರಾಜ್ (22) ನಿಧನರಾಗಿದ್ದು ನೋವಿನ ಸಂಗತಿ. ಮೇ 17ರಂದು ಅವರು ಫ್ಯಾಟ್​ ಸರ್ಜರಿ ವೈಫಲ್ಯದಿಂದ ವಿಧಿವಶರಾದರು. ಈ ಘಟನೆ ಕುರಿತು ನಟಿ ರಮ್ಯಾ ಇದೀಗ ಪ್ರತಿಕ್ರಿಯಿಸಿದ್ದಾರೆ. 


 


ಖ್ಯಾತ ನಿರೂಪಕಿಗೆ ಸಂಕಷ್ಟ ತಂದ ʼಗಡ್ಡʼ: ಅಪಹಾಸ್ಯ ಮಾಡಿದಕ್ಕೆ ದಾಖಲಾಯ್ತು FIR!


"2018ರಲ್ಲಿ ಕಾಲಿನ ಟ್ಯೂಮರ್​ ರಿಮೂವಲ್​ ಬಳಿಕ ನಾನು ಕೂಡ ದೇಹದ ತೂಕದ ಸಮಸ್ಯೆ ಅನುಭವಿಸಿದೆ. ನಾನು ನನ್ನದೇ ಆದ ಮಾರ್ಗದ ಮೂಲಕ ತೂಕ ಇಳಿಸಿಕೊಂಡೆ. ಮಹಿಳೆ ಹೇಗಿರಬೇಕು ಎಂದು ಜಗತ್ತು ಹೇಳುವುದು ಬೇಡ. ಸಿನಿಮಾ ಇಂಡಸ್ಟ್ರಿ ಬದಲಾಗಬೇಕು. ಸಂಭಾವನೆ ತಾರತಮ್ಯ, ಬ್ಯೂಟಿ ಸ್ಟ್ಯಾಂಡರ್ಡ್​, ಪಾತ್ರಗಳ ತಾರತಮ್ಯದ ವಿರುದ್ಧ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಹೋರಾಡಬೇಕು" ಎಂದು ರಮ್ಯಾ ಬರೆದುಕೊಂಡಿದ್ದಾರೆ. 


ಯುವನಟಿ ಚೇತನಾ ರಾಜ್ ಸಾವಿನ ಕುರಿತು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಎಂ.ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ವರದಿಗಾಗಿ ಪೊಲೀಸರು ನಿರೀಕ್ಷಿಸುತ್ತಿದ್ದು, ನಿನ್ನೆ ಅವರ ಅಂತ್ಯಕ್ರಿಯೆ ನೆರವೇರಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.