Actress Shruti on Renukaswamy case : ನಟಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 17 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇದೀಗ ಈ ಪ್ರಕರಣ ಕುರಿತು ಮೊದಲ ಬಾರಿಗೆ ಚಂದನವನದ ಹಿರಿಯ ನಟಿ ಶೃತಿ ಧ್ವನಿ ಎತ್ತಿದ್ದಾರೆ.


COMMERCIAL BREAK
SCROLL TO CONTINUE READING

ನಟ ದರ್ಶನ್‌ ಬಂಧನ ವಿಚಾರವಾಗಿ ಮಾತನಾಡಿರುವ ನಟಿ ಶೃತಿ, ʼಕಾಟೇರʼ ಸಿನಿಮಾದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡೋ ಅವಕಾಶ ಸಿಕ್ತು. ಅದಕ್ಕೂ ಮೊದಲು ʼಎಲ್ಲರ ಮನೆ ದೋಸೆ ತೂತುʼ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ. ಸ್ಟಾರ್ ಡಮ್ ಇದ್ರೂ ದರ್ಶನ್ ಬಳಿ ಸರಳತೆ ಇತ್ತು ಅಂತ ಶೃತಿ ಹೇಳಿದ್ದಾರೆ.


ಇದನ್ನೂ ಓದಿ:ಚಿತ್ರರಂಗಕ್ಕೆ ಮತ್ತೊಂದು ಬಿಗ್‌ಶಾಕ್‌.. ಸ್ಟಾರ್‌ ಸೆಲೆಬ್ರಿಟಿ ಜೋಡಿ ವಿಚ್ಛೇದನಕ್ಕೆ ರೆಡಿ?


ಅಲ್ಲದೆ, ಕಷ್ಟದಿಂದ ಬೆಳೆದ ನಟ ದರ್ಶನ್ ಹಾರ್ಡ್ ವರ್ಕ್ ಮಾಡ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಅನ್ನೋ ಜವಾಬ್ದಾರಿ ಅವರಿಗೆ ಇತ್ತು. ಮೈಕಟ್ಟಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಈ ಪ್ರಕರಣಲ್ಲಿ ಸಿಕ್ಕಿಕೊಂಡಿರೊದು ನೋವು ತಂದಿದೆ ಎಂದು ನಟಿ ಬೇಸರ ವ್ಯಕ್ತ ಪಡಿಸಿದ್ದಾರೆ.


ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ. ಇದರಿಂದ ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅವರು ಬಳಸೋ ಪದಗಳನ್ನ ಜೀರ್ಣಿಸಿಕೊಳ್ಳೋದು ಕಷ್ಟ. ಅದರಿಂದ ಆಚೆ ಬರೋಕೆ ತುಂಬಾ ಕಷ್ಟ ಆಗುತ್ತೆ. ಫೇಕ್ ಅಕೌಂಟ್ ನಿಂದ ಬರೋ ಪದಗಳನ್ನ ನೋಡಿ ಒಂದು ವಾರ ನೋವು ತಿಂದ ದಿನಗಳಿವೆ. ಸೋಶಿಯಲ್ ಮೀಡಿಯಾಗೆ KYC ಮಾಡಬೇಕು ಅಂತ ಒತ್ತಾಯಿಸಿದರು.


ಇದನ್ನೂ ಓದಿ:ಜೈಲಿನಲ್ಲಿದ್ದರೂ ಸದ್ದು ಮಾಡುತ್ತಿದೆ ʼಡಿ ಗ್ಯಾಂಗ್‌ʼ..! ದರ್ಶನ್‌ ʼಖೈದಿ ನಂಬರ್‌ 6106ʼ ಗೆ ಸಖತ್‌ ಡಿಮ್ಯಾಂಡ್‌


ರೇಣುಕಾಸ್ವಾಮಿ ಹತ್ಯೆ ಪ್ರಕರಣ ಹಾದಿ ನೋಡಿದ್ರೆ ದರ್ಶನ್ ದುಡುಕಿದ್ರು ಅನಿಸುತ್ತೆ. ಸದ್ಯ ವಿಚಾರಣೆ ನಡೀತಿದೆ.. ಏನಾಗುತ್ತೋ ನೋಡೋಣ. ಈ ಘಟನೆಯಿಂದ ಚಿತ್ರರಂಗ ಮಾನಸಿಕವಾಗಿ ಕುಗ್ಗಿದೆ. ಈ ಪ್ರಕರಣದ ದುಷ್ಪರಿಣಾಮ ಚಿತ್ರರಂಗದ ಮೇಲೆ ಬಿದ್ದಿದೆ ಎಂದು ಹಿರಿಯ ನಟಿ ಶೃತಿ ಕಳವಳ ವ್ಯಕ್ತ ಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.