ಸ್ಯಾಂಡಲ್ವುಡ್ ನಿರ್ದೇಶಕ ಮಂಸೋರೆ ದಾಂಪತ್ಯ ಜೀವನದಲ್ಲಿ ಬಿರುಕು: ಪತ್ನಿಗೆ ಕೊಲೆ ಬೆದರಿಕೆ!
National Award Winner Director Mansor Re: ಕನ್ನಡದ ಜನಪ್ರಿಯ ಡೈರೆಕ್ಟರ್ ಮಂಸೋರೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಅವರ ಪತ್ನಿ ಪತಿಯ ವಿರುದ್ದ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ದೋರು ದಾಖಲಿಸಿದ್ದಾರೆ.
Dowry Case Against Kannada Director Mansor Re: ಚಂದನವನದ ಜನಪ್ರಿಯ ಡೈರೆಕ್ಟರ್ ಮಂಸೋರೆ ಕನ್ನಡದಲ್ಲಿ ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ನಿರ್ದೇಶನ ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಬೀಸಿದೆ. ಕನ್ನಡದ ನಿರ್ದೇಶಕ ಮಂಸೋರೆ ಹಾಗೂ ಅವರ ಪತ್ನಿ ಅಖಿಲಾ ಪ್ರೀತಿಸಿ 2021ರಲ್ಲಿ ಮದುವೆಯಾಗಿದ್ದು, ಮೂರು ವರ್ಷಗಳ ಅಂತರದಲ್ಲಿಯೇ ವೈವಾಹಿಕ ಜೀವನದ ಸಂಕಷ್ಟಕ್ಕೆ ಸಿಲುಕಿದೆ. ಈ ನಿರ್ದೇಶಕನ ವಿರುದ್ದ ಪತ್ನಿ ದೂರು ದಾಖಲಿಸಿದ್ದು, ಅದರಲ್ಲಿ ತಮ್ಮ ಪತಿ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಹಾಗೂ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ತಿಳಿಸಿದ್ದಾರೆ.ಪತ್ನಿ ದೂರನ್ನು ದಾಖಲಿಸುತ್ತಿದ್ದಂತೆ ಇತ್ತ ಮಂಸೋರೆ ಕೂಡ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪ್ರಶಸ್ತಿ ನಿರ್ದೇಶಕ ಮಂಸೋರೆ ಬರೆದ ಪತ್ರದಲ್ಲಿ , "ನಾನು ಸದ್ಯ ನನ್ನ ಸಾಂಸಾರಿಕ ಜೀವನದಲ್ಲಿ ಜೀವನದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದೇನೆ. ನನ್ನ ಪತ್ನಿ ಅಖಿಲಾ ಸಿ ಅವರ ಮಾನಸಿಕ ಸಮಸ್ಯೆಯೇ ನನ್ನ ವೈಯಕ್ತಿಕ ಜೀವನದ ಸಮಸ್ಯೆಗಳಿಗೆ ಕಾರಣವಾಗಿದೆ.ಈ ಬಗ್ಗೆ ಮುತುವರ್ಜಿ ವಹಿಸಿರುವ ನಾನು, ನನ್ನ ಪತ್ನಿ ಅಖಿಲಾ ಸಿ.ಯವರ ಮಾನಸಿಕ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂಬ ಕಾಳಜಿಯಿಂದ ಬೆಂಗಳೂರಿನ ದುಬಾಸಿ ಪಾಳ್ಯದಲ್ಲಿರುವ ಸಂಪೂರ್ಣ ಕೌನ್ಸಿಲಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗಿರುತ್ತೇನೆ. ಕೌನ್ಸಿಲಿಂಗ್ ಮಾಡಿದ ಕಾರ್ಮೆಲಿಟಾ ಅವರು ಅಖಿಲಾ ಸಿ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಮಾತ್ರವಲ್ಲದೆ ನಿರಂತರ ಕೌನ್ಸಿಲಿಂಗ್ ಮಾಡುತ್ತಲೇ ಚಿಕಿತ್ಸೆ ಆರಂಭಿಸೋಣ ಎಂದು ಸಲಹೆ ನೀಡಿದ್ದರು." ಎಂದು ಪೊಲೀಸರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೋ ಓದಿ: ಅನುಷ್ಕಾ ಶೆಟ್ಟಿ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ?
ಇನ್ನೊಂದೆಡೆ ಮಂಸೋರೆ ಪತ್ನಿ ಅಖಿಲಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಪತಿ ಮಂಸೊರೆ (ಮಂಜುನಾಥ ಎಸ್) ಕೋವಿಡ್ ವೇಳೆ ಸಿನಿಮಾ ನಿರ್ಮಾಣ ಮಾಡುವುದಕ್ಕಾಗಿ ತಮ್ಮ ಮನೆಯವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಹಾಗೇ ಮಂಸೋರೆ ತಾಯಿ ವೆಂಕಟಲಕ್ಷ್ಮಮ್ಮ, ಸಹೋದರಿ ಹೇಮಲತಾ ಇಬ್ಬರೂ ತಮಗೆ 30 ಲಕ್ಷ ರೂಪಾಯಿತ SUV ಕಾರನ್ನು ಕೊಡಿಸಿಕೊಡುವಂತೆ ಪೀಡಿಸಿದ್ದಾರೆ. ಈ ವಿಷಯ ಬಾಯಿಬಿಟ್ಟರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿ ಮಾಡಲಾಗಿದೆ.
ಅದಕ್ಕೆ ತಕ್ಕಂತೆ ಪ್ರತಿಯಾಗಿ, ಮಂಸೋರೆ ಪೊಲೀಸರಿಗೆ ಪತ್ರ ಬರೆದಿದ್ದು, "ನಾನು ಮದುವೆಯಾದ ಸಂದರ್ಭದಲ್ಲಾಗಲಿ, ಮದುವೆ ಬಳಿಕವಾಗಲಿ,ಯಾವುದೇ ರೀತಿಯ ವರದಕ್ಷಿಣೆಯನ್ನು ಪಡೆದುಕೊಂಡಿಲ್ಲ. ಪತ್ನಿ ಮನೆಯವರಿಂದ ಈವರೆಗೆ ಹಣಕಾಸು, ಆಭರಣ, ವಾಹನ, ವಸ್ತುಗಳ ಯಾವ ಸಹಾಯವನ್ನೂ ಯಾವುದೇ ರೂಪದಲ್ಲೂ ಪಡೆದಿಲ್ಲ. ಈ ಬಗೆಗೆಗ ನನ್ನ ಅಕೌಂಟ್ ಡಿಟೈಲ್ಸ್ ಬಗ್ಗೆಯಾಗಲಿ, ಯಾವುದೇ ವ್ಯವಹಾರದ ಬಗ್ಗೆಯಾಗಲಿ ಮುಕ್ತ ತನಿಖೆ ನಡೆಸಬಹುದು" ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದೇ ಪತ್ರದಲ್ಲಿ ತಮ್ಮ ಪತ್ನಿ ಮನೆಯಿಂದ ಹೊರಗೆ ಹೋಗುವಾಗ ಆಕೆಗೆ ಕೊಡಿಸಿದ ಚಿನ್ನಾಭರಣದ ಜೊತೆಯಲ್ಲಿ ಅವರಿಗೆ ಬಂದಿದ್ದ ರಾಷ್ಟ್ರ ಪ್ರಶಸ್ತಿ ಜೊತೆ ಇತರೆ ಪದಕಗಳನ್ನು ತೆಗೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗೇ ಪತ್ನಿ ದಾಖಲಿಸಿರುವ, ಕಿರುಕುಳ, ವರದಕ್ಷಿಣೆ, ದಲಿತ ದೌರ್ಜನ್ಯ ದೂರನ್ನು ಪರಿಗಣನೆಗೆ ತೆಗೆದುಕೊಳ್ಳಬಾರದೆಂದು ವಿನಂತಿಸಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.