ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ‌ (Drugs Mafia) ಕನ್ನಡ ಚಿತ್ರರಂಗದ 15 ಮಂದಿ ನಟ-ನಟಿಯರು ಭಾಗಿಯಾಗಿದ್ದಾರೆಂದು ಭಾರೀ ಮಟ್ಟದ ಚರ್ಚೆ ನಡೆಯುತ್ತಿದೆ. ಇದೇ ಹಿನ್ನಲೆಯಲ್ಲಿ ಚಿತ್ರನಟಿ ರಾಗಿಣಿ (Ragini) ಅವರ ವಿಚಾರಣೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ಒಂದೊಂದೇ ಮುಖಗಳು ಅನಾವರಣವಾಗತೊಡಗಿವೆ.‌‌ ಕೆಲವರು‌ ಕನ್ನಡ ‌ಚಿತ್ರರಂಗದಲ್ಲಿ 'ಅಂಥದ್ದೇನೂ ಇಲ್ಲ' ಎಂದು, ಕೆಲವರು‌ 'ಕನ್ನಡ ಚಿತ್ರರಂಗ ಕ್ಲೀನ್ ಆಗಬೇಕು' ಎಂದು ‌ಪರ-ವಿರೋಧ ವಾಗ್ವಾದ ನಡೆಸುತ್ತಿರುವ ಬೆನ್ನಲ್ಲೇ 15 ಮಂದಿ ನಟ-ನಟಿಯರಿಗೆ ನೀಡಲಾಗುತ್ತೆ‌  ಎಂದು ಹೇಳಲಾಗುತ್ತಿತ್ತು. ಈಗ ಮೊದಲಿಗೆ ನಟಿ ರಾಗಿಣಿಗೆ (Ragini) ನೊಟೀಸ್ ನೀಡಿ ಇಂದು ಬೆಳಿಗ್ಗೆ 10 ಗಂಟೆಗೆ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬರುವಂತೆ ಸೂಚಿಸಲಾಗಿದೆ.


ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ರಾಗಿಣಿ ಹೆಸರು ತಳುಕು ಹಾಕಿಕೊಂಡಿದೆ ಎಂದು ಗೊತ್ತಾಗಿದ್ದೆ ತಡ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು  ನಿನ್ನೆ ರಾಗಿಣಿಯವರ ಗೆಳೆಯ ರವಿಶಂಕರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ರವಿಶಂಕರ್ ಬೆಂಗಳೂರಿನ ಜಯನಗರದ ಆರ್ ಟಿಓ (RTO) ಕಚೇರಿಯ ಸಿಬ್ಬಂದಿಯಾಗಿದ್ದು ಇವರು ನಿನ್ನೆ ಕರ್ತವ್ಯನಿರತರಾಗಿದ್ದಾಗಲೇ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕರ್ತವ್ಯ ನಿರತ ರವಿಶಂಕರ್ ಅವರನ್ನು ವಶಪಡೆದ ಹಿನ್ನಲೆಯಲ್ಲಿ ಜಯನಗರದ ಆರ್ ಟಿಓ (RTO) ಕಚೇರಿಯ ಹಿರಿಯ ಅಧಿಕಾರಿ ಗಾಯತ್ರಿ ದೇವಿ ಅವರು ನಿನ್ನೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ತಮ್ಮ ಸಿಬ್ಬಂದಿಯನ್ನು ವಶಕ್ಕೆ ಪಡೆದ ಉದ್ದೇಶದ ಬಗ್ಗೆ ವಿಚಾರಿಸಿದ್ದಾರೆ. ಆಗ ಸಿಸಿಬಿ ಪೊಲೀಸರು 'ರವಿಶಂಕರ್ ಅವರನ್ನು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾದ ಹಿನ್ನಲೆಯಲ್ಲಿ ವಶಕ್ಕೆ ಪಡೆದಿರುವುದಾಗಿ, ಸದ್ಯ ವಿಚಾರಣೆ ನಡೆಯುತ್ತಿದೆ. ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು' ಎಂದು ಹೇಳಿದ್ದಾರೆ.


ರವಿಶಂಕರ್ ಹೇಳಿಕೆ ಆಧರಿಸಿ ನಟಿ ರಾಗಿಣಿಗೆ (Ragini) ನೊಟೀಸ್ ನೀಡಿ ಇಂದು ಬೆಳಿಗ್ಗೆ 10 ಗಂಟೆಗೆ
ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬರುವಂತೆ ಸೂಚಿಸಲಾಗಿದೆ ಎಂದು ಗೊತ್ತಾಗಿದೆ. ಕೆಲ ದಿನಗಳ ಹಿಂದೆ ಪಾರ್ಟಿಯೊಂದರಲ್ಲಿ ಜಗಳ ಮಾಡಿಕೊಂಡಿದ್ದ ನಟಿ ರಾಗಿಣಿಯೊಂದಿಗೆ ಅಂದು ರವಿಶಂಕರ್ ಇದ್ದರು. ಆಗ ಹಲ್ಲೆಯಾಗಿತ್ತು. ಸ್ಟಾರ್ ನಟಿಯ ಹಳೆಯ ಗೆಳೆಯ ರವಿಶಂಕರ್ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆಯ ಬಳಿಕ ರವಿಶಂಕರ್ ಅಶೋಕರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ಸಂದರ್ಭದಲ್ಲಿ ರಾಗಿಣಿ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ ಬಳಿಕ ರವಿಶಂಕರ್ ದೂರು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದರು.


ಈ ಪ್ರಕರಣ ಇನ್ನೂ ಇತ್ಯಾರ್ಥವಾಗಿಲ್ಲ. ಈ ನಡುವೆ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗ ರಾಗಿಣಿ ಮತ್ತು ರವಿಶಂಕರ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ನಿನ್ನೆ ತಡರಾತ್ರಿವರೆಗೂ ರವಿಶಂಕರ್ ವಿಚಾರಣೆ ನಡೆದಿದೆ. ಸಿಸಿಬಿ ಪೊಲೀಸರು ಇಂದು ಮತ್ಯಾರಿಗೆ ನೊಟೀಸ್ ನೀಡುತ್ತಾರೋ? ಮತ್ಯಾವ ಸೆಲಬರಿಟಿಗೆ ಕಂಟಕ ಕಾದಿದೆಯೋ? ಜೊತೆಗೆ ರಾಗಿಣಿ ಮತ್ಯಾರ ಹೆಸರನ್ನು ಹೇಳುತ್ತಾರೊ‌? ಕಾದುನೋಡಬೇಕಿದೆ.