BS Yediyurappa: ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ
ಈಗಾಗಲೇ ‘ತನುಜಾ’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಶೂಟಿಂಗ್ನಲ್ಲಿ ಬಿಎಸ್ವೈ ಭಾಗಿಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ನವರು ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಮೊಟ್ಟಮೊದಲ ಬಾರಿಗೆ ಚಿತ್ರವೊಂದಕ್ಕೆ ಮಾಜಿ ಸಿಎಂ ಬಣ್ಣ ಹಚ್ಚಿದ್ದಾರೆ. ‘ತನುಜಾ’ ಎಂಬ ಹೊಸ ಚಿತ್ರದಲ್ಲಿ ಯಡಿಯೂರಪ್ಪ ಆಕ್ಟಿಂಗ್ ಮಾಡಿದ್ದಾರೆ.
ಸಾಮಾಜಿಕ ಕಳಕಳಿಯುಳ್ಳ ಚಿತ್ರ ‘ತನುಜಾ’ ಕಥೆ(Tanuja Kannada movie)ಗೆ ಮನಸೋತು ಕ್ಯಾಮೆರಾ ಮುಂದೆ ಯಡಿಯೂರಪ್ಪ ಬಂದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಹರೀಶ್ ಹಳ್ಳಿ ನಿರ್ದೇಶನದ ‘ತನುಜಾ’ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದೆ. ಕಷ್ಟಪಟ್ಟು ನೀಟ್ ಪರೀಕ್ಷೆ(NEET Exam)ಯನ್ನು ಬರೆಯುವ ಹುಡುಗಿಯೊಬ್ಬಳ ಕಥೆಯನ್ನಾಧಿಸಿದೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
ಟಾಲಿವುಡ್‌ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಿದ್ಧತೆ..!
‘ತನುಜಾ’ ಸಿನಿಮಾ(Tanuja)ದ ಕಥೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa)ನವರಿಗೆ ತುಂಬಾ ಇಷ್ಟವಾಗಿದೆ. ಹೀಗಾಗಿಯೇ ಅವರು ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ನಟಿಸಿರುವ ದೃಶ್ಯವನ್ನು ಚಿತ್ರತಂಡವು ಸೆರೆಹಿಡಿದಿದೆ.
ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ನಡುವೆ ಬಹಳ ಹಿಂದಿನಿಂದಲೂ ವಿಶೇಷ ನಂಟಿದೆ. ಚಿತ್ರರಂಗದಲ್ಲಿ ಮಿಂಚಿದ ಅನೇಕರು ರಾಜಕೀಯ(Politics)ಕ್ಕೂ ಕಾಲಿಟ್ಟು ಸಾಧನೆ ಮಾಡಿದ್ದಾರೆ. ಅದೇ ರೀತಿ ರಾಜಕೀಯದಲ್ಲಿ ಸಾಧನೆ ಮಾಡಿದ ಅನೇಕರು ನಂತರ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿ ಮಿಂಚಿದ್ದಾರೆ. ಈಗ ಬಿಎಸ್ವೈ ಕೂಡ ಬಣ್ಣ ಹಚ್ಚಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಹೊಸಬರ 'ಕನ್ನೇರಿ' ಪ್ರಯತ್ನಕ್ಕೆ ಕಂಚಿನ ಕಂಠದ ವಸಿಷ್ಠ ಸಿಂಹ ಸಾಥ್..!
ಈಗಾಗಲೇ ‘ತನುಜಾ’ ಸಿನಿಮಾ(Tanuja Kannada movie)ದ ಚಿತ್ರೀಕರಣ ಆರಂಭವಾಗಿದ್ದು, ಶೂಟಿಂಗ್ನಲ್ಲಿ ಬಿಎಸ್ವೈ ಭಾಗಿಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿವೆ. ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ಮಧ್ಯೆಯೂ ನೀಟ್ ಪರೀಕ್ಷೆ ಬರೆಯಲು 350ಕಿ.ಮೀ ಪ್ರಯಾಣ ಮಾಡಿ ಸುದ್ದಿಯಾಗಿದ್ದ ಯುವತಿಯೊಬ್ಬಳ ರಿಯಲ್ ಲೈಫ್ ಕಥೆಯನ್ನಾಧರಿಸಿ ಸಿನಿಮಾ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.