ಬೆಂಗಳೂರು : ಚಂದನವನ ಮತ್ತೆ ಚಿಗುರಿದೆ.  ಗಾಂಧಿನಗರದಲ್ಲಿ ಹಿಂದಿನ ಉಲ್ಲಾಸ ಕಾಣಿಸತೊಡಗಿದೆ. ಕರೋನಾ ಮಹಾಮಾರಿಯಿಂದಾಗಿ ಧರೆಗಿಳಿದು ಹೋಗಿದ್ದ ಕನ್ನಡ ಚಿತ್ರ ರಂಗದಲ್ಲಿ ಹೊಸ ವಸಂತ ಬಂದಿದೆ. ಮತ್ತೆ ಕೋಗಿಲೆ ಹಾಡುತ್ತಿದೆ. 


COMMERCIAL BREAK
SCROLL TO CONTINUE READING

ಹೌದು..ಸ್ಯಾಂಡಲ್ ವುಡ್ ನ್ನಲ್ಲಿ (Sandalwood) ಇಂದು 5 ಸಿನಿಮಾಗಳು ಬಿಡುಗಡೆಯಾಗಿವೆ. ಸಿನಿಮಾ ಥಿಯೇಟರ್ ಗಳು ಆರಂಭಗೊಂಡಿದ್ದರೂ ಕೂಡಾ ಸಿನಿಮಾ ಬಿಡುಗಡೆಗೆ ಯಾರೂ ಅಷ್ಟಾಗಿ ಮನಸ್ಸು ಮಾಡಿರಲಿಲ್ಲ. ವರ್ಷಾರಂಭದಲ್ಲಿ ಅಷ್ಟೇನೂ ಚಿತ್ರಗಳು ಬೆಳ್ಳಿತೆರೆಗೆ ಬಂದಿರಲಿಲ್ಲ. ಈಗ ಪಟಪಟ ಐದು ಸಿನೆಮಾಗಳು (Cinema) ರಿಲೀಸ್ ಆಗುತ್ತಿದೆ. 


ಇದನ್ನೂ ಓದಿ : 'ಯೌವನದ ಮದದಲ್ಲಿ ನೋಯಿಸಿದ್ದರೆ..' ಜಗ್ಗೇಶ್ ಬರೆದ ಪತ್ರ ಓದಿದರೆ ಕಣ್ಣಲ್ಲಿ ಹನಿಯುದುರತ್ತದೆ..


ಹೊಸಬರೇ  ನಿರ್ಮಿಸಿರುವ 'ಲಡ್ಡು', `ರಾಜಮಾರ್ಗ' , ಕತ್ಲೆಕಾಡು', ಪ್ರಶಾಂತ್ ಸಿದ್ಧಿ ಅಭಿನಯದ 'ಪಂಟ್ರು' ,  ಆರ್ ಜೆ  ನೇತ್ರಾ ಮತ್ತು ಹಿರಿಯ ನಟ ಶ್ರೀನಿವಾಸಮೂರ್ತಿ ಅಭಿನಯದ ವೈದ್ಯನಾಥ್ ನಿರ್ದೇಶನದ 'ತಲಾಖ್ ತಲಾಖ್ ತಲಾಖ್' ಚಿತ್ರಗಳು ಇಂದು ಬಿಡುಗಡೆ ಕಾಣುತ್ತಿರುವುದು ಖುಷಿಯ ಸಂಗತಿಯಾಗಿದೆ. 


ಈ ಚಿತ್ರಗಳಲ್ಲಿ ದೊಡ್ಡ ದೊಡ್ಡ ತಾರಾಗಣವಿಲ್ಲ.  ಆದರೂ ವಿಭಿನ್ನ ಚಿತ್ರಕಥೆ, ಹೊಸ ಪ್ರಯೋಗ, ಪರಿಶ್ರಮ ಕಾಣುತ್ತಿದೆ. 'ಲಡ್ಡು' ಚಿತ್ರದ ಮಂತ್ರ ಎಂಟರಟೈನ್ ಮೆಂಟ್.  'ರಾಜಮಾರ್ಗ' ಮಕ್ಕಳ ಚಿತ್ರ.  'ಪಂಟ್ರು' ಒಂದು ಆ್ಯಕ್ಷನ್-ಥ್ರಿಲ್ಲರ್ (Action Thriller)ರೀತಿಯಲ್ಲಿ ಗೋಚರಿಸುತ್ತಿದೆ.  'ಕತ್ಲೆಕಾಡು' ಹಾರರ್ ಮೂವಿ (Horror).  'ತಲಾಖ್ ತಲಾಖ್ ತಲಾಖ್'  ಚಿತ್ರವು ತಲಾಖ್ ಎಂಬ ಸಾಮಾಜಿಕ ಪಿಡುಗಿನ ಕಥಾ ಹಂದರ ಹೊಂದಿದೆ. 


ಇದನ್ನೂ ಓದಿ : Sumalatha Ambareesh: ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್..!


ಐದು ಚಿತ್ರಗಳು ಒಂದೇ ದಿನ ತೆರೆ ಕಾಣುತ್ತಿರುವುದು ಕನ್ನಡ ಚಿತ್ರ ರಂಗದ ಪಾಲಿಗೆ ಖುಷಿಯ ಸಂಗತಿ. ಕರೋನಾ (Coronavirus) ಕಾರಣದಿಂದ ಕಳೆದ ವರ್ಷ ಎಲ್ಲೂ ಕೂಡಾ ಥಿಯೇಟರ್ ಗಾಗಿ ಪೈಪೋಟಿ, ಕಲೆಕ್ಷನ್ ಇದ್ದಾಗಲೂ ಫಿಲ್ಮ್ ಎತ್ತಿ ಬಿಟ್ರು ಮೊದಲಾದ ಗಲಾಟೆ ಇರಲಿಲ್ಲ.  ಕನ್ನಡ ಚಿತ್ರಗಳು ಇನ್ನಷ್ಟು ಬಿಡುಗಡೆಯಾಗಲಿ. ಎಲ್ಲಾ ಫಿಲ್ಮ್ ಗಳಿಗೂ (Film) ಒಳ್ಳೆ ಕಲೆಕ್ಷನ್ ಸಿಗ್ಲಿ ಅನ್ನೋದು ನಮ್ಮ ಹಾರೈಕೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.