ನ್ಯಾಯ ಸಿಗದಿದ್ದರೆ? : ಮತ್ತೆ ಗುಡುಗಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ
Ramya Tweet: ನಟಿ ಮತ್ತು ಮಾಜಿ ಸಂಸದೆ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪದೇ ಪದೆ ನ್ಯಾಯ ಸಿಗಲಿ ಎಂಬ ಬಗ್ಗೆ ದನಿ ಎತ್ತುತ್ತಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕೆಲವು ನಟರು ಮತ್ತು ರಾಜಕೀಯ ನಾಯಕರು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪೊಲೀಸ್ ತನಿಖೆ ಎದುರಿಸುತ್ತಿದ್ದಾರೆ. ಇದರಲ್ಲಿ ನಟ ದರ್ಶನ್ ಪ್ರಕರಣ ಸ್ಯಾಂಡಲ್ವುಡ್ ಮಂದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಟಿ ಮತ್ತು ಮಾಜಿ ಸಂಸದೆ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪದೇ ಪದೆ ನ್ಯಾಯ ಸಿಗಲಿ ಎಂಬ ಬಗ್ಗೆ ದನಿ ಎತ್ತುತ್ತಿದ್ದಾರೆ. ಇದೀಗ ಮತ್ತೊಮ್ಮೆ ನಟಿ ರಮ್ಯಾ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: 4 ಕೋಟಿ ಬಂಗಲೆ, ದುಬಾರಿ ಕಾರುಗಳು.. ಕೆಜಿಎಫ್ ಸ್ಟಾರ್ ಯಶ್ ಆಸ್ತಿ ಒಟ್ಟು ಎಷ್ಟು ಕೋಟಿ ಗೊತ್ತಾ?
ಕಾನೂನುನನ್ನು ಉಲ್ಲಂಘಿಸಿರುವ ಶ್ರೀಮಂತರು ಮತ್ತು ಶಕ್ತಿಶಾಲಿಗಳು ಸದ್ಯ ಸುದ್ದಿಯಲ್ಲಿದ್ದಾರೆ. ಅವರ ಹಿಂಸಾತ್ಮಕ ಕ್ರಿಯೆಗಳಿಂದ ಬಡವರು, ಮಹಿಳೆಯರು ಮತ್ತು ಮಕ್ಕಳು ಇವರಿಂದ ಹಿಂಸೆ ಅನುಭವಿಸಿದ್ದಾರೆ. ಇಂಥವರ ಅಪರಾಧಗಳನ್ನು ಹೊರಗೆಳೆದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್. ವಿಚಾರಣೆ ಚುರುಕಾದಂತೆ, ಪ್ರಕರಣಗಳನ್ನು ತಾರ್ಕಿಕ ಮುಕ್ತಾಯಕ್ಕೆ ತೆಗೆದುಕೊಂಡಾಗ ನ್ಯಾಯ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ? ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.