Gopilola: ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ "ಗೋಪಿಲೋಲ" ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ‌ ಮೂಲಕ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ‌. ಚಿತ್ರ ಅಕ್ಟೋಬರ್ 4ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೋಸೈಮನ್, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಕೆ.ಮಂಜು, ಎಂ.ಜಿ.ರಾಮಮೂರ್ತಿ, ಕೃಷ್ಣೇಗೌಡ, ಪಿ.ಸಿ.ಶೇಖರ್ ಮುಂತಾದ ಗಣ್ಯರು "ಗೋಪಿಲೋಲ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 


COMMERCIAL BREAK
SCROLL TO CONTINUE READING

ಈ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ನಂಬಿಕೆ ನನ್ನಗಿದೆ ಎಂದು ಮಾತನಾಡಿದ ನಿರ್ಮಾಪಕ ಎಸ್ ಆರ್ ಸನತ್ ಕುಮಾರ್, ಅಂತಹ ಉತ್ತಮ ಅಂಶಗಳು ನಮ್ಮ ಚಿತ್ರದಲ್ಲಿದೆ. ಕಥೆಯನ್ನು ನಾನೇ ಬರೆದಿದ್ದೇನೆ. ನಮ್ಮದು ಹಿಂದೆ ಕೃಷಿ ಕುಟುಂಬ. ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಚಿತ್ರ ಮಾಡಿದ ಸಂತೋಷವಿದೆ. ಮಿಥುನ್ ಅಶೊಕನ್ ಅವರ ಸಂಗೀತ ಸಂಯೋಜನೆಯಲ್ಲಿ ಆರು ಹಾಡುಗಳು ಸುಂದರವಾಗಿ ಮೂಡಿಬಂದಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ "ಗೋಪಿಲೋಲ" ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದಗಳು ಎಂದರು. 


ನಿರ್ಮಾಪಕರು ಚಿತ್ರದ ಬಗ್ಗೆ ಸಾಕಷ್ಟು ಹೇಳಿದ್ದಾರೆ.  "ಗೋಪಿಲೋಲ" ನೈಸರ್ಗಿಕ ಕೃಷಿಯ ಕುರಿತಾದ ಹಾಗೂ ಸುಂದರ ಪ್ರೇಮಕಥೆಯುಳ್ಳ ಚಿತ್ರ. ಜನರಿಗೆ ಒಂದೊಳ್ಳೆ ಸಂದೇಶ ಕೂಡ ಇದೆ ಎಂದರು ನಿರ್ದೇಶಕ ಆರ್ ರವೀಂದ್ರ.


ಇದು ನಾಯಕನಾಗಿ ನನ್ನ ಮೊದಲ ಚಿತ್ರ. ಸನತ್ ಕುಮಾರ್ ಅವರು ಉತ್ತಮ ಕಥೆ ಬರದಿದ್ದಾರೆ. ಅಷ್ಟೇ ಚೆನ್ನಾಗಿ ರವೀಂದ್ರ ಅವರು ನಿರ್ದೇಶನ‌ ಮಾಡಿದ್ದಾರೆ‌. ನನ್ನ ಪಾತ್ರ ಕೂಡ ಚೆನ್ನಾಗಿದೆ. ಆಕ್ಷನ್, ಲವ್, ಸಸ್ಪನ್ಸ್ ಹೀಗೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆ ಕಂಟೆಂಟ್ ಇದೆ. ಅದೇ ನಮ್ಮ ಚಿತ್ರದ ಹೀರೋ ಎನ್ನಬಹುದು ಎಂದು ನಾಯಕ ಹಾಗೂ ಸಹ ನಿರ್ಮಾಪಕ ಮಂಜುನಾಥ್ ಅರಸ್ ತಿಳಿಸಿದರು.


ನಾಯಕಿ‌ ನಿಮಿಷ, ಹಿರಿಯ ನಟಿ ಪದ್ಮಾ ವಾಸಂತಿ, ನಟ ಕೆಂಪೇಗೌಡ ಮುಂತಾದವರು "ಗೋಪಿಲೋಲ" ಚಿತ್ರದ ಕುರಿತು ಮಾತನಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.