Mandeep Roy : ಸ್ಯಾಂಡಲ್‌ವುಡ್‌ನ ಹಿರಿಯ ನಟ ಮನ್‌ದೀಪ್‌ ರಾಯ್‌ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆಯೇ ಹೃದಯಾಘಾತ ಸಂಭವಿಸಿದ್ದು ಬೆಂಗಳೂರಿನ ಶೇಷಾದ್ರಿಪುರನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಟೀಸರ್ ಮೂಲಕ ಕುತೂಹಲ ಹುಟ್ಟಿಸಿರುವ 'ರಾಕ್ಷಸರು'


ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮನ್‌ದೀಪ್‌ ರಾಯ್‌ ಆರೋಗ್ಯದ ಬಗ್ಗೆ ಇನ್ನೂ ಆಸ್ಪತ್ರೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಶೀಘ್ರದಲ್ಲೇ ಹೆಲ್ತ್ ಬುಲೇಟಿನ್ ರಿಲೀಸ್ ಮಾಡುವ ಸಾಧ್ಯತೆ ಇದೆ. ಹಾಸ್ಯ ನಟ ಮನ್‌ದೀಪ್‌ ರಾಯ್‌ಗೆ ಹೃದಯಾಘಾತವಾದ ಕಾರಣ ಅವರಿಗೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 


ತಂದೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮನ್‌ದೀಪ್‌ ರಾಯ್‌ ಪುತ್ರಿ, ನಮ್ಮ ತಂದೆಗೆ ಹೃದಯಾಘಾತವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಸದ್ಯ ಅವರ ಆರೋಗ್ಯ ಚೇತರಿಕೆ ಕಾಣ್ತಿದೆ. ಅವರಿಗೆ ಹಾರ್ಟ್ ಸರ್ಜರಿ ಮಾಡಬೇಕೋ, ಇಲ್ಲ ಸ್ಟಂಟ್ ಹಾಕಿಸಬೇಕಾ ಅಂತ ನಮ್ಮ ಕುಟುಂಬದವರು ವೈದ್ಯರ ಜೊತೆ ಚರ್ಚೆ ಮಾಡ್ತಿವಿ. ಅವರಿಗೆ ವಯಸ್ಸಾಗಿರೋ ಕಾರಣ ವೈದ್ಯರ ಸಲಹೆಯಂತೆ ಚಿಕಿತ್ಸೆ ಕೊಡಿಸ್ತಿವಿ ಎಂದಿದ್ದಾರೆ. 


ಇದನ್ನೂ ಓದಿ : ಬಟ್ಟೆ ಹರಿದು, ಬ್ಲೇಡ್‌ನಿಂದ ಕತ್ತರಿಸಿ... 6 ತಾಸು ಮಹಿಳಾ ಕಲಾವಿದೆ ಅನುಭವಿಸಿದ್ದಳು ಚಿತ್ರಹಿಂಸೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.