ದ್ವಾರಕೀಶ್ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ !
Shruti On Dwarakish Last Wish : ದ್ವಾರಕೀಶ್ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
Shruti On Dwarakish Last Wish : ದ್ವಾರಕೀಶ್ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಟ ದ್ವಾರಕೀಶ್ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದರು. ಏಪ್ರಿಲ್ 16 ರಂದು 81 ವರ್ಷದ ದ್ವಾರಕೀಶ್ ನಿಧನರಾದರು. ದ್ವಾರಕೀಶ್ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದೆ. ಹಿರಿಯ ನಟ ದ್ವಾರಕೀಶ್ ಹೃದಯಾಘಾತ ದಿಂದ ನಿಧನರಾಗಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ.
1969 ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾ ಮೂಲಕ ದ್ವಾರಕೀಶ್ ಸ್ಯಾಂಡಲ್‌ವುಡ್ ನಿರ್ಮಾಪಕರಾದರು. ನಿರ್ಮಾಪಕರಾದ ಬಳಿಕ ಅನೇಕ ಹೊಸ ಪ್ರತಿಭೆಗಳನ್ನು ದ್ವಾರಕೀಶ್ ಚಿತ್ರರಂಗಕ್ಕೆ ಪರಿಚಯಿಸಿದರು. ಇವರಲ್ಲಿ ಒಬ್ಬರು ನಟಿ ಶ್ರುತಿ.
ಇದನ್ನೂ ಓದಿ: Dwarakish Death News: ಪತ್ನಿ ಅಗಲಿದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್ !
ನಟಿ ಶ್ರುತಿಯನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದವರು ದ್ವಾರಕೀಶ್. ನಟಿ ಶ್ರುತಿ ಅವರಿಗೆ ದ್ವಾರಕೀಶ್ ಎಂದರೆ ಅಪಾರ ಗೌರವ. ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ನಟಿ ಶ್ರುತಿ ಅವರ ಪಾರ್ಥಿವ ಶರೀರದ ಎದುರು ಕಣ್ಣೀರು ಹಾಕಿದ್ದಾರೆ. ದ್ವಾರಕೀಶ್ ಅಗಲಿಕೆ ನಟಿ ಶ್ರುತಿ ಅವರಿಗೆ ತೀವ್ರ ದುಃಖ ಉಂಟು ಮಾಡಿದೆ.
ದ್ವಾರಕೀಶ್ ಅವರು ತಮ್ಮ ಬಳಿ ಹೇಳಿದ್ದ ಕೊನೆಯ ಆಸೆಯನ್ನು ಇದೀಗ ಈಡೇರಿಸಿದ್ದೇನೆ ಎಂದು ನಟಿ ಶ್ರುತಿ ಹೇಳಿದ್ದಾರೆ. ನಿನ್ನ ಹೆಜ್ಜೆ ಒಂದು ಇತಿಹಾಸ ಆಗಬೇಕು ಎಂದು ದ್ವಾರಕೀಶ್ ಹೇಳುತ್ತಿದ್ದರು. ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಜೊತೆ ಇದ್ದಾಗ ಅವರು ನನ್ನ ಬಳಿ ತಮ್ಮ ಕೊನೆಯ ಆಸೆ ಹೇಳಿಕೊಂಡಿದ್ದರು. ತಮ್ಮ ಆಸೆಯನ್ನು ಈಡೇರಿಸುತ್ತೀಯಾ ಎಂದು ಕೇಳುತ್ತಿದ್ದರು. ನಾನು ಸತ್ತಾಗ ಸಿನಿಮಾ ರಂಗಕ್ಕೆ ನಾನು ಪರಿಚಯಿಸಿದ ನಟ-ನಟಿಯರು ನನ್ನ ಸುತ್ತಲು ನಿಂತು ಅಳಬೇಕು. ಇದೇ ನನ್ನ ಕೊನೆಯ ಆಸೆ ಎಂದಿದ್ದರು. ನಾನು ಅದನ್ನೆ ಮಾಡಿದೆ ಎಂದು ನಟಿ ಶ್ರುತಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Dwarakish Cine Journey: ದ್ವಾರಕೀಶ್ ನಿಜವಾದ ಹೆಸರೇನು? ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮಾಡುತ್ತಿದ್ದ ಕೆಲಸ ಏನು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.