Sara Tendulkar: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚೆಗೆ ಸಾರಾ ಅವರ ವೀಡಿಯೊ ವೈರಲ್ ಆಗಿದ್ದು, ಸಾರಾ ತೆಂಡುಲ್ಕರ್‌ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ಸಾರಾ ತೆಂಡೂಲ್ಕರ್ ತಮ್ಮ ವೈಯಕ್ತಿಕ ಜೀವನವನ್ನು ಮಾಧ್ಯಮದಿಂದ ದೂರವಿಟ್ಟಿದ್ದಾರೆ, ಆದರೆ ಈ ವೀಡಿಯೊದಲ್ಲಿ ಮನಮೋಹಕ ಅವತಾರದಲ್ಲಿ ಕಾಣಿಸಿಕೊಂಡಿರುವ ಸಾರಾ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಸದ್ಯಕ್ಕೆ ಈ ವಿಡಿಯೋ ಸಾರಾ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರಾ..? ಎನ್ನುವ ಬಗ್ಗೆ ಚ್ರಚೆ ಹುಟ್ಟುಕಾಹಿದೆ. ಸಾರಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಸಾರಾ ಬಾಲಿವುಡ್‌ಗೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿದೆ.


ಇದನ್ನೂ ಓದಿ: ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಡಿಸ್ಕೋ ಶಾಂತಿ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಹೇಗೆ..?


ವಿಡಿಯೋದಲ್ಲಿ ಸಾರಾ ತೆಂಡೂಲ್ಕರ್ ರಾಯಲ್ ಬ್ಲೂ ಬಣ್ಣದ ಸ್ಯಾಟಿನ್ ಡ್ರೆಸ್ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಸಾರಾ ತೆಂಡೂಲ್ಕರ್ ಅವರ ಈ ವಿಡಿಯೋ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ಸೆರೆಯಾಗಿದೆ. 


ಸಾರಾ ತೆಂಡೂಲ್ಕರ್ ಅವರು ನಟನಾ ಜಗತ್ತಿನಲ್ಲಿ ವೃತ್ತಿಜೀವನವನ್ನು ಮಾಡಲು ಬಯಸುತ್ತಾರೆ ಎಂಬ ವದಂತಿಗಳು ಹಲವು ಬಾರಿ ಹರಡಿವೆ. ಅವರು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾರಾ ತೆಂಡೂಲ್ಕರ್ ಮಾಡೆಲ್ ಆಗಿದ್ದು, ಅವರ ಫೋಟೋಶೂಟ್‌ಗಳ ಸುಂದರವಾದ ಫೊಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಸಾರಾ ಇಲ್ಲಿಯವರೆಗೆ ಕೆಲವು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳನ್ನು ಸಹ ಮಾಡಿದ್ದಾರೆ.



 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.