Sagar Biligowda:ಪತ್ನಿಯ ಸೀಮಂತವನ್ನು ಅದ್ದೂರಿಯಾಗಿ ನೆರೆವೇರಿಸಿದ ಸತ್ಯ ಸೀರಿಯಲ್ ಅಮೂಲ್ ಬೇಬಿ!
Sagar Biligowda Wifeʼs Baby Shower: ಸತ್ಯ ಸೀರಿಯಲ್ ಖ್ಯಾತಿಯ ನಟ ಸಾಗರ್ ಬಿಳಿಗೌಡ ಪತ್ನಿ ಸಿರಿ ರಾಜುವಿನ ಸೀಮಂತವನ್ನು ತುಂಬಾ ಅದ್ದೂರಿಯಾಗಿ ನೆರೆವೇರಿಸಿ, ಈ ವಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
Actor Sagar Biligowda Wife Siri Raju Baby Shower: ಕನ್ನಡ ಕಿರುತೆರೆ ನಟ ಸಾಗರ್ ಬಿಳಿ ಗೌಡ ಅವರ ಕುಟುಂಬ ಮತ್ತು ಮನೆಯಲ್ಲಿ ಸಂಭ್ರಮ ತುಂಬಿ ತುಳುಕುತ್ತಾಯಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ಸಾಗರ ತಮ್ಮ ಸಡಗರದ ಮುಂದಿನ ಭಾಗವಂತೆ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರೆವೇರಿಸಿದ್ದಾರೆ.
ನಟ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಇಬ್ಬರು ಕಳೆದ ವರ್ಷ ಅಂದರೆ ಜನವರಿ 26 2023 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈ ವರ್ಷ ಜನವರಿ ತಿಂಗಳಲ್ಲಿ ಸಾಗರ್ ಪತ್ನಿ ಸಿರಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಜೋಡಿ ಇಬ್ಬರು ಮಗುವಿನ ಶೂ ಹಿಡಿದುಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಹಾಗೆಯೇ ಆ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ , "ಪವಾಡಗಳಿಗೂ ಸಮಯ ಹಿಡಿಯುತ್ತದೆ" ಎಂಬ ಸಾಲನ್ನು ಬರೆದುಕೊಂಡಿದ್ದರು.
ಇದನ್ನೂ ಓದಿ: Most Expensive Wedding: 50 ಗೆಸ್ಟ್‌ಗಳಿಗೆ 100 ಕೋಟಿ ವೆಚ್ಚ.. ಇದೇ ಬಾಲಿವುಡ್‌ನ ಅತ್ಯಂತ ದುಬಾರಿ ಮದುವೆ!
ಇದೀಗ ಸಾಗರ್ ತಮ್ಮ ಮಡದಿ ಸಿರಿಯವರನ್ನು ಟ್ಯಾಗ್ ಮಾಡಿ ಸೀಮಂತ ಕಾರ್ಯಕ್ರಮದ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಘೆಯೇ ಆ ವಿಡಿಯೋಗೆ "ತಾಯ್ತನದ ಸೌಂದರ್ಯ" ಎಂದು ಬರೆದು ಹಾಕಿದ್ದಾರೆ. ಈಗಾಗಲೇ ಈ ವಿಡಿಯೋಗೆ ನಲ್ವತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಇನ್ನೂ ನಟ ಸಾಗರ್ ಬಿಳಿಗೌಡ ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡಿ, ಬಳಿಕ ಉದಯ ಟಿವಿಯಲ್ಲಿ ಮನಸಾರೆ ಧಾರಾವಾಹಿಯಲ್ಲಿ ನಟಿಸಿ, ಇದೀಗ ಸತ್ಯ ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಅಲಿಯಾಸ್ ಅಮೂಲ್ ಬೇಬಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಮತ್ತೆ ಸಿರಿ ರಾಜು ಮಾಡೆಲ್ ಕಮ್ ನಟಿಯಾಗಿದ್ದು, ಸ್ವಂತ ಬಿಸಿನೆಸ್ ಅನ್ನು ಕೂಡ ಹೊಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿಯ ಸ್ವಗೃಹಕ್ಕೆ ಹೊಸ ಸದಸ್ಯರ ಆಗಮನವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ