Sushant Singh Rajput ಪ್ರಕರಣವನ್ನು CBI ತನಿಖೆಗೆ ವಹಿಸಲು ಸುಪ್ರೀಂ ನಿರಾಕರಣೆ
ಈ ಕುರಿತಾದ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿಗಳು ಪೊಲೀಸರಿಗೆ ಅವರ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದಿದ್ದಾರೆ.
ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಾಜ್ಪುತ್(Sushant Singh Rajput) ಆತ್ಮಹತ್ಯೆ ಪ್ರಕರಣದ ತನಿಖೆಯನ್ನು CBIಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇಂದು ಈ ಕುರಿತಾದ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿಗಳು ಪೊಲೀಸರಿಗೆ ಅವರ ಕೆಲಸ ಮಾಡಲು ಬಿಡಬೇಕು ಎಂದು ಹೇಳಿದ್ದಾರೆ. ಅಲ್ಕಾ ಪ್ರಿಯಾ ಹೆಸರಿನ ಅರ್ಜಿದಾರರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು.
ಇದಕ್ಕೂ ಮೊದಲು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಮಹಾರಾಷ್ಟ್ರ ಸರ್ಕಾರ ಕೂಡ ನಿರಾಕರಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಈ ಕುರಿತು ಝೀ ನ್ಯೂಸ್ ಗೆ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಗೃಹ ಖಾತೆ ಸಚಿವ ಶಂಭುರಾಜ್ ದೇಸಾಯಿ.'ಸುಶಾಂತ್ ಪ್ರಕರಣವನ್ನು ಮೊದಲನೆಯ ದಿನದಿಂದ ಮಹಾರಾಷ್ಟ್ರ ಪೊಲೀಸರು ಮತ್ತು ಮುಂಬೈ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಏನೇ ಬಹಿರಂಗವಾದರೂ, ಸಂಪೂರ್ಣ ತನಿಖೆ ಮುಂಬೈ ಪೊಲೀಸರಿಂದ ದಾಖಲೆಯನ್ನು ತೆಗೆದುಕೊಳ್ಳುವ ಮೂಲಕ ನಡೆಸಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ಈ ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಪೊಲೀಸರು ಇದರಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಪೊಲೀಸರು ತನಿಖೆಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದ್ದರು.
ಇದೇ ವೇಳೆ ಝೀ ನ್ಯೂಸ್ ಜೊತೆಗಿನ ತಮ್ಮ ಎಕ್ಸ್ಕ್ಲೂಸಿವ್ ಮಾತುಕತೆಯ ವೇಳೆ ಮಾತನಾಡಿದ್ದ ಬಿಹಾರ ಸರ್ಕಾರದ ಮಂತ್ರಿ ಸಂಜಯ್ ಕುಮಾರ್ ಝಾ, "ಒಂದು ವೇಳೆ ಸುಶಾಂತ್ ಸಿಂಗ್ ರಾಜ್ಪುತ್ ಅವರ ಕುಟುಂಬ ಸದಸ್ಯರು ಒಂದು ವೇಳೆ ಪ್ರಕರಣದಲ್ಲಿ CBI ತನಿಖೆ ಬಯಸಿದ್ದೆ ಆದಲ್ಲಿ, ಬಿಹಾರ ಸರ್ಕಾರ ಅದಕ್ಕಾಗಿ ಸಂಪೂರ್ಣ ಪ್ರಯತ್ನ ನಡೆಸಲಿದೆ. ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಇಗೋ ಬಿಡಬೇಕು. ಪ್ರಕರಣದಲ್ಲಿ ಕುಟುಂಬ ಸದಸ್ಯರಿಗೆ ಹೇಗೆ ನ್ಯಾಯ ಒದಗಿಸಬೇಕು ಎಂಬುದೇ ಎಲ್ಲರ ಉದ್ದೇಶವಾಗಿರಬೇಕು" ಎಂದು ಹೇಳಿದ್ದರು.