Seetha Rama Writer Rashmi Abhaya Simha: ಜೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆಯುತ್ತಿರುವರು ಒಂದು ಕಾಲದಲ್ಲಿ ಜನಪ್ರಿಯ ಕಿರುತೆರೆ ನಟಿಯಾಗಿದ್ದರು. ನಟಿ ರಶ್ಮಿ ಅಭಯ ಸಿಂಹ ಸೀತಾರಾಮ ಸೀರಿಯಲ್‌ ಕಥೆ ಬರವಣಿಗೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ನಟಿ ಹಲವಾರು ಧಾರವಾಹಿಗಳಲ್ಲಿ ತಮ್ಮ ಅಭಿನಯದಿಂದ ಜನಪ್ರಿಯತೆಯನ್ನ್ಯ ಪಡೆದುಕೊಂಡಿದ್ದರು.


COMMERCIAL BREAK
SCROLL TO CONTINUE READING

ನಟಿ-ಬರಹಗಾರ್ತಿ ರಶ್ಮಿ ಅಭಯ ಸಿಂಹ ದಶಕದ ಹಿಂದೆ ಖಾಸಗಿ  ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಲ್ಲವಿ ಅನುಪಲ್ಲವಿ' ಧಾರಾವಾಹಿಯ ನಾಯಕ ನಟಿಯೇ ಕಾಣಸಿಕೊಂಡಿದ್ದರು. ದಶಕದ ಹಿಂದೆ ಜನಮನ ಗೆದ್ದ ಸೀರಿಯಲ್‌ಗಳಲ್ಲಿ ಒಂದಾದ 'ಪಲ್ಲವಿ ಅನುಪಲ್ಲವಿ' ಧಾರಾವಾಹಿಯಲ್ಲಿ ನಂದಿನಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದರು. ತದನಂತರ 'ರಾಧೆ', 'ನಮ್ಮಮ್ಮ ಶಾರದೆ', 'ಅಳಗುಳಿ ಮಣೆ', 'ಮೀರಾ ಮಾಧವ', 'ನಾಗಮಣಿ' ಸೇರಿದಂತೆ ಸೀರಿಯಲ್‌ಗಳಲ್ಲಿ ನಟಿಸಿದ್ದರು.


ಇದನ್ನೂ ಓದಿ: Bhagyalakshmi Serial: ಹೆಂಡತಿ SSLC ಪಾಸಾಗಿದ್ದನ್ನು ಕೇಳಿ ಉರ್ಕೊಂಡ ತಾಂಡವ್‌: ಅತ್ತೆಗೆ ಕ್ರೆಡಿಟ್‌ ಕೊಟ್ಟ ಭಾಗ್ಯಾ!!


ಸದ್ಯ ರಶ್ಮಿ ಅಭಯ ಸಿಂಹ ಕೆಲ ವರ್ಷಗಳಿಂದ ತೆರೆಯಿಂದ ದೂರವೇ ಉಳಿದಿದ್ದರೂ, ಹಲವಾರು ಧಾರವಾಹಿಗಳ ಕಥೆಗೆ ಬರಹಗಾರ್ತಿಯಾಗಿದ್ದಾರೆ. ರಶ್ಮಿ ಅಭಯ ಸಿಂಹ 'ಆಚಾರ್ & ಕೋ'ನ ಸಿಂಧು ಶ್ರೀನಿವಾಸಮೂರ್ತಿಗೆ ರಾಜ್ ಶೆಟ್ಟಿ, ರಕ್ಷಿತ್, ರಿಷಬ್ ಸ್ಪೂರ್ತಿ ಕನ್ನಡ ಕಿರುತೆರೆಯೊಂದಿಗೆ ಗಟ್ಟಿ ಸಂಬಂಧವನ್ನು ಉಳಿಸಿಕೊಂಡವರು ಇದೀಗ ಬರಹಗಾರರಾಗಿ ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಟಿ 'ಮಿಲನ', 'ಅನುರೂಪ', 'ಹರಹರ ಮಹಾದೇವ'ಸೀರಿಯಲ್‌ಗಳ ಜೊತೆಗೆ  ಬಹಳಷ್ಟು ಖ್ಯಾತಿ ಪಡೆದ 'ಜೊತೆ ಜೊತೆಯಲಿ' ಧಾರಾವಾಹಿಗೂ ಚಿತ್ರಕಥೆ ಹಾಗೂ ಸಂಭಾಷಣೆ  ಬರೆದಿದ್ದಾರೆ.


ರಶ್ಮಿ ಅಭಯ ಸಿಂಹ ನಟಿ, ಬರಹಗಾರ್ತಿಯಾಗಿ ಕೆಲಸ ಮಾಡುವುದರ ಜೊತೆಗೆ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಈ ನಟಿ 'ಹೆಲ್ತ್ ಪ್ಲೇಸ್', 'ದೇಗುಲ ದರ್ಶನ' ಮುಂತಾದ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಈಕೆ ಕಿರುತೆರೆ ಮಾತ್ರವಲ್ಲದೇ ಗಿರೀಶ್ ಕಾಸರವಳ್ಳಿ ಅವರ 'ಕೂರ್ಮಾವತಾರ' ಸಿನಿಮಾ ಸೇರಿದಂತೆ ದೂದ್‌ ಪೇಟ ದಿಗಂತ್‌  ಅಭಿನಯದ 'ಲೈಫ್ ಇಷ್ಟೇನೆ' ಮತ್ತು 'ಎಂದೆಂದಿಗೂ ನಿನಗಾಗಿ'  ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.