Actor Suresh-Nadhiya: ಸುರೇಶ್ 1980 ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟನಾಗಿ ಹೊರಹೊಮ್ಮಿದರು. ಅವರು ಪನ್ನೀರ್ ಪುಷ್ಪಾಂಗಲ್ ಚಿತ್ರದ ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು ಮತ್ತು ಗಂಗೈ ಅಮರನ್ ನಿರ್ದೇಶನದ ಕೋಝಿ ಕೂವುತು ಚಿತ್ರ ಅವರ ದೊಡ್ಡ ಪ್ರಗತಿಯಾಗಿದೆ. ಆ ಅವಧಿಯಲ್ಲಿ, ಕಾಲಿವುಡ್‌ನ ಚಾಕೊಲೇಟ್ ಬಾಯ್ ಎನಿಸಿಕೊಂಡಿದ್ದ ಸುರೇಶ್, ನಟಿಯರಾದ ನಾದಿಯಾ ಮತ್ತು ರೇವತಿ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಿಂದಾಗಿ ಆ ಕಾಲದಲ್ಲಿ ಅವರನ್ನು ನಾಯಕಿಯರಿಗೆ ಹೋಲಿಸಿ ಗಾಸಿಪ್‌ಗಳು ಹರಿದಾಡಿದ್ದವು. 


COMMERCIAL BREAK
SCROLL TO CONTINUE READING

ಅದರಲ್ಲೂ ನಟಿ ನಾದಿಯಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬಂದಿದ್ದವು. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿರುವ ಸುರೇಶ್, ತಮ್ಮ ಮೇಲಿನ ರೊಮ್ಯಾಂಟಿಕ್ ವದಂತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. “ನಾದಿಯಾ ನನ್ನ ಉತ್ತಮ ಸ್ನೇಹಿತೆ. ಅವರ ಜೊತೆ ಹೆಚ್ಚು ಸಿನಿಮಾ ಮಾಡಿದ್ದೇನೆ. ಆಕೆಗೂ ನನಗೂ ಸಂಬಂಧವಿದೆ ಎನ್ನುವ ಗಾಸಿಪ್ ಇತ್ತು. ಅದಕ್ಕೆ ಕಾರಣ ನಮ್ಮಿಬ್ಬರ ಚಿತ್ರಗಳು ಮಾತ್ರವಲ್ಲದೆ.. ಅವರ ಬಾಯ್‌ಫ್ರೆಂಡ್ ಹೆಸರೂ ಬಹುತೇಕ ನನ್ನಂತೆಯೇ ಇತ್ತು."


ಇದನ್ನೂ ಓದಿ-ʼಅವಸರದಲ್ಲಿ ಮದುವೆಯಾದೆ.. ಅದಕ್ಕೆʼ.. ವಿಚ್ಛೇದನದ ಬಗ್ಗೆ ಬಹಿರಂಹ ಹೇಳಿಕೆ ಕೊಟ್ಟ ಖ್ಯಾತ ನಟಿ!


"ನಾಡಿಯಾ ಬಾಯ್ ಫ್ರೆಂಡ್ ಹೆಸರು ಸಿರಿಶ್, ನನ್ನದು ಸುರೇಶ್, ಶೂಟಿಂಗ್ ವೇಳೆ ಬಾಯ್ ಫ್ರೆಂಡ್ ಜೊತೆ ಫೋನ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು.. ನಾದಿಯಾ ನಂತರ ಸಿರಿಶ್ ಅವರನ್ನು ವಿವಾಹವಾದರು. ಈಗ ಅವರೊಂದಿಗೆ ನನ್ನ ಹಾಗೂ ಅವರ ನಡುವಿನ ಸಿನಿಮಾ ರೊಮ್ಯಾನ್ಸ್‌ಗೆ ಅವಕಾಶವಿಲ್ಲ, ಏಕೆಂದರೆ ನಾದಿಯಾ ನನಗೆ ಸಹೋದರಿ ಇದ್ದಂತೆ. ಸಿನಿಮಾದಲ್ಲಿ ಮೃದುವಾಗಿದ್ದರೂ ನನ್ನೊಂದಿಗೆ ಮಾತ್ರ ತುಂಬಾ ಚುರುಕಾಗಿರುವಂತೆ ನಡೆದುಕೊಳ್ಳುತ್ತಿದ್ದರು.. ಒಳ್ಳೆಯ ಮನಸಸ್ಸಿನವರು" ಎಂದು ಹೇಳಿದ್ದಾರೆ..  


ಇದಲ್ಲದೇ "ಅವರಿಗೆ ಜೀವನದಲ್ಲಿ ಸ್ಪಷ್ಟತೆ ಇತ್ತು.. ಇಷ್ಟು ವರ್ಷ ಚಿತ್ರರಂಗದಲ್ಲೇ ಇರಬೇಕು, ಆ ನಂತರ ಮದುವೆಯಾಗಬೇಕು, ಸೆಟ್ಲ್ ಆದ ನಂತರ ಮತ್ತೆ ಸಿನಿಮಾದಲ್ಲಿ ನಟಿಸಬೇಕು ಎಂಬ ಸ್ಪಷ್ಟ ಕಲ್ಪನೆ ಅವರಲ್ಲಿತ್ತು. ನಾವೂ ವಾಟ್ಸಾಪ್ ಗುಂಪಿನಲ್ಲಿದ್ದೇವೆ. ನಾವು ಇನ್ನೂ ಸ್ನೇಹಿತರಾಗಿದ್ದೇವೆ. 80ರ ದಶಕದ ನಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ರಜಿನಿ ಸರ್ ಕೂಡ ಇದ್ದಾರೆ'' ಎಂದಿದ್ದಾರೆ.. ಸದ್ಯ ನಟ ಸುರೇಶ್‌ ನೀಡಿರುವ ಸಂದರ್ಶನ ವೈರಲ್‌ ಆಗುತ್ತಿದೆ.


ಇದನ್ನೂ ಓದಿ-ಛೇ.. ದುರಂತ ನಟಿ: 15ನೇ ವಯಸ್ಸಿಗೆ ಚಿತ್ರರಂಗ ಪ್ರವೇಶ, ರಾತ್ರೋರಾತ್ರಿ ಸ್ಟಾರ್, ತನಗಿಂತ ಡಬಲ್ ವಯಸ್ಸಿನ ಹೀರೊ ಜತೆ ಮದುವೆ, ಕೆಲವೇ ದಿನಗಳಲ್ಲಿ ಮುರಿದು ಬಿದ್ದ ಸಂಬಂಧ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.