ಶೂಟಿಂಗ್ ವೇಳೆ ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ..! ಸಹ ನಟರ ವಿರುದ್ಧ ದೂರು ದಾಖಲು
Actress Abuse: ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಅಣುಬವಗಳು ಒಂದೊಂದಾಗಿ ಹೊರಬರುತಿದೆ. ಇದರ ಬೆನ್ನಲ್ಲೆ ಮಲಯಾಳಂ ಚಿತ್ರರಂಗದ ಜನಪ್ರಿಯ ಧಾರಾವಾಹಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇಬ್ಬರು ನಟರ ವಿರುದ್ಧ ವಿಶೇಷ ತನಿಖಾ ಸಮಿತಿಗೆ ದೂರು ನೀಡಿದ್ದಾರೆ.
Actress Abuse: ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಅಣುಬವಗಳು ಒಂದೊಂದಾಗಿ ಹೊರಬರುತಿದೆ. ಇದರ ಬೆನ್ನಲ್ಲೆ ಮಲಯಾಳಂ ಚಿತ್ರರಂಗದ ಜನಪ್ರಿಯ ಧಾರಾವಾಹಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇಬ್ಬರು ನಟರ ವಿರುದ್ಧ ವಿಶೇಷ ತನಿಖಾ ಸಮಿತಿಗೆ ದೂರು ನೀಡಿದ್ದಾರೆ.
ಹೇಮಾ ಸಮಿತಿಯಲ್ಲಿ ದಾಖಲಾದ ವರಿದಿಯ ಪ್ರಕಾರ ಚಲನಚಿತ್ರೋದ್ಯಮದಲ್ಲಿ ನಟಿಯರು ಮತ್ತು ಮಹಿಳಾ ಪರದೆಯ ಕಲಾವಿದರ ಲೈಂಗಿಕ ಕಿರುಕುಳದ ಆರೋಪಗಳನ್ನು ಬಹಿರಂಗ ಪಡಿಸಿದೆ. ಇದು ಮಲಯಾಳಂ ಚಿತ್ರರಂಗದಲ್ಲಿ ಮಾತ್ರವಲ್ಲದೆ ಎಲ್ಲಾ ಭಾಷೆಯ ಸಿನಿಮಾ ಇಂಡ್ಟ್ರಿಯ ಕಾಸ್ಟಿಂಗ್ ಕೌಚ್‌ನ ಕರಾಳ ಮುಖವನ್ನು ಬಿಚ್ಚಿಟ್ಟಿತ್ತು, ಇದು ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಸಂಚಲನವನ್ನು ಸೃಷ್ಟಿಸಿತ್ತು. ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಾದ ಮೇಲೊಂದು ಕಾಸ್ಟಿಂಗ್ ಕೌಚ್ ಪ್ರಕರನಗಳು ಹೊರಬರುತ್ತಿದ್ದಂತೆ, ಕೇರಳ ಸರ್ಕಾರ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ನೇಮಿಸಿತ್ತು.
ಸಮಿತಿಯು ತನಿಖೆ ನಡೆಸಿ ಮಲಯಾಳಂ ಚಿತ್ರರಂಗದ ಕೆಲವು ಖ್ಯಾತ ನಟರು ಮತ್ತು ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ಮಲಯಾಳಂ ಧಾರಾವಾಹಿ ನಟಿ ಬಗೀರ್ ಅವರು ಚಿತ್ರರಂಗದ ಲೈಂಗಿಕ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಲೈಂಗಿಕ ದೂರು ನೀಡಿದ್ದಾರೆ. ಇದೀಗ ಸಹ ನಟರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಕೆ ಶುರು ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.