ಮುಂಬೈ: ಕುಡಿದ ಅಮಲಿನಲ್ಲಿ ಮನಬಂದಂತೆ ಕಾರು ಓಡಿಸಿದ ಕಿರುತರೆ ನಟಿಯೊಬ್ಬಳು ಏಳು ವಾಹನಗಳಿಗೆ ಡಿಕ್ಕಿ ಹೊಡೆದು ಜಖಂ ಮಾಡಿದ ಘಟನೆ ಮುಂಬೈನ ಸಾಂತಾಕ್ರೂಸ್ ನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಹಿಂದಿ ಕಿರುತೆರೆ ನಟಿ ರೂಹಿ ಸಿಂಗ್(30) ಮದ್ಯಪಾನ ಮಾಡಿದ ಅಮಲಿನಲ್ಲಿ ಕಾರು ಓಡಿಸುತ್ತಾ ನಾಲ್ಕು ದ್ವಿಚಕ್ರ ವಾಹನಗಳು ಮತ್ತು ಮೂರೂ ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂ ಆಗಿವೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ಬಳಿಕ ರೂಹಿ ಸಿಂಗ್ ಜನರೊಂದಿಗೆ ವಾಗ್ವಾದಕ್ಕಿಳಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಪೊಲೀಸರ ಮೇಲೆ ದೌರ್ಜನ್ಯದ ಆರೋಪವನ್ನೂ ಆಕೆ ಮಾಡಿರುವುದು ವೀಡಿಯೋದಲ್ಲಿ ಸ್ಪಷವಾಗಿದೆ. ಘಟನೆ ಬಗ್ಗೆ ಈಗಾಗಲೇ ದೂರು ದಾಖಲಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


ಅಲ್ಲದೆ, ರೂಹಿ ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೂ ಅನುಚಿತವಾಗಿ ವರ್ತಿಸಿದ್ದು, ಇದೂ ಕೂಡ ವೀಡಿಯೋದಲ್ಲಿ ದಾಖಲಾಗಿದೆ.