Actress To Anchor Shobha Shetty: ಇತ್ತೀಚೆಗೆ ಹಲವಾರು ನಿರೂಪಕರು ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಕನ್ನಡದ ನಿರೂಪಕರೂ ಅಂದ ತಕ್ಷಣ ಅನುಶ್ರೀ, ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಮಾಸ್ಟರ್ ಆನಂದ್, ಶ್ವೇತಾ ಚೆಂಗಪ್ಪ, ಶಾಲಿನಿ ಸತ್ಯನಾರಾಯಣ, ಸುಷ್ಮಾ ರಾವ್, ನಿರಂಜನ್ ದೇಶಪಾಂಡೆ ಇವರ ಹೆಸರುಗಳು  ಕೂಡಲೇ ಕಣ್ಣ ಮುಂದೆ ಹಾದು ಹೋಗುತ್ತದೆ. ಸದ್ಯ ಕನ್ನಡದ ಹಲವಾರು ಕಿರುತೆರೆಯ ನಟಿ ನಟಿಯರು ಕೂಡಾ ನಿರೂಪಣೆಯ ಕ್ಷೇತ್ರಕ್ಕೆ ನಟನೆಯಿಂದಾನೇ ಕಾಲಿಟ್ಟಿದಾರೆ.


COMMERCIAL BREAK
SCROLL TO CONTINUE READING

ಕಿರುತೆರೆಯ ನಟ-ನಟಿಯರಾದ ಅನುಪಮಾ ಗೌಡ, ಚಂದನಾ ಅನಂತಕೃಷ್ಣ, ಅಂಕಿತಾ ಅಮರ್, ಭೂಮಿ ಶೆಟ್ಟಿ, ಚಂದು ಗೌಡ ನಟನೆಯ ಹೊರತಾಗಿ ನಿರೂಪಣೆಯ ಮೂಲಕ ಮನ ಸೆಳೆದಿದ್ದಾರೆ. ಇದೀಗ ಆ ಸಾಲಿಗೆ ನಟಿ ಶೋಭಾ ಶೆಟ್ಟಿಯ ಸೇರ್ಪಡೆಯಾಗಿದೆ. ಇಷ್ಟು ದಿನಗಳ ಕಾಲ ಸಹಜ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಈ ನಟಿ ಇದೀಗ ನಿರೂಪಕಿಯಾಗಿ ಭಡ್ತಿ ಪಡೆದಿದ್ದಾರೆ. ಕನ್ನಡ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಇಂದು ಪರಭಾಷೆಯ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಬೆಡಗಿ ಶೋಭಾ ಶೆಟ್ಟಿ, ಇದೀಗ "ಕಾಫಿ ವಿತ್ ಶೋಭಾ ಶೆಟ್ಟಿ" ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. 


ಇದನ್ನೂ ಓದಿ: Rajinikanth Salary: ಅತಿಥಿ ಪಾತ್ರಕ್ಕೂ ಕೋಟಿಗಟ್ಟಲೆ.. ಲಾಲ್ ಸಲಾಂಗಾಗಿ ರಜನಿಕಾಂತ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?


ನಟಿ ಶೋಭಾ ಶೆಟ್ಟಿ ತೆಲುಗಿನ ಸುಮನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಾಫಿ ವಿತ್ ಶೋಭಾ ಶೆಟ್ಟಿ' ಶೋವಿನ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಈ ನಟಿ ಕಾರ್ಯಕ್ರಮದ ಪ್ರೋಮೋವನ್ನು ವಾಡ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಸ್ಟೇಟಸ್ ಹಾಕಿದ್ದು, ತಮ್ಮ ಹೊಸ ಪಯಣದ ಬಗ್ಗೆ ಹಂಚಿಕೊಂಡಿದ್ದರು. ನಟನೆಯ ಬಳಿಕ ಇದೀಗ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸಂತಸದ ವಿಚಾರವನ್ನು ಹೇಳಿಕೊಂಡಿದ್ದರು. ಶೋಭಾ ಶೆಟ್ಟಿ, "ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಮೋನಿತಾ ಆಗಿ ನೋಡಿದ್ದೀರಿ. ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿಯಾಗಿ ಕಂಡಿದ್ದೀರಿ. ಮೊದಲ ಬಾರಿಗೆ ನಾನು ಒಂದು ಶೋವಿನ ಆ್ಯಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ಆಕೆ ಹೇಳಿಕೊಂಡಿದ್ದರು. 


ಇತ್ತೀಚೆಗಷ್ಟೇ ಶೋಭಾ ಶೆಟ್ಟಿ, ತಮ್ಮ ಪ್ರಿಯಕರ ಯಶವಂತ್ ರೆಡ್ಡಿಯವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಈ ನಟಿ ತೆಲುಗು ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ  ಅಲ್ಲಿ ಅದ್ಭುತವಾಗಿ ಸ್ಪರ್ಧಿಸಿದ್ದಲ್ಲದೇ ಉಳಿದ ಸ್ಪರ್ಧಿಗಳಿಗೆ ಟಫ್ ಕಾಂಪಿಟೀಶನ್ ನೀಡಿ, ಟಾಪ್ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿ ಫಿನಾಲೆಗೆ ಕೇವಲ ಒಂದು ವಾರ ಇದೆ ಎನ್ನುವಷ್ಟರಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು. ಈ ನಟೊ ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಪಾತ್ರದಲ್ಲಿ ಅಭಿನಯಿಸಿ, ಮುಂದೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ್ದರು. 'ರುಕ್ಕು' ಧಾರಾವಾಹಿಯಲ್ಲಿ ನಾಯಕಿ ರುಕ್ಕು ಪಾತ್ರದಲ್ಲಿ ಹಾಗೂ ತೆಲುಗಿನ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.