Sevanthi Serial: ಹೊಸ ದಾಖಲೆ ಸೃಷ್ಟಿಸಿದ `ಸೇವಂತಿ` ಧಾರಾವಾಹಿ...1300 ಎಪಿಸೋಡ್ ಕಂಪ್ಲೀಟ್!
Sevanthi Serial Updates : ಸೇವಂತಿ ಸಿರಿಯಲ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಅಲ್ಲದೇ ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಪ್ರಸಾರಗೊಂಡ ಧಾರವಾಹಿ ಎನಿಸಿಕೊಂಡಿದೆ. ಹೌದು ಈ ಧಾರಾವಾಹಿ ಇತ್ತೀಚೆಗಷ್ಟೇ ಸಾವಿರದ ಮುನ್ನೂರು ಎಪಿಸೋಡ್‌ಗಳನ್ನು ಪೊರೈಸಿದೆ. ಆ ಖುಷಿಯನ್ನು ಧಾರಾವಾಹಿ ತಂಡ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
Sevanthi Serial : ತಮಿಳು ಧಾರಾವಹಿಯ ರಿಮೇಕ್ ಆದ ಸೇವಂತಿ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿ ದೀಪಿಕಾ ನಟಿಸಿದ್ದಾರೆ. ಸದ್ಯ ಇವರು ತಮ್ಮ ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳನ್ನು ತಿಳಸಿದ್ದಾರೆ. ಅಲ್ಲದೇ ಈ ಧಾರಾವಾಹಿಯನ್ನು ಅಭಿಮಾನಿಗಳು ಬಹಳವಾಗಿ ಮೆಚ್ಚಿಕೊಂಡಿದ್ದಾರೆ.
ಜೀ ಕನ್ನಡದ ಗಟ್ಟಿಮೇಳ ಮತ್ತು ಪಾರು ಸೇರಿದಂತೆ ಇನ್ನು ಹಲವು ಧಾರಾವಾಹಿಗಳು ದೀರ್ಘಕಾಲದವರೆಗೆ ಹೆಚ್ಚು ಪ್ರಾಸಾರವಾಗುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದವು. ಆದರೆ ಇದೀಗ ಸೇವಂತಿ ಧಾರಾವಾಹಿ ಸಹ ಅದೇ ಸೇರಿದೆ. ಈ ವಿಚಾರ ಧಾರಾವಾಹಿ ತಂಡಕ್ಕೆ ಹೇಳಲಾಗದಷ್ಟು ಸಂತೋಷವನ್ನು ತಂದುಕೊಟ್ಟಿದೆ.
ಇದನ್ನೂ ಓದಿ-ಸಿನಿಮಾ ಹುಚ್ಚು ಹಿಡಿಸಿದ್ದೇ ನಾನು ಅಂದ್ರು ತಲೈವ ಸ್ನೇಹಿತ ರಾಜ್
ಈ ಈ ಸೇವಂತಿ ಸಿರೀಯಲ್‌ನ ಪ್ರೀಮಿಯರ್ ಶೋನಲ್ಲಿ ಪಲ್ಲವಿಗೌಡ ನಾಯಕಿಯಾಗಿ ನಟಿಸಿದ್ದರು. ಕೆಲ ಸಂಚಿಕೆಗಳ ನಂತರ ನಟಿ ಮೇಘನಾ ಖುಷಿಯವರು ಪಾತ್ರಕ್ಕೆ ಜೀವತುಂಬಿದ್ದರು. ಸದ್ಯ ನಟಿ ದೀಪಿಕಾ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇನ್ನು ಈ ಧಾರಾವಾಹಿಯಲ್ಲಿ ನಟ ಶಿಶಿರ್ ಶಾಸ್ತ್ರಿ ನಾಯಕನ ಪಾತ್ರಕ್ಕೆ ಜೀವತುಂಬಿ, ವಕೀಲನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿಯ ಇನ್ನೊಂದು ವಿಶೇಷತೆಯೆಂದರೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಈ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಸಾವಿರದ ಮುನ್ನೂರು ಎಪಿಸೋಡ್‌ಗಳನ್ನು ಪೊರೈಸಿದ ಧಾರಾವಾಹಿ ಹೀಗೆ ಇನ್ನಷ್ಟು ಭರ್ಜರಿ ಎಪಿಸೋಡ್ ಗಳನ್ನು ನೀಡುವಂತಾಗಲಿ.
ಇದನ್ನೂ ಓದಿ-ಪ್ರಾಣಸ್ನೇಹಿತ ರಜನೀಕಾಂತ್ ಬಗ್ಗೆ ರಾಜ್ ಹೇಳಿದ್ದೇನು ಗೊತ್ತಾ..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.