ಬೆಂಗಳೂರು: ತಮಿಳಿನ ಗೀತ ರಚನೆಗಾರ  ವೈರಮುತ್ತು ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಗಾಯಕಿ ಚಿನ್ಮಮಿ ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳದ ವಿಚಾರವಾಗಿ ಮಹಿಳೆಯರ ಎರಡು ಅನಾಮಧೇಯ ಪತ್ರಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ  ಬಾಲಿವುಡ್ ನಲ್ಲಿ ಬಾರಿ ಸಂಚಲನ ಸೃಷ್ಟಿಸಿದ್ದ ಮೀಟೂ ಚಳುವಳಿ ಈಗ ಚಂದನವನಕ್ಕೂ ಕಾಲಿಟ್ಟಿದೆ. 



COMMERCIAL BREAK
SCROLL TO CONTINUE READING

ಪತ್ರವೊಂದರಲ್ಲಿ  " ಕೆಲವು ವರ್ಷಗಳ ಹಿಂದೆ ರಘು ದೀಕ್ಷಿತ್  ಅವರು  ರೆಕಾರ್ಡಿಂಗ್‌ಗಾಗಿ ತಮ್ಮ ಸ್ಟುಡಿಯೋಗೆ ಆಹ್ವಾನಿಸಿದ್ದರು. ಅಲ್ಲದೆ ಆ ವೇಳೆ  ತಮ್ಮ ಪತ್ನಿಗೆ ಹುಷಾರಿಲ್ಲ ಎಂದಿದ್ದರು (ವಿವಾವಿತ ಎಲ್ಲಾ ಪುರುಷರ ಹಾಗೆ). ಅವರ ಪತ್ನಿ ತುಂಬಾ  ಒಳ್ಳೆಯರು. ಅವರು ಬಂದ ಕಾರಣದಿಂದಾಗಿ ರೆಕಾರ್ಡಿಂಗ್ ಕೆಲಸ ನಡೆಯಲಿಲ್ಲ.ಆದರೆ ತಾವು  ಕೆಲಸಕ್ಕಾಗಿ ಬಂದಿದ್ದೇನೆ ಎಂದು ಪತ್ನಿ ಬಳಿ ನಟಿಸುವಂತೆ  ನನ್ನಲ್ಲಿ ತಿಳಿಸಿದರು. ಈ ಬಗ್ಗೆ ಅವರ ಜತೆ ವಾಗ್ವಾದ ನಡೆಯಿತು. ಆಗ  ಅವರ ಪತ್ನಿ ಬಂದು ಚೆನ್ನಾಗಿಯೇ ಮಾತನಾಡಿ ಹೋದರು.ಆದರೆ ರೆಕಾರ್ಡಿಂಗ್ ಮುಗಿದ ತಕ್ಷಣ ಚೆಕ್‌ಗೆ ಸಹಿ ಹಾಕುವ ವೇಳೆ ನನ್ನನ್ನು ಹತ್ತಿರಕ್ಕೆ ಬರಸೆಳೆದು ಕಿಸ್ ಮಾಡುವಂತೆ  ಕೇಳಿದರು. ಅಲ್ಲದೆ  ಬಾಗಿಲ ಹತ್ತಿರ ನನ್ನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದರು, ಆಗ ನಾನು  ಕಿರುಚುತ್ತಾ ಕೆಳಗೆ ಓಡಿ ಹೋದೆ. ಬಹಳಷ್ಟು ಮಹಿಳೆಯರು  ಅವರ ಹತ್ತಿರ ಇದೇ ರೀತಿ ಅನುಭವಿಸಿರುತ್ತಾರೆ.  ನಿಜಕ್ಕೋ ಇದು ಹೇಸಿಗೆ ತರಿಸುತ್ತದೆ, ಆದರೆ. ನನ್ನ ಹೆಸರನ್ನು ಹೇಳಲು  ಇಚ್ಚಿಸಲ್ಲ. ನಿಜವಾಗಿ ನನಗೆ ಆ ಕೂಡ ಧೈರ್ಯವು ಇಲ್ಲ, ನಾನಿನ್ನೂ ಸಂಗೀತದಲ್ಲಿ ಬೆಳೆಯಬೇಕಾದವಳು ಎಂದು " ಆರೋಪಿಸಿದ್ದಾರೆ.ಇನ್ನೊಂದು ಪತ್ರದಲ್ಲಿಯೂ ಮಹಿಳೆಯೊಬ್ಬಳು ಇದೆ ರೀತಿ ಬರೆದುಕೊಂಡಿದ್ದಾಳೆ.



ಈಗ ಆರೋಪಗಳಿಗೆ ಪ್ರತಿಕ್ರಿಯಿಸಿ ಸುದೀರ್ಘ ಪತ್ರ ಬರೆದಿರುವ  ರಘು ದೀಕ್ಷಿತ್ "ಚಿನ್ಮಯಿ ಪ್ರಸ್ತಾಪಿಸಿರುವ ಮಹಿಳೆಗೆ ನಾನು ಈ ಹಿಂದೆಯೇ ಸಾರ್ವಜನಿಕವಾಗಿಯೂ ಮತ್ತು ಖಾಸಗಿಯಾಗಿಯೂ ಕ್ಷಮೆ ಕೋರಿದ್ದೆ. ಇನ್ನೊಮ್ಮೆ ಕೇಳುತ್ತೇನೆ. ಆ ಘಟನೆ ಹೇಗೋ ನಡೆದು ಹೋಯಿತು.ಆದರೆ ಅವರು ವಿವರಿಸಿದ ಹಾಗೆ ಈ ಘಟನೆ ನಡೆದಿಲ್ಲ .ರೆಕಾರ್ಡಿಂಗ್ ಬಳಿಕ ಆಪ್ಪುಗೆ ನೀಡಿದ್ದೆ . ಹಾಗೆ ಕಿಸ್ ಕೊಡಲು ಪ್ರಯತ್ನಿಸಿದೆ. ಆದರೆ ಅವರು ಇದಕ್ಕೆ  ಪ್ರತಿರೋಧ ವ್ಯಕ್ತಪಡಿಸಿದ ಕಾರಣ ನಾನು ಆ ರೀತಿ ಮಾಡಲಾಗಲಿಲ್ಲ . ಇದಾದ ನಂತರ ನಾನು ಸ್ಟುಡಿಯೋದಿಂದ ಹೊರಟು ಹೋದೆ. ಅವರು ನನ್ನ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.ಈ ವಿಚಾರವಾಗಿ ನಾನು ನಾನು ಕ್ಷಮೆ ಕೋರಿದ್ದೆ ಎನ್ನುವ ಮೂಲಕ ರಘು  ತಾವು ಪ್ರಾಮಾಣಿಕರು ಎನ್ನುವ ಹಾಗೆ ಬಿಂಬಿಸಿಕೊಂಡಿದ್ದಾರೆ.