Dilwale Dulhaniya Le Jayenge release: 1995ರಲ್ಲಿ ಬಿಡುಗಡೆಯಾಗಿ ಎಲ್ಲರ ಮನಗೆದ್ದ ಅದ್ಭುತ ಸಿನಿಮಾ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (DDLJ). ಶಾರುಖ್ ಖಾನ್ ಹಾಗೂ ಕಾಜೋಲ್ ಕೆಮಿಸ್ಟ್ರಿ ಕಂಡು ಸಿನಿಪ್ರಿಯರು ಹಾಡಿ ಹೊಗಳಿದ್ದರು. ಸೂಪರ್ ಹಿಟ್ ಆದ ಈ ಚಿತ್ರ ಮುಂಬೈನ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಈಗಲೂ ಪ್ರದರ್ಶನ ಕಾಣುತ್ತಿರುವುದು ವಿಶೇಷ. ‘ಪಠಾಣ್​’ ಸಿನಿಮಾ ಯಶಸ್ಸಿನ ಬಳಿಕ ಶಾರುಖ್ ಖಾನ್ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಈ ಬೆನ್ನಲ್ಲೇ ಶಾರುಖ್‌ ನಟನೆಯ ಎವರ್‌ಗ್ರೀನ್‌ ಮೂವಿ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ’ (DDLJ) ಸಿನಿಮಾ ಇಂದು (ಫೆಬ್ರವರಿ 10) ರೀ-ರಿಲೀಸ್ ಆಗಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಭಾರತದ ಇತಿಹಾಸದಲ್ಲೇ ಅತಿ ದೀರ್ಘಕಾಲ ಪ್ರದರ್ಶನ ಕಂಡಿದೆ. 


COMMERCIAL BREAK
SCROLL TO CONTINUE READING

ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' (DDLJ) ಭಾರತದಾದ್ಯಂತ ಪ್ಯಾನ್-ಇಂಡಿಯಾ ಮರು ಬಿಡುಗಡೆಯಾಗಲಿದೆ ಎಂದು ಯಶ್ ರಾಜ್ ಫಿಲ್ಮ್ಸ್ ಖಚಿತಪಡಿಸಿದೆ. ವೈಆರ್‌ಎಫ್ ವಿತರಣಾ ವಿಭಾಗದ ಉಪಾಧ್ಯಕ್ಷ ರೋಹನ್ ಮಲ್ಹೋತ್ರಾ, "ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ ಐತಿಹಾಸಿಕ ಹಿಟ್‌ ನೀಡಿದೆ. ವರ್ಷವಿಡೀ ಪ್ರೇಕ್ಷಕರು ಮತ್ತು ಅಭಿಮಾನಿಗಳು ನಮ್ಮನ್ನು ನಿರಂತರವಾಗಿ ಈ ಸಿನಿಮಾ ರೀರಿಲೀಸ್‌ ಮಾಡಲು ವಿನಂತಿಸುತ್ತಾರೆ. ಮೈಲಿಗಲ್ಲು ಸ್ಥಾಪಿಸಿದ ಈ ಚಿತ್ರವನ್ನು ಅವರು ಮತ್ತೆ ಮತ್ತೆ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಥಿಯೇಟರ್‌ಗಳಲ್ಲಿ ವೀಕ್ಷಿಸಲು ಬಯಸುತ್ತಾರೆ. ಆದ ಕಾರಣ ನಾವು ಫೆಬ್ರವರಿ 10 ರಿಂದ ಒಂದು ವಾರ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿದ್ದೇವೆ" ಎಂದಿದ್ದಾರೆ.


ಇದನ್ನೂ ಓದಿ : “ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ, ಮುಂದೊಂದು ದಿನ ಭೇಟಿಯಾಗುವೆ”: ದಾವಣಗೆರೆ ಅಭಿಮಾನಿಗಳಿಗೆ ಕಿಚ್ಚನ ‘ಸ್ಪಷ್ಟ ಮಾತು’


ಯಶರಾಜ್ ಫಿಲ್ಮ್ಸ್ ಪ್ರಕಾರ, DDLJ ಮುಂಬೈ, ಪುಣೆ, ಅಹಮದಾಬಾದ್, ಸೂರತ್, ವಡೋದರಾ, ಗುರ್ಗಾಂವ್, ಫರಿದಾಬಾದ್, ಲಕ್ನೋ, ನೋಯ್ಡಾ, ಡೆಹ್ರಾಡೂನ್, ದೆಹಲಿ, ಚಂಡೀಗಢ, ಕೋಲ್ಕತ್ತಾ, ಗುವಾಹಟಿ, ಬೆಂಗಳೂರು, ಹೈದರಾಬಾದ್, ಇಂದೋರ್, ಚೆನ್ನೈ, ವೆಲ್ಲೂರು, ತಿರುವನಂತಪುರ ಸೇರಿದಂತೆ ಭಾರತದ 37 ನಗರಗಳಲ್ಲಿ ಬಿಡುಗಡೆಯಾಗಲಿದೆ. 


1995 ರ ರೊಮ್ಯಾಂಟಿಕ್ ಬ್ಲಾಕ್‌ಬಸ್ಟರ್ 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ', ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದೀರ್ಘಾವಧಿ ಪ್ರದರ್ಶನ ಕಂಡ ಸಿನಿಮಾ. ಪ್ರೇಮಿಗಳ ದಿನದ ಹಿನ್ನೆಲೆ ಥಿಯೇಟರ್‌ಗಳಲ್ಲಿ ಎಸ್‌ಆರ್‌ಕೆಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ. 


ಇದನ್ನೂ ಓದಿ :Kudiyee Ni Teri : ʼಸೆಲ್ಫಿʼ ಹಾಡಿನಲ್ಲಿ 25ರ ಹರೆಯದ ನಟಿ ಜೊತೆ ಕಿಲಾಡಿ ಅಕ್ಕಿ ರೊಮ್ಯಾನ್ಸ್..!


ವೈಆರ್‌ಎಫ್ ತನ್ನ 25 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಡಿಡಿಎಲ್‌ಜೆ ರೀರಿಲೀಸ್‌ ಮಾಡಿದ್ದು, 25 ವರ್ಷಗಳ ನಂತರ 'ಪಠಾಣ್‌' ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿದೆ ವೈಆರ್‌ಎಫ್ ವಿತರಣಾ ವಿಭಾಗದ ಉಪಾಧ್ಯಕ್ಷ ರೋಹನ್ ಮಲ್ಹೋತ್ರಾ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.