Suhana Khan Purchased Agriculture Land: ಕೆಲವು ಸೆಲೆಬ್ರೆಟಿ ಮಕ್ಕಳ ಬದುಕು ಎಷ್ಟು ಚೆಂದ ಅಂದರೇ, ತಂದೆ-ತಾಯಿ ಮಾಡಿದ ಆಸ್ತಿ ಹಣವನ್ನುಇವರೇಏನೋ ಸಾಧನೆ ಮಾಡಿದ್ದಾರೆ ಅನ್ನೋ ಹಾಗೆಯೇ ಯಾವಾಗಲು ಸುದ್ದಿಯಾಗುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯಂತೆ ಅಂತವರ ಸಾಲಿಗೆ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಮುದ್ದಿನ ಪುತ್ರಿ ಸುಹಾನಾ ಖಾನ್‌ ಕೂಡ  ಸೇರಿದ್ದಾರೆ. ಈಕೆ ಕೃಷಿ ಭೂಮಿ ಖರೀದಿಸುವ ವಿಚಾರದಲ್ಲಿ ಸೆನೆಸೇಷನಲ್‌ ನ್ಯೂಸ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಶಾರುಖ್ ಮಗಳು ಸುಹಾನಾ ಖಾನ್‌ ಕಳೆದ ವರ್ಷ 2,218 ಚದರ ಅಡಿ ಕೃಷಿ ಭೂಮಿಗೆ  12.91 ಕೋಟಿ ಹಣ ಕೊಟ್ಟು ಖರೀದಿಸಿದ್ದರು. ಈ ವಿಷಯ ಎಲ್ಲೆ ವೈರಲ್‌ ಆಗಿದ್ದು, ಸೋಷಿಯಲ್‌ ಮಿಡಿಯಾದಲ್ಲಿ ಚರ್ಚೆ ಕೂಡ ನಡೆದಿತ್ತು. ಆಗ 23 ವಯಸ್ಸಿನಲ್ಲಿ ಎಂತಹ ಸಾಧನೆ ಮಾಡಿದ್ದಾರೆ ಅನ್ನೋತೋ ರೀತಿಯಲ್ಲಿ ಕೇಳಿಬಂದಿತ್ತು.  ಇದೀಗ ಸುಹಾನ ಮತ್ತೆ ಅದೇ ತರಹ ಮತ್ತೊಂದು ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: Deepika Padukone : ನಟಿ ದೀಪಿಕಾ ಪಡುಕೋಣೆ ಪ್ರಗ್ನೆಂಟ್‌..! ಗುಟ್ಟು ರಟ್ಟು ಮಾಡಿದ ಫೋಟೋಸ್‌


ಸುಹಾನಾ ಖಾನ್‌ ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಕೊಂಡುಕೊಂಡಿದ್ದಾರೆ. ಈ ಭೂಮಿಯು  1.8 ಎಕರೆ ಇದೆ. ಈ ವ್ಯವಹಾರ ಇದೇ ಫೆಬ್ರವರಿ 12ರಂದು  ನಡೆದಿದ್ದು, ಇದಕ್ಕೆ ಸುಹಾನಾ ಖಾನ್​ 57 ಲಕ್ಷ ರೂಪಾಯಿ ಸ್ಟ್ಯಾಂಪ್​ಡ್ಯೂಟಿ ಭರ್ತಿ ಮಾಡಿದ್ದಾರೆ. ಈಕೆ ಈ ವ್ಯಾಪಾರ ವಹಿವಾಟನ್ನು ಮುಂಬೈನ ಪ್ರತಿಷ್ಟಿತ ಅಲಿಭಾಗ್​ನಲ್ಲಿ ನಡೆಸಿದಾಳೆ.  ಅಲ್ಲಿ ಉಸಿರಾಡೋಕೂ ಟ್ಯಾಕ್ಸ್ ಕಟ್ಟಬೇಕು ಎನ್ನುವ ಪ್ರದೇಶದಲ್ಲಿ ಪ್ರಾಪರ್ಟಿ ಪರ್ಚೇಸ್ ಮಾಡಿದ್ದಾರೆ.


ಕಳೆದ ವರ್ಷದಂತೆ ಈಗಲೂ ಇದೊಂದು ಸಾಧನೆ ಅಲ್ಲದೇ ಇನ್ನೇನುಯೆಂಬ ಚರ್ಚೆಯನ್ನ ಸಾಮಾಜಿಕ ಜಾಲತಾಣ ಶುರುವಾಗಿದೆ.  ಸುಹಾನಾ ಖಾನ್‌ ಮಾಡಿರುವುದು ಕೇವಲ ಒಂದೇ ಸಿನಿಮಾ ಆದರೂ ಈಕೆಯ ಚಿತ್ರದ ಬಗ್ಗೆ ಅಷ್ಟು ಚರ್ಚೆಯಾಗಿಲ್ಲ. ಆದರೆ ಸದ್ಯ  ಈಕೆಯ ಆಸ್ತಿ ಮೋಹದ ಮೂಲಕ ಟೋಲರ್ಸ್‌ ದಾಹವನ್ನು ಕಡಿಮೆ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.