Salaar Vs Dunki : ರಿಲೀಸ್‌ಗೂ ಮುನ್ನವೇ ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ನಟನೆಯ ʼಡಂಕಿʼ ಸಿನಿಮಾ ಪ್ಯಾನ್‌ ಇಂಡಿಯಾ ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ʼಸಲಾರ್‌ʼ ಹಿಂದಿಕ್ಕಿದೆ. ಯೂಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಸಲಾರ್‌ಗೆ ಡಂಕಿ ಟಕ್ಕರ್‌ ನೀಡಿದೆ. 


COMMERCIAL BREAK
SCROLL TO CONTINUE READING

ಹೌದು.. ಡಿ.22 ರಂದು ಬಾಕ್ಸ್ ಆಫೀಸ್‌ನಲ್ಲಿ ಘರ್ಷಣೆ ಶುರುವಾಗಲಿದೆ. ಡಂಕಿ ಸಿನಿಮಾ ಬಿಡುಗಡೆಯಾದ ಮರುದಿನ ಸಲಾರ್ ಸಿನಿಮಾ ರಿಲೀಸ್‌ ಆಗಲಿದ್ದು ಸಿನಿ ಪ್ರೇಕ್ಷಕರಿಗೆ ಡಬಲ್‌ ಧಮಾಕ ಸಿಕ್ಕಿದೆ. ಅಲ್ಲದೆ, ಇಬ್ಬರು ದಿಗ್ಗಜ ನಟರ ಸಿನಿಮಾಗಳು ಮುಖಾಮುಖಿಯಾಗುತ್ತಿದ್ದು, ಬಾಕ್ಸ್‌ ಆಫೀಸ್‌ ಮೇಲೆ ಭೀಕರ ಪರಿಣಾಮ ಬೀರಲಿದೆ.


ಇದನ್ನೂ ಓದಿ:ಖಾಸಗಿ ಫೋಟೋಸ್‌ ಕ್ಲಿಕ್‌, ಮಹಿಳೆ ಆತ್ಮಹತ್ಯೆ : ಪುಷ್ಪಾ ಚಿತ್ರ ನಟ ಜಗದೀಶ್‌ ಬಂಧನ..!


ಸಧ್ಯ ರಿಲೀಸ್‌ಗೂ ಮುನ್ನವೇ ಡಂಕಿ ಸಿನಿಮಾ ಸಲಾರ್‌ ಸಿನಿಮಾದ ದಾಖಲೆ ಮುರಿದಿದೆ. ಯಸ್‌.. ಡಿಸೆಂಬರ್‌ 5 ರಂದು ಬಿಡುಗಡೆಯಾದ ಡಂಕಿ ಟ್ರೈಲರ್‌ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟ್ರೇಲರ್ ಆಗಿ ಹೊರಹೊಮ್ಮಿದ್ದು, ಸಲಾರ್‌ ದಾಖಲೆ ಮುರಿದಿದೆ. 


ಡಂಕಿ ಹಿಂದಿ ಟ್ರೇಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 62 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ಡಿ.1 ರಂದು ರಿಲೀಸ್‌ ಆದ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಟ್ರೈಲರ್ ಅನ್ನು 24 ಗಂಟೆಗಳಲ್ಲಿ 53.75 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 


ಇದನ್ನೂ ಓದಿ:ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..


ತ್ರೀ ಈಡಿಯಟ್ಸ್ ಮತ್ತು ಪಿಕೆ ಚಿತ್ರಗಳ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ಡಂಕಿಯನ್ನು ನಿರ್ದೇಶಿಸಿದ್ದಾರೆ. ಡಂಕಿ ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಜೋಡಿಯ ಮೊದಲ ಚಿತ್ರ. ಪ್ರಭಾಸ್ ಅಭಿನಯದ ಸಲಾರ್ ಚಿತ್ರವನ್ನು ಕೆಜಿಎಫ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


ಡಂಕಿಯಲ್ಲಿ ಶಾರುಖ್ ಖಾನ್‌ ಹಾರ್ಡಿ ಅಕಾ ಹಾರ್ದ್ಯಾಲ್ ಸಿಂಗ್ ಧಿಲ್ಲೋನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಮತ್ತು ಕಾಂತಾರ ಸೂಪರ್ ಹಿಟ್ ಚಿತ್ರಗಳ ನಂತರ ಹೋಂಬಾಳೆ ಫಿಲಂಸ್‌ನ ಸಾಲರ್ ಎರಡು ಭಾಗಗಳಲ್ಲಿ ಥಿಯೇಟರ್‌ಗಳಲ್ಲಿ ಬರಲಿದೆ. ಚಿತ್ರದಲ್ಲಿ ಶ್ರುತಿ ಹಾಸನ್, ಜಗಪತಿ ಬಾಬು ಮತ್ತು ಈಶ್ವರಿ ರಾವ್ ಸೇರಿದಂತೆ ಇತರ ತಾರಾಗಣ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.