ಶಾರುಖ್ ಖಾನ್ ʼಜವಾನ್ʼ ಮುಂಗಡ ಬುಕ್ಕಿಂಗ್ ಆರಂಭ..! ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
Jawan advance booking : ಪಠಾಣ್‌ನ ಯಶಸ್ಸಿನ ನಂತರ ಕಿಂಗ್ ಖಾನ್ ಅಭಿಮಾನಿಗಳು ಜವಾನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದೀಗ ಶಾರುಖ್ ಪ್ಯಾನ್ಸ್ಗೆ ಸಿಹಿ ಸುದ್ದಿ ಇದೆ. ಅಟ್ಲಿ ನಿರ್ದೇಶನದ `ಜವಾನ್` ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Jawan ticket booking : ಶಾರುಖ್ ಖಾನ್ ಅಭಿನಯದ 'ಜವಾನ್' ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಪಠಾಣ್‌ನ ಯಶಸ್ಸಿನ ನಂತರ ನಟ ಶಾರುಖ್ ಖಾನ್ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ. ಅಲ್ಲದೆ, 'ಜವಾನ್' ಚಿತ್ರದ ಮುಂಗಡ ಬುಕ್ಕಿಂಗ್ ಸಹ ಈಗಾಗಲೇ ಆರಂಭವಾಗಿದೆ.
ಹೌದು.. ಈ ಕುರಿತು ಜವಾನ್‌ನ ಪ್ರೊಡಕ್ಷನ್ ಹೌಸ್‌ಗೆ ಹತ್ತಿರವಿರುವ ಮೂಲವೊಂದು ಮಾಹಿತಿ ನೀಡಿದ್ದು, ಚಿತ್ರದ ಮುಂಗಡ ಬುಕಿಂಗ್ ಯುಎಸ್, ಯುಎಇ, ಓಮನ್, ಆಸ್ಟ್ರೇಲಿಯಾ ಮತ್ತು ಜರ್ಮನಿಯಲ್ಲಿ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.. ಜಾಗತಿಕವಾಗಿ ಸಿನಿಮಾ ರಿಲೀಸ್ ಮಾಡುವ ಉದ್ದೇಶದಿಂದ ಚಿತ್ರತಂಡ ಈ ಪ್ಲಾನ್ ಮಾಡಿದೆ.
ಇದನ್ನೂ ಓದಿ: ರಾಧನಾ ರಾಮ್ ಇನ್ಮುಂದೆ ʼಆರಾಧನಾʼ : ಹೆಸರು ಬದಲಿಸಿಕೊಂಡ ನಟಿ ಮಾಲಾಶ್ರೀ ಪುತ್ರಿ
"ಜವಾನ್" ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಬಹು ನಿರೀಕ್ಷೆ ಪಡೆದುಕೊಂಡಿದೆ. ವೆಂಕಿ ರಿವ್ಯೂಸ್ ಮತ್ತು ಸ್ಯಾಕ್ನಿಲ್ಕ್ ಪ್ರಕಾರ, 289 ಸ್ಥಳಗಳಿಂದ $74.2K ಮೌಲ್ಯದ 4,800 ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಮಾಹಿತಿ ಇದೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಸ್ಕ್ರೀನ್‌ಗಳು ಹೆಚ್ಚಾಗಲಿವೆ.
'ಜವಾನ್' ಚಿತ್ರವನ್ನು ಕಾಲಿವುಡ್ ಖ್ಯಾತ ಡೈರೆಕ್ಟರ್ ಅಟ್ಲಿ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ, ನಯನತಾರಾ, ವಿಜಯ್ ಸೇತುಪತಿ ನಟಿಸಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.