Shah Rukh Khan : ಶಾರುಖ್ ಖಾನ್ ಅಭಿನಯದ 'ಜವಾನ್' ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿರುವ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಜಾಗತಿಕವಾಗಿ ಹಿಂದಿ ಚಿತ್ರರಂಗದ ಸಾರ್ವಕಾಲಿಕ ಟಾಪ್ ಗಳಿಕೆ ಕಂಡ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ ಮತ್ತು ಶಾರುಖ್ ಖಾನ್ ಅವರ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿದೆ. ಸಧ್ಯ ಸಿನಿಮಾದ ಯಶಸ್ಸಿನ ಬೆನ್ನಲ್ಲೆ ಚಿತ್ರತಂಡ ಅಭಿಮಾನಿಗಳಿಗೆ ಬಿಗ್‌ ಗಿಫ್ಟ್‌ ನೀಡಿದೆ.


COMMERCIAL BREAK
SCROLL TO CONTINUE READING

ಒಂದೇ ವರ್ಷದಲ್ಲಿ ಬಿಟೌನ್‌ ಕಿಂಗ್‌ ಶಾರುಖ್‌ ಖಾನ್‌ ನಟನೆಯ ಎರಡು ಸಿನಿಮಾಗಳು 1000 ಕೋಟಿ ಗಳಿಕೆ ಕಂಡಿವೆ. ಈ ಮೂಲಕ ಬಾದ್‌ ಶಾ ದಾಖಲೆ ನಿರ್ಮಿಸಿದ್ದಾರೆ. ಪಠಾಣ್‌ ಸಿನಿಮಾ ನಂತರ ಜವಾನ್‌ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ 1000 ಕಂಡು ಗೆದ್ದು ಬೀಗಿದೆ. ಇದೀಗ ಚಿತ್ರತಂಡ ಅಭಿಮಾನಿಗಳಿಗಾಗಿ ಬಿಫ್‌ ಆಫರ್‌ ಘೋಷಣೆ ಮಾಡಿದೆ.


ವಿಮರ್ಶೆ : ಬಹುನಿರೀಕ್ಷಿತ ʼಬಾನದಾರಿಯಲಿʼ ಇಂದು ತೆರೆಗೆ, ಹೇಗಿದೆ ಸಿನಿಮಾ


ಹೌದು.. ಜವಾನ್‌ ಚಿತ್ರತಂಡ ಬೈ 1 ಗೆಟ್ 1 ಆಫರ್‌ ನೀಡಿದೆ. ಈ ಕುರಿತು ನಟ ಶಾರುಖ್‌ ಖಾನ್‌ ತಮ್ಮ X (ಹಿಂದೆ Twitter) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. #AskSRK ಸೆಷನ್‌ ನಂತರ ಶಾರುಖ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಸುದ್ದಿಯನ್ನು ಬಹಿರಂಗಪಡಿಸಿದರು. ಜವಾನ್‌ ಒಂದು ಟಿಕೆಟ್‌ ಪಡೆದರೆ ಮತ್ತೊಂದು ಉಚಿತವಾಗಿ ನೀಡುವುದಾಗಿ ತಿಳಿಸಿದರು.


ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ಪ್ರಕಾರ, ಅಟ್ಲೀ ನಿರ್ದೇಶನದ ಶಾರುಖ್ ಖಾನ್ ಅಭಿನಯದ 'ಜವಾನ್' ಕೇವಲ ಇಪ್ಪತ್ತು ದಿನಗಳಲ್ಲಿ 1022 ಕೋಟಿ ಗಳಿಸಿದೆ ಎನ್ನಲಾಗಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಾಣದ 'ಜವಾನ್' ಸಿನಿಮಾವನ್ನು ಗೌರವ್ ವರ್ಮಾ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಸೆಪ್ಟೆಂಬರ್ 7 ರಂದು ಪ್ರಪಂಚದಾದ್ಯಂತದ ತೆರೆಕಂಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.