ಮುಂಬೈ: ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ (drugs on cruise case) ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಜಾಮೀನಿನ ನಂತರ ಶಾರುಖ್ ಖಾನ್ ಮೊದಲ ಬಾರಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.  


COMMERCIAL BREAK
SCROLL TO CONTINUE READING

ಅಕ್ಟೋಬರ್ 3 ರಂದು ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಿದಾಗ ಶಾರುಖ್ ಖಾನ್ (Shah Rukh Khan) ಕಠಿಣ ಸಮಯವನ್ನು ಎದುರಿಸಿದರು. ಮೂರು ವಾರಗಳ ನಂತರ ಸ್ಟಾರ್ ಕಿಡ್ ಜಾಮೀನಿನ ಮೇಲೆ ಹೊರಬಂದರೂ, ನಟ ಸಾರ್ವಜನಿಕವಾಗಿ ದೂರವಿದ್ದರು. 


ಆದರೆ, ಶಾರುಖ್ ಈಗ ನಿಧಾನವಾಗಿ ಕೆಲಸಕ್ಕೆ ಮರಳುತ್ತಿದ್ದಾರೆ. ಕಳೆದ ತಿಂಗಳು ಈವೆಂಟ್‌ನಲ್ಲಿ ಕಾಣಿಸಿಕೊಂಡ ನಂತರ,  ಈಗ ಆರ್ಯನ್‌ನ (Aryan Khan) ಜಾಮೀನಿನ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮೊದಲ ಬಾರಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.


 


 

 

 

 



 

 

 

 

 

 

 

 

 

 

 

A post shared by Shah Rukh Khan (@iamsrk)


 


ತಮ್ಮ ಮಗ ಆರ್ಯನ್ ಖಾನ್ ಜೈಲಿನಲ್ಲಿದ್ದಾಗ ಶಾರುಖ್ ಖಾನ್ ತೀವ್ರ ಚಿಂತಿತರಾಗಿದ್ದರು. ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಅವರು ತಮ್ಮ ಮಗನನ್ನು ಇರಿಸಲಾಗಿರುವ ಆರ್ಥರ್ ರೋಡ್ ಜೈಲಿಗೆ ಭೇಟಿ ನೀಡಿದರು. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ಶಾರುಖ್ ಕೆಲಸಕ್ಕೆ ಮರಳುತ್ತಿದ್ದಾರೆ. 


ಶಾರುಖ್ ತಮ್ಮ ಪತ್ನಿ ಗೌರಿ ಖಾನ್ (Gauri Khan) ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆರ್ಯನ್ ಜಾಮೀನಿನ ನಂತರ ಇದು ಅವರ ಮೊದಲ ಪೋಸ್ಟ್ ಆಗಿದೆ. ದಂಪತಿಗಳ ಅಭಿಮಾನಿಗಳು ಇದನ್ನು ಮೆಚ್ಚಿದ್ದಾರೆ. ಹಲವಾರು ಹೃದಯದ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ ಅಲ್ಲದೆ, ಇತರರು ಕಾಮೆಂಟ್‌ಗಳ ವಿಭಾಗದಲ್ಲಿ "King is back" ಎಂದು ಬರೆದಿದ್ದಾರೆ. 


ಇದನ್ನೂ ಓದಿ: ಅನಿರೀಕ್ಷಿತವಾಗಿ ವಿಚ್ಛೇದನ ಪಡೆದ ದಕ್ಷಿಣಭಾರತದ ಖ್ಯಾತ ನಟ-ನಟಿಯರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.