Amid Aryan Khan dating : ಪಾಕ್ ನಟಿ ಜೊತೆ ಶಾರುಖ್ ಮಗ... ಡೇಟಿಂಗ್ ಮಾಡ್ತಿದಾರಾ ಇಬ್ರು..?
ಇಷ್ಟು ದಿನ ಶಾರುಖ್ ಖಾನ ಮಗ ಆರ್ಯನ್ ಖಾನ್, ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದ ಎಂದು ಸುದ್ದಿಯಾಗಿತ್ತು. ಇದೀಗ ಇಂಟರ್ನೆಟ್ನಲ್ಲಿ ಹೊಸ ಮ್ಯಾಟರ್ ಒಂದು ಹರಿದಾಡುತ್ತಿದ್ದು, ಪಾಕಿಸ್ತಾನ್ ನಟಿ ಸಾದಿಯಾ ಖಾನ್ ಹಾಗೂ ಆರ್ಯನ್ ನಡುವೆ ಸಮ್ಥಿಂಗ್ ಸಮ್ಥಿಂಗ್ ನಡಿತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
Amid Aryan Khan dating : ಇಷ್ಟು ದಿನ ಶಾರುಖ್ ಖಾನ ಮಗ ಆರ್ಯನ್ ಖಾನ್, ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದ ಎಂದು ಸುದ್ದಿಯಾಗಿತ್ತು. ಇದೀಗ ಇಂಟರ್ನೆಟ್ನಲ್ಲಿ ಹೊಸ ಮ್ಯಾಟರ್ ಒಂದು ಹರಿದಾಡುತ್ತಿದ್ದು, ಪಾಕಿಸ್ತಾನ್ ನಟಿ ಸಾದಿಯಾ ಖಾನ್ ಹಾಗೂ ಆರ್ಯನ್ ನಡುವೆ ಸಮ್ಥಿಂಗ್ ಸಮ್ಥಿಂಗ್ ನಡಿತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹೌದು.. ಸ್ಟಾರ್ ಕಿಡ್ಸ್ ಏನೇ ಮಾಡಿದ್ರು ನೆಟ್ಟಿಗರು ಮಾತ್ರ ಅದನ್ನು ತಮ್ಮದೇ ರೀತಿಯಲ್ಲಿ ಅಳೆಯುತ್ತಿದ್ದಾರೆ. ಇಷ್ಟು ದಿನ ಆರ್ಯನ್ ಖಾನ್ ನೋರಾ ಜೊತೆ ಡೇಟಿಂಗ್ ಮಾಡುತ್ತಿದ್ದ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಈ ಕುರಿತು ಕೆಲವೊಂದಿಷ್ಟು ಫೋಟೋಗಳು ಹರಿದಾಡುತ್ತಿದ್ದವು. ಇದೀಗ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದು ಕೂಡಾ ವೈರಲ್ ಆಗಿರುವ ಫೋಟೋದಿಂದಲೇ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನ 50 ಸೆಲೆಬ್ರೆಟಿಗಳಿಂದ ರಿಲೀಸ್ ಆಯ್ತು ‘ಕೆಟಿಎಂ’ ಟೀಸರ್..!
ಪಾಕಿಸ್ತಾನಿ ನಟಿ ಸಾದಿಯಾ ಖಾನ್ ಜೊತೆ ಆರ್ಯನ್ ಖಾನ್ ಇರುವ ಚಿತ್ರವೊಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಆರ್ಯನ್ ಸಾದಿಯಾ ಅವರನ್ನು ಹಗ್ ಮಾಡಿ ಕ್ಯಾಮೆರಾಗೆ ಪೋಸ್ ನೀಡಿದ್ದನ್ನು ಕಾಣಬಹುದು. ಇದೀಗ ಈ ಫೋಟೋ ನೋಡಿದ ನೆಟಿಜನ್ಸ್ ಇವರಿಬ್ಬರ ನಡುವೆ ಸಂಬಂಧವನ್ನು ಎಣೆದಿದ್ದಾರೆ. ಅಲ್ಲದೆ, ಇಂಟರ್ನೆಟ್ನಲ್ಲಿ ಈ ವೈರಲ್ ಆಗಿದೆ.
ವಿಶೇಷ ಅಂದ್ರೆ ಈ ಫೋಟೋವನ್ನು ಸ್ವತಃ ಸಾದಿಯಾ ತನ್ನ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಶೇರ್ ಮಾಡಿಕೊಂಡಿದ್ದಳು. ಅಲ್ಲದೆ, "ಹೊಸ ವರ್ಷದ ಮುನ್ನಾದಿನದಂದು.. ಥ್ರೋಬ್ಯಾಕ್" ಅಂತ ಶೀರ್ಷಿಕೆ ನೀಡಿದ್ದಾರೆ. ಇನ್ನು ಫೋಟೋ ನೋಡಿದ ಕಿಂಗ್ ಖಾನ್ ಫ್ಯಾನ್ಸ್ ಆರ್ಯನ್ ಖಾನ್ ತಂದೆಯ ಪ್ರತಿರೂಪ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ನೋ ವೇ ಅಂತ ತಿರಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ: ʼಕೇಡಿʼ ಧ್ರುವ ಸರ್ಜಾಗಾಗಿ 70ರ ದಶಕದ ಬೆಂಗಳೂರು ರೀ ಕ್ರಿಯೇಟ್..!
ಈ ವರ್ಕ ವಿಚಾರವಾಗಿ ಬಂದ್ರೆ, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಜೊತೆ ಮೊದಲ ಬಾರಿಗೆ ಆರ್ಯನ್ ನಿರ್ದೇಶಕನಾಗಿ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಸ್ಟಾರ್ ಬಾಯ್ ಸ್ವತಃ ಸ್ಕ್ರಿಪ್ಟ್ ಬರೆದಿದ್ದು, ತಾನೆ ಅದನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಸ್ವತಃ ಆರ್ಯನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಕೂಡ ಜೋಯಾ ಅಖ್ತರ್ ಅವರ ನಿರ್ದೇಶನದ ದಿ ಆರ್ಚೀಸ್ನೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.