Pathaan Movie Ticket price : ಬಾಲಿವುಡ್‌ ಕಿಂಗ್‌ ಶಾರುಖ್‌ ಖಾನ್‌ ಪಠಾಣ್ ಸಿನಿಮಾ ಜನವರಿ 25 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲಿ ಪಠಾಣ್‌ ಧೂಳೆಬ್ಬಿಸುತ್ತಿದೆ. ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಮೊದಲ ದಿನವೇ 100 ಕೋಟಿ ರೂ. ಗಳಿಕೆ ಮಾಡಲಿದೆ ಎಂಬ ಟಾಕ್‌ ಎದ್ದಿದೆ. ಇದೀಗ ಪಠಾಣ್ ಚಿತ್ರದ ಟಿಕೆಟ್ ದರದ ಬಗ್ಗೆ ಚರ್ಚೆ ನಡೆಯುತ್ತಿದೆ. ಪಠಾಣ್ ಸಿನಿಮಾ ಒಂದೊಂದು ಏರಿಯಾದಲ್ಲಿ ವಿಭಿನ್ನ ಟಿಕೆಟ್‌ ದರದಲ್ಲಿ ಬಿಡುಗಡೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಅನೇಕ ಸ್ಥಳಗಳಲ್ಲಿ, ಟಿಕೆಟ್ ದರವು ರೂ. 2100 ಇದ್ದರೆ ಕೆಲವೆಡೆ ರೂ. 55, ರೂ. 88 ಕ್ಕೆ ಮಾತ್ರ ಲಭ್ಯವಿದೆ. ಅದು ಎಲ್ಲಿದೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಸದ್ಯ ಹೈದರಾಬಾದಿನ ʼದೇವಿʼ ಥಿಯೇಟರ್‌ನಲ್ಲಿ 55 ರಿಂದ 88 ರೂಪಾಯಿ ಕೊಟ್ಟು ಪಠಾಣ್ ಸಿನಿಮಾ ನೋಡಬಹುದು. ಅಷ್ಟೇ ಅಲ್ಲ, 4ಕೆ ಲೇಸರ್, ಡಾಲ್ಬಿ ಅಟ್ಮಾಸ್‌ನಲ್ಲಿಯೂ ಚಲನಚಿತ್ರವನ್ನು ವೀಕ್ಷಿಸಬಹುದು, ಆದ್ರೆ ಇದು ಹೈದರಾಬಾದ್‌ ನಿವಾಸಿಗಳಿಗೆ ಮಾತ್ರ ಆಯ್ಕೆಯಾಗಿದೆ. ಆದ್ರೆ ಕರ್ನಾಟಕದಲ್ಲಿ ದರ ಕಾಮನ್‌ ಇರುತ್ತವೆ. ಮುಂದೆ ಇದೆ ರೀತಿ ಬದಲಾಗುತ್ತಾ ಎನ್ನುವುದನ್ನು ಕಾಯ್ದು ನೋಡಬೇಕಿದೆ.


ಇದನ್ನೂ ಓದಿ: Darshan Farm house : ನಟ ದರ್ಶನ್ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ..!


ದೆಹಲಿಯಲ್ಲೂ ಸಹ ಶಾರುಖ್-ದೀಪಿಕಾ ಸಿನಿಮಾವನ್ನು ಕೇವಲ ರೂ.88ಕ್ಕೆ ನೋಡಬಹುದು. ಕರೋಲ್ ಬಾಗ್‌ನಲ್ಲಿರುವ ಲಿಬರ್ಟಿ ಚಿತ್ರಮಂದಿರದಲ್ಲಿ 'ಪಠಾಣ್' ನ 2D ನಾನ್-ಐಮ್ಯಾಕ್ಸ್ ಆವೃತ್ತಿಯ ಟಿಕೆಟ್ ಕೇವಲ ರೂ. ಇದು 88 ನಿಗಧಿಯಾಗಿದೆ. ಮುಂಬೈನಲ್ಲಿ ಟಿಕೆಟ್ ದರ ರೂ. 180 ಮೇಲೆ.. ಕೋಲ್ಕತ್ತಾದಲ್ಲಿ ರೂ. 200ಕ್ಕಿಂತ ಹೆಚ್ಚಿದೆಯಂತೆ. ಕೆಲವೆಡೆ ಟಿಕೆಟ್ ದರದ ದಾಖಲೆಗಳೆಲ್ಲ ಮುರಿದು ಬಿದ್ದಿವೆಯಂತೆ. ‘ಪಠಾಣ್’ಗೆ 2100 ರೂಪಾಯಿ ಕೊಡಲು ಜನ ತಯಾರಾಗಿರುವಂತೆ ತೋರುತ್ತಿದೆ. ಹಲವು ವರ್ಷಗಳ ನಂತರ ಶಾರುಖ್ ಮತ್ತೆ ಬೆಳ್ಳಿತೆರೆಯಲ್ಲಿ ಅಬ್ಬರಿಸಲಿದ್ದಾರೆ. ಈ ಚಿತ್ರ ಶಾರುಖ್‌ಗೆ ಯಶಸ್ಸನ್ನು ನೀಡುತ್ತಾ ಅನ್ನೋದನ್ನು ಕಾಯ್ದು ನೋಡಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.