`ಆ ಸ್ಥಳದಲ್ಲಿ ಸಾಯುವುದೇ ನನ್ನ ಕನಸು..` ಕಿಂಗ್ ಖಾನ್ ಆಸೆ ಕೇಳಿ ಫ್ಯಾನ್ಸ್ ಭಾವುಕ..! ನಿಜವಾದ ನಟ ಅಂದ್ರೆ ನೀವೇ SRK...
Shah Rukh Khan King movie : ಶಾರುಖ್ ಖಾನ್ ಬಾಲಿವುಡ್ನ ಸ್ಟಾರ್ ನಟರಲ್ಲಿ ಒಬ್ಬರು.. ಕಿಂಗ್ ಖಾನ್ಗೆ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗ ಇದೆ ಎನ್ನುವ ವಿಚಾರ ಹೊಸದಾಗಿ ಹೇಳಬೇಕಿಲ್ಲ.. ಇತ್ತೀಚಿಗೆ ಜವಾನ್ ಮತ್ತು ಪಠಾಣ್ ಸಿನಿಮಾದ ಮೂಲಕ ದಾಖಲೆ ಬರೆದಿದ್ದ SRK ಇತ್ತೀಚಿಗೆ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
SRK about death : ಇತ್ತೀಚಿನ ಸಂದರ್ಶನವೊಂದರಲ್ಲಿ, ಶಾರುಖ್ ತಮ್ಮ ಕೊನೆಯ ದಿನದವರೆಗೂ ನಟಿಸಲು ಬಯಸುತ್ತೇನೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.. ಇದು ಅವರಿಗೆ ನಟನೆ ಮತ್ತು ಸಿನಿಮಾ ಮೇಲಿರುವ ಆಸಕ್ತಿಯನ್ನು ತೋರಿಸುತ್ತದೆ. ಸಧ್ಯ ಕಿಂಗ್ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ ಸಂದರ್ಶನದಲ್ಲಿ ಮಾತನಾಡಿದ ಶಾರುಖ್, ತಮ್ಮ ಜೀವನದ ಕೊನೆಯ ವಿಚಾರಗಳ ಬಗ್ಗೆ ಮಾತನಾಡಿದರು.. ಅಲ್ಲದೆ, ತಮ್ಮ ಸಾವು ಹೇಗಿರಬೇಕು, ಎಲ್ಲಿ ಅಂತ್ಯವಾಗಬೇಕು ಎನ್ನುವ ವಿಚಾರದ ಕುರಿತು ಹಂಚಿಕೊಂಡಿದ್ದಾರೆ.. ಏಕಾಎಕಿ ಕಿಂಗ್ ಖಾನ್ ನೀಡಿರುವ ಈ ಮಾತುಗಳು ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ..
ಇದನ್ನೂ ಓದಿ:ಜಿಮ್‌ನಲ್ಲಿ ಬೆವರಿಳಿಸಿದ ಸುಹಾನಾ..! ಕಿಂಗ್ ಖಾನ್ ಮಗಳ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ..
ಲೊಕಾರ್ನೊ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟ ಶಾರುಖ್ ಖಾನ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು. ಈ ವೇಳೆ ಅವರಿಗೆ ಶಾಶ್ವತವಾಗಿ ನಟಿಸಲು ಬಯಸುತ್ತೀರಾ..? ಎಂಬ ಪ್ರಶ್ನೆ ಕೇಳಲಾಯಿತು.. ಆಗ ಅವರು.. ನಾನು ಸಾಯುವ ದಿನದವರೆಗೂ ನಟನಾಗಿರಲು ಇಷ್ಟಪಡುತ್ತೇನೆ, ಹೇಗೆ ಅಂದ್ರೆ, ಸಿನಿಮಾವೊಂದರಲ್ಲಿ ನಟಿಸುತ್ತಿರುವಾಗ ಡೈರೆಕ್ಟರ್ ಕಟ್ ಹೇಳುತ್ತಾರೆ.. ಆಗ ನಾನು ಎದ್ದೇಳುವುದಿಲ್ಲ... ನಟಿಸುವಾಗಲೇ ನನ್ನ ಜೀವನ ಅಂತ್ಯವಾಗಬೇಕು ಎನ್ನುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು.. ಸಧ್ಯ ಶಾರುಖ್ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ..
ಇನ್ನು ಸಿನಿಮಾ ವಿಚಾರವಾಗಿ ಹೇಳುವುದಾದರೆ, ಶಾರುಖ್ ಖಾನ್ ಸಧ್ಯ ಸುಜೋಯ್ ಘೋಷ್ ಅವರ ನಿರ್ದೇಶನ ಮುಂಬರುವ ಬಹುನಿರೀಕ್ಷಿತ ಸಿನಿಮಾ ಕಿಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ ಸುಹಾನಾ ಖಾನ್ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.. ಈ ಚಿತ್ರದ ಕುರಿತು ಹೆಚ್ಚಿನ ಅಪ್‌ಡೇಟ್ಸ್ ಇನ್ನಷ್ಟೇ ತಿಳಿದು ಬರಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ