ʻಶಕ ಲಕ ಬೂಮ್ ಬೂಮ್ʼನಿಂದ ಫೇಮಸ್ ಆಗಿ.. ʻಕೋಯಿ ಮಿಲ್ ಗಯಾʼ ಸಿನಿಮಾದಲ್ಲಿ ನಟಿಸಿದ್ದ ಈ ಬಾಲಕಿ ಇಂದು ಸ್ಟಾರ್ ನಟಿ! ಯಾರು ಗುರುತಿಸುವಿರಾ?
Shak Laka Boom Boom Child Actress: `ಶಕ ಲಕ ಬೂಮ್ ಬೂಮ್` ನಿಂದ ಖ್ಯಾತಿ ಪಡೆದ ಈ ಮುದ್ದಾದ ಪುಟ್ಟ ಹುಡುಗಿ ಇಂದು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ.
Hansika Motwani Childhood Photo: ಸಂಜು ಅವರ ಆತ್ಮೀಯ ಸ್ನೇಹಿತರಾಗಿದ್ದ 'ಶಕ ಲಕ ಬೂಮ್ ಬೂಮ್' ಸೀರಿಯಲ್‌ನ ಆ ಮುದ್ದಾದ ಹುಡುಗಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಆಕೆಗೆ ಈಗ 33 ವರ್ಷ. ಹಲವಾರು ವಿವಾದಗಳಿಗೆ ಸಿಲುಕಿಕೊಂಡಿದ್ದ ಖ್ಯಾತ ನಟಿ.
'ಶಕ ಲಕ ಬೂಮ್ ಬೂಮ್' ನಿಂದ ಖ್ಯಾತಿ ಪಡೆದ ಈ ಮುದ್ದಾದ ಪುಟ್ಟ ಹುಡುಗಿ ಇಂದು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಗುಳಿ ಕೆನ್ನೆಯ ಈ 33 ವರ್ಷದ ನಟಿಯ ಮೋಹಕ ನೋಟಕ್ಕೆ ಮನಸೋಲದವರಿಲ್ಲ.
ಈ ಪುಟ್ಟ ಬಾಲಕಿ ಬೇರಾರೂ ಅಲ್ಲ ಹನ್ಸಿಕಾ ಮೋಟ್ವಾನಿ. ಆಗಸ್ಟ್ 9, 1991 ರಂದು ಮುಂಬೈನ ಸಿಂಧಿ ಕುಟುಂಬದಲ್ಲಿ ಹನ್ಸಿಕಾ ಮೋಟ್ವಾನಿ ಜನಿಸಿದರು. ಅವರ ತಂದೆ ಪ್ರದೀಪ್ ಮೋಟ್ವಾನಿ ಉದ್ಯಮಿ. ತಾಯಿ ವೈದ್ಯೆ ಮೋನಾ ಮೋಟ್ವಾನಿ, ಚರ್ಮರೋಗ ತಜ್ಞರಾಗಿದ್ದರು. ಆದರೆ ಹನ್ಸಿಕಾ ಚಿಕ್ಕವಳಿದ್ದಾಗ ಆಕೆಯ ಪೋಷಕರು ಬೇರ್ಪಟ್ಟರು.
ಇದನ್ನೂ ಓದಿ: ಶೋಭಿತಾ... ಸಮಂತಾ ತಂಗಿಯೇ? ನಾಗಚೈತನ್ಯ ಎರಡನೇ ಪತ್ನಿಯ ಹಿನ್ನೆಲೆ ಇಲ್ಲಿದೆ ನೋಡಿ
ಹನ್ಸಿಕಾ ಮೋಟ್ವಾನಿ ಕನ್ನಡದಲ್ಲಿಯೂ ಸಿನಿಮಾಗಳನ್ನು ಮಾಡಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಹಲವು ಬಾರಿ ವಿವಾದಕ್ಕೂ ಒಳಗಾಗಿದ್ದಾರೆ. ಹಾರ್ಮೋನ್ ಚುಚ್ಚುಮದ್ದಿನ ಕುರಿತಾದ ಇವರ ವಿವಾದ ಇಂದಿಗೂ ಸುದ್ದಿಯಲ್ಲಿದೆ. ಗ್ಲಾಮರಸ್ ಆಗಿ ಕಾಣಲು ಹನ್ಸಿಕಾ ಮೋಟ್ವಾನಿ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಹನ್ಸಿಕಾ ಮೋಟ್ವಾನಿ ಎಂಎಂಎಸ್ ಸೋರಿಕೆ ವಿವಾದವಂತೂ ಆಕೆಯ ಫ್ಯಾನ್ಸ್‌ಗೆ ಬಿಗ್ ಶಾಕ್ ನೀಡಿತ್ತು.
ಹನ್ಸಿಕಾ ಮೋಟ್ವಾನಿ ವೃತ್ತಿಜೀವನವನ್ನು ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು. 2000 ನೇ ಇಸವಿಯಲ್ಲಿ 'ಶಕ ಲಕ ಬೂಮ್ ಬೂಮ್' ಚಿತ್ರದಲ್ಲಿ ಕರುಣಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಶಕ ಲಕ ಬೂಮ್ ಬೂಮ್' ಪ್ರಮುಖ ಪಾತ್ರದ ಸಂಜು ಆತ್ಮೀಯ ಸ್ನೇಹಿತರಾಗಿದ್ದ ಕರುಣಾ. ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ನಟನೆಯ 'ಕೋಯಿ ಮಿಲ್ ಗಯಾ' ಚಿತ್ರದಲ್ಲಿ ಕೂಡ ಹನ್ಸಿಕಾ ಮೋಟ್ವಾನಿ ಬಾಲ ಕಲಾವಿದೆಯಾಗಿ ನಟಿಸಿದ್ದಾರೆ.
ಹನ್ಸಿಕಾ ಮೋಟ್ವಾನಿ ಕೂಡ ಕೆಲಕಾಲ ಸಿನಿರಂಗದಿಂದ ದೂರ ಉಳಿದಿದ್ದರು. 2007ರಲ್ಲಿ ಅಂದರೆ 4 ವರ್ಷಗಳ ನಂತರ ಮತ್ತೆ ಸಿನಿರಂಗಕ್ಕೆ ಮರಳಿದರು. ಈ ಬಾರಿ ಹಿಂದಿಯತ್ತ ಹೊರಳದೇ ದಕ್ಷಿಣದ ಕಡೆ ಮುಖ ಮಾಡಿದ್ದಾರೆ. ತೆಲುಗಿನ ‘ದೇಶಮುದುರು’ ಚಿತ್ರದಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: BBK11: ಈ ಬಾರಿ ಸುದೀಪ್ ಬದಲು ರಿಷಬ್ ಶೆಟ್ಟಿ ಬಿಗ್ ಬಾಸ್ ಕನ್ನಡ 11 ನಿರೂಪಣೆ ಮಾಡಲಿದ್ದಾರಾ?
ತನಗಿಂತ 18 ವರ್ಷ ಹಿರಿಯ ನಟ ಮತ್ತು ಗಾಯಕನೊಂದಿಗೆ ರೊಮ್ಯಾನ್ಸ್ ಮಾಡಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದರು ಎನ್ನಲಾಗುತ್ತದೆ. 16 ನೇ ವಯಸ್ಸಿನಲ್ಲಿ 'ಆಪ್ಕಾ ಸುರೂರ್' ಚಿತ್ರದಲ್ಲಿ ಹಿಮೇಶ್ ರೇಶಮಿಯಾ ಅವರ ಜೊತೆ ನಟಿಸಿದರು. ನಂತರ ಜನರು ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದರು.
ಡಿಸೆಂಬರ್ 4, 2022 ರಂದು ನಟಿ ಹನ್ಸಿಕಾ ಮೋಟ್ವಾನಿ ಜೈಪುರದ ಮುಂಡೋಟಾ ಫೋರ್ಟ್‌ನಲ್ಲಿ ತನ್ನ ಬಹುಕಾಲದ ಗೆಳೆಯ ಸೊಹೈಲ್ ಅವರ ಜೊತೆ ವಿವಾಹವಾದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.